ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪ್ರಕರಣ ಹನ್ನೆರಡು ಪರಮಾತ್ಮನ ನಾಮ (ಭಾಗ ೧)
ಪರಮಾತ್ಮನ ನಾಮಸ್ಮರಣೆಯೆ ಬ್ರಹ್ಮಜ್ಞಾನ ! (ರಾಗ-ದರಬಾರಿ, ತಾಲ-ತಾಲ)
ಇದೇ ಬ್ರಹ್ಮಜ್ಞಾನ ನೋಡಿಕೊ | ಸದಾನಂದ ಪರಮಾತ್ಮ ಬೋಧಮಯ
ನಿದಾನದೊಳು ನಿಜಹೃದಯ ಕಮಲದೊಳು | ಸುಧಾಕಿರಣ ಗುರುಪಾದವ ಕಾಣಲು
ಯೋಗಿಯಾಗಿ ಸಂಭೋಗವನಳಿದು | ರೋಗವಳಿದು ನಿಜರಾಗವ ನುಡಿಯಲು
ವಸುಧೆಯೊಳಗೆ ಶಿಶುನಾಳಧೀಶನ | ಹೆಸರ ಪೊಗಳಿ ಐದಕ್ಷರ ನುಡಿಯಲು
ಹಿಂದಿನ ಸಂತರು ತಪಸ್ಸಿನಿಂದ ದೇಹವನ್ನು ದಂಡಿಸದೆ ಕೇವಲ ನಾಮದ ನೆರವಿನಿಂದಲೆ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡರು
(ರಾಗ-ದರಬಾರಿ, ತಾಲ-ದೀಪಚಂದಿ)
ಓಂ ನಮಃ ಶಿವಾ ಎನ್ನಿರೋ ಒಯ್ಯಾರದಿ
ಓಂ ನಮಃ ಶಿವಾ ಎಂದು ಅಜಹರಿಸುರರೆಲ್ಲ | ಮುನ್ನ ಕೈವಲ್ಯವ ಪಡೆದರೆಂಬುದ ಕೇಳಿ
ಜಪತಪ ವ್ರತವ್ಯಾತಕೆ, ತಾಮಸವೆಂಬ | ಕಪಟ-ಭ್ರಾಂತಿಗಳ್ಯಾತಕೆ |
ಗುಪ್ತದಿ ಗುರುವಿನ ಚರಣಗಳ ಸ್ಮರಿಸಿ | ಮತಿಹೀನರಾಗದೆ ಹಗಲಿರುಳೆನ್ನದೆ
ವಾಸ ಪಕ್ಷಗಳ್ಯಾಕೆ, ಉಪವಾಸದಿಂ | ದೇಹದಂಡನವ್ಯಾತಕೆ ||
ನಾಶವಾಗುವ ದೇಹದ ವ್ಯಾಸವ ಬಿಡು ತಮ್ಮಾ | ಈಶನ ನೆನೆಯೋ ನೀ ಮೋಸವ ಹೊಂದದೆ