ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕನ್ನಡ ಪರಮಾರ್ಥ ಸೋಪಾನ
ಆತ್ಮಾನುಭವಿಯು ಜಗತ್ತಿನ ಪಾತಕಗಳನ್ನು ಪರಿಹರಿಸುವನು (ರಾಗ-ಕಾಂಬೋವಿ, ತಾಲ- ದೀಪಚಂದಿ)
ನೋಡಿರಿ ಬ್ರಹ್ಮನಾಟವ | ನೀವು ನೋಡಬೇಕಾದರೆ ಮಾಡಿ ಗುರುವಿನ ಸೇವಾ
ಕಾಲಿಲ್ಲದೆ ನಡೆವುದು | ಕರವಿಲ್ಲದೆ ಹಿಡಿವುದು | ಗುಹ್ಯವಿಲ್ಲದೆ ಇಂದ್ರಿಯ ಸುಖಿಸುವದು ||
ಮೈಯೆಲ್ಲಾ ಮುಸುಕಿತು | ಮಲಮೂತ್ರ ಬಿಡಿಸಿತು | ಹುಯ್ಯಲಾಡುತ ಬಂದು ತಾನೆ ತಾನಾದದ್ದು
ಕಿವಿಯಿಲ್ಲದೆ ಕೇಳುವದು | ಬಾಯಿಲ್ಲದೆ ಉಂಬುವದು | ನಯನವಿಲ್ಲದೆ ನೋಟ ನೋಡುವದು ||
ತೈಲವಿಲ್ಲದ ಜ್ಯೋತಿ | ಬೈಲೊಳು ನಿಂತಿತು | ಬೈಲಿಗೆ ಬೈಲು ನಿರ್ಬೈಲ ತಾನಾದದ್ದು
ನೆಲೆಯಿಲ್ಲದ ಭೂಮಿಯ ಮೇಲೆ | ಎಲೆಯಿಲ್ಲದ ಗಿಡ ಹುಟ್ಟಿ | ದೊಡ್ಡದೊಂದು ಅದು ಹಣ್ಣಾಯಿತು ||
ತಲೆಯಿಲ್ಲದೆ ಪೊತ್ತು | ಬೆಲೆಯು ಇಲ್ಲದೆ ಮಾರಿ | ಬಾಧೆ ತಕ್ಕೊಂಡ ನಮ್ಮ ಕೂಡಲೂರೇಶಾ