ಕನ್ನಡ ಪರಮಾರ್ಥ ಸೋಪಾನ
ಸೋsಹಂ ಸೊನ್ನೆಯ ಮಾತನೆ ಕೇಳಿಕೊ | ಗುಹ್ಯ ಗುರುತು ಹೇಳುವ ಗುರು ಬಳಿಕೆ ||
ಮಹಿಪತಿ ನಿನ್ನೊಳು ನೀ ತಿಳಕೆ | ಸಿದ್ಧದ ಬಲು ಬೆಳಕೊ
ಅನುಭಾವದ ಅತೀಂದ್ರಿಯ ಪ್ರಮಾಣ ( ರಾಗ-ಆನಂದಭೈರವಿ, ತಾಲ-ದೀಪಚಂದಿ )
ಅಂದವಾದ ಶ್ರೀಗಂಧದ ಗಿಡದೊಳು | ನಿಂದ ಹಣ್ಣುಗಳನು ಕಾಣದೆ ಇವನ್ನು
ಸವಿಯದೆ ಹೋಗದಿರೆಂದಾದರೂ || ಓಂ ಸುಜ್ಞಾನಿಗಳಿರಾ ! ಅಂದವರಿಗೆ ಅಮೃತಸಾರವು
ಕಣ್ಣು ಇಲ್ಲದವನೆ ನೋಡಿ | ಕಾಲು ಇಲ್ಲದವನೆ ಏರಿ |
ಕೈಯಿಲ್ಲದವನೆ ಹರಿಯಬಂದನು || ಓಂ ಸುಜ್ಞಾನಿಗಳಿರಾ ! ಬಾಯಿ ಇಲ್ಲದವನೆ ತಿಂದನೊ
ಏಳೆಂಟು ಆರು ಹತ್ತು ಮಂದಿ | ಕಳ್ಳರು ವೇಳೆ ಇದೇ ಎಂದು ನೋಡಿ |
ಕಳ್ಳಮತಿಯಲ್ಲಿ ಕಾಯಿ ಹರಿಯಬಂದರು | ಓಂ ಸುಜ್ಞಾನಿಗಳಿರಾ ! ಕೋಳಿ ಕೂಗಿತಷ್ಟರೊಳಗೆ
ಗಿಡವ ಕಾಯುವ ಕಾವಲುಗಾರ | ನೋಡಲು ಬಂದು ತಡಮಾಡದಲೆ
ಉಡಿಗೆ ಉಟ್ಟಿದ್ದು ಸಿಡಿಲಿನಂತೆ ಹೊಡೆದನೋ || ಓಂ ಸುಜ್ಞಾನಿಗಳಿರಾ! ಹಿಡಿದು ಪಾರ ಜಿಲ್ಲೆಗೆ ಕಳುಹಿದನೊ || ೪ ||
ಜಿಲ್ಲಾ ದೊರೆಯು ಅಲ್ಲಿಯ ಸಾಹೇಬ | ಕಳ್ಳರನೆಲ್ಲ ವಿಚಾರಮಾಡಿ |
ಕಳ್ಳತನಕೆ ಸಲ್ಲುವಷ್ಟು ಜುರ್ಮಾನವ || ಓಂ ಸುಜ್ಞಾನಿಗಳಿರಾ ! ಆಳಿಗರವತ್ತು ದಂಡವ ಮಾಡಿದನು
ದಂಡದ ರೂಪಾಯಿ ಕೊಡುವದಕ್ಕೆ | ಬಂದೆ ಗುರುವಿನ ಅಡಿಗಳ ಪಿಡಿದು |
ದಂಡ ಕೊಟ್ಟು, ಧನ್ಯರಾದರು | ಓಂ ಸುಜ್ಞಾನಿಗಳಿರಾ | ಕಂಡೆನಯ್ಯಾ ಶ್ರೀಗುರುಕರುಣದಿ