ಕನ್ನಡ ಪರಮಾರ್ಥ ಸೋಪಾನ
ಕಿರುಬೆರಳಿನ ಮುದ್ರೆಯುಂಗುರ ಮುಂಗೈಯ | ಕರದಲ್ಲಿ ಕಂಕಣ ನಳಿತೋಳುಗಳ ||
ವರಚತುರ್ಭುಜ ಶಂಖಚಕ್ರದಿ ಮರೆವನ | ನಿರುತದಿ ಒಪ್ಪುವ ವ ಕರುಣಾಮೂರುತಿಯ
ಬಣ್ಣದ ತುಟಿ ಭಾವರಚನೆಯ ಸುಲಿಪಲ್ಲು | ಸಣ್ಣ ನಗೆಯ ನುಡಿ ಸವಿಮಾತಿನ ||
ಪುಣ್ಯ ಚರಿತ್ರನ ಪೊಳೆವ ಕಿರೀಟನ | ಕಣ್ಣು ಮನದಣಿಯದು ಕಂಸಾರಿ ಕೃಷ್ಣನ
ಮಂಗಳ ವರ ತುಂಗಭದ್ರದಿ ಮರೆವನ | ಅಂಗಜಪಿತ ಶ್ರೀ ಲಕ್ಷ್ಮೀಪತಿಯ ||
ಶೃಂಗಾರ ಮೂರುತಿ ಪುರಂದರ ವಿಠಲನ | ಕಂಗಳಿಂದ ಕಂಡೆ ಹಿಂಗಿತು ಭವಭಯ
ಪರಮಾತ್ಮನ ಸಗುಣ- ನಿರ್ಗುಣ ರೂಪ
( ರಾಗ- ಕಾಫೀ, ತಾಲ-ಕೇರನಾ )
ಕೂಸನು ಕಂಡೀರಾ ಜ್ಞಾನಿಗಳೆಲ್ಲ ಸಾಸಿರನಾಮದ ಶತಕೋಟಿ ತೇಜದ | ಸೂಸುವ ಸುಖಮಯ ಜ್ಞಾನದ ಕೂಸು
ಜ್ಞಾನಿಗಳ ಹೃದಯದಿ ಮಿನುಗುವ ಕೂಸು | ದೀನ ದಾಸರಿಗೆ ಕಾಣುವ ಕಸು
ತಾನೆ ಬಲ್ಲುದು ತನ್ನ ಮಹಿಮೆಯ ಕೂಸು | ಆಕಾರವಿದ್ದು ನಿರಾಕಾರ ಕೂಸು
ಘನವಾದ ಮಹಿಮೆಗೆ ಕಾರಣ ಕೂಸು | ಚಿನುಮಯ ಪುರಂದರ ವಿಠಲ ಕೂಸು
ಪರಮಾತ್ಮನ ದಿವ್ಯ ದರ್ಶನದಿಂದ ಕಂಗಳ ಬರ ಹಿಂಗುವದು ( ವಚನ ) ಹೊಳೆವ ಕೆಂಜೆಡೆಗಳ, ಮಣಿಮುಕುಟ ಒಪ್ಪುವ ಸುಲಿಪಲ್ಲ, ನಗೆ-ಮೊಗದ