ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ ಹದಿನೈದು

ಅನುಭಾವದ ಉಗಮವೂ ಪ್ರಮಾಣಗಳೂ

ಅನುಭಾವದ ತಾತ್ವಿಕ ಪ್ರಮಾಣ

ನಿಜ ಊಹಿಸಬಾರದು ಸಂಪನ್ನಾ

ಅದು ವಚನಕೆ ಗೋಚರಮಲ್ಲೊಂದು | ಅದು ಮನಸಿಗೆ ವಿಷಯಮಲ್ಲೆಂದು ||

ಕೇಳು ಮತ್ತೊಂದು ಅನುವಿಂದ | ಪೇಳು ಉಪದೇಶಿಸಬೇಕದರಿಂದ

ಸತ್ಯಜ್ಞಾನ ಸುಖಾತ್ಮಕವೆಂದು | ನಿತ್ಯ ಪರಿಪೂರ್ಣತೆಯೆಂದು ||

ದೃಶ್ಯವಿಲಕ್ಷಣ ವೀಕ್ಷಿಸುದೆಂದು | ಜಾನಿಸಿ ಪೇಳಿತು ಶ್ರುತಿಗಳ ಮೊತ್ತ ||


ಅನುಭಾವದ ನೈತಿಕ ಪ್ರಮಾಣ ( ರಾಗ-ಸಾರಂಗ, ತಾಲ-ಕೇರ ವಾ)

ನಿಜ ಗುಹ್ಯದ ಮಾತು | ಸಾಧುರಿಗಲ್ಲದೆ ತಿಳಿಯದು ಗೊತ್ತು

ಕಣ್ಣಿಲೆ ಕಂಡು ಹೇಳದ ಮಾತು | ಪುಣ್ಯವಂತರಿಗಿದೆ ಹೊಳಿದೀತು ||

ಇನ್ನೊಬ್ಬರಿಗೇನ ತಿಳಿದೀತು | ಚಿನ್ಮಯದ ವಸ್ತು

ನೀತಿಗೆ ನಿಜವಾಗಿಹ ಮುಕುಟ | ಮಾತಿಗೆ ಮುಟ್ಟಿದವನೆ ಬಲು ನಿಗಟ |

ಮತಿಹೀನರಿಗೆ ಒಗಟ | ಯತಿಜನರಿಗೆ ಪ್ರಗಟ