ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

000 ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, MMMMMMMMMMMMMMMMMMMMMMMMMMMMMA ವರ್ತಮಾನವನ್ನು ಕೇಳಿ ದೇವೇಂದ್ರನು ದಿವ್ಯವಾದ ಪರಮಾನ್ನವನ್ನು ದೇವತೆಗಳ ಕೈಯಲ್ಲಿ ಕಳುಹಿಸುವನು ; ಸೀತಾದೇವಿಯು ಆ ದಿವ್ಯಪರಮಾನ್ನವನ್ನು ಪಡೆದು ಅದು ದೇವೇಂದ್ರನು ಕಳುಹಿಸಿದ್ದೆಂದು ತಿಳಿದು ಆ ದಿವ್ಯಪರ ಮಾನ್ನವನ್ನು ಮೂರುಭಾಗಮಾಡಿ ಒಂದು ಭಾಗವನ್ನು '-ಈ ಪರಮಾನ್ನವು ಜೀವವಂತನಾಗಿದ್ದ ಪಕ್ಷದಲ್ಲಿ ಶ್ರೀರಾ ಮನಿಗೆ ಸಮರ್ಪಿತವು' ಎಂದು ಭೂಮಿಯಲ್ಲಿರಿಸಿ ಮತ್ತೊಂದು ಭಾಗವನ್ನು 'ಲಕ್ಷಣನು ಜೀವವಂತನಾಗಿದ್ದ ಪಕ್ಷದಲ್ಲಿ ಆತನಿಗೆ ಸಮರ್ಪಿತವು' ಎಂದು ಭೂಮಿಯ ಮೇಲಿರಿಸಿ 'ನಾನು ಕೆಟ್ಟ ದಿವಾನ್ನವು ರಾಮಲಕ್ಷ ಣರು ಜೀವದಿಂದಿದ್ದರೆ ಅವರಿಗೆ ಶೇರಲಿ ; ಹಾಗಲ್ಲದೆ ದೇವತ್ವವನ್ನು ಪಡೆದಿದ್ದರೂ ಇದು ಅವರಿಗೆ ಸಮರ್ಪಿತವಾಗ ಲೀ!' ಎಂದು ಪ್ರೇರೇಪಿಸಿ ಮಿಕ್ಕ ಭಾಗವನ್ನು ಶ್ರೀರಾಮನ ಪ್ರಸಾದವೆಂದು ತಾನು ತೆಗೆದುಕೊಂಡು ದೇವೇಂ ದ್ರನು ಕಳುಹಿಸಿದ ಆ ದಿವಾನ್ನದ ಮಹಿಮೆಯಿಂದ ಹಸಿವು ತೃಪೆಗಳಲ್ಲದೆ ದಿವ್ಯದೇಹಿಯಾಗಿರುವಳು; ಆಮೇಲೆ ಶ್ರೀರಾಮನ ದೂತರಾದ ಕಲವು ಕವಿನಾಯಕರು ಸೀತಾದೇವಿಯನ್ನ ರಸಿಕೊಂಡು ಬರುವರು; ಅವರಕಡೆ ನೀತಾ ದೇವಿಯನ್ನು ರಾವಣನು ಹಿಡಿದುಕೊಂಡು ಹೋದ ವೃತ್ತಾಂತವನ್ನು ನೀನು ಹೇಳುವೆ; ಅದರಿಂದ ನೀನು ಮೊದ ಲಿನ ಮರದೆಯಲ್ಲಿ ದೃಷ್ಟಿ ಸಾಮರ್ಥ್ಯವನ್ನೂ ಬಲವನ್ನೂ ಪಡೆದಿವೆ; ನೀನು ಶ್ರೀರಾಮನು ಅವತರಿಸುವ ಕಾಲವನ್ನು ನೋಡಿಕೊಂಡಿದ್ದರೆ ನಿನ್ನ ಗರಿಗಳು ಮೊದಲಮರಾದೆಯಲ್ಲಿ ಹುಟ್ಟುವವು ; ಇಕ್ಷಣದಲ್ಲಿಯೇ ನಿನಗೆ ಗರಿಗಳು ಹುಟ್ಟಿ ಬರುವದಕ್ಕೆ ತಕ್ಕ ಪ್ರಯತ್ನವನ್ನು ಮಾಡುವದಕ್ಕೆ ನನಗೆ ಸಾಮರ್ಥ್ಯ ವಿಲ್ಲ; ನೀನಿಲ್ಲೇ ಇದ್ದರೆ ಜಗದ್ಧಿತಾರ್ಥ ವಾದ ಕಾರೈವನ್ನು ಮಾಡಲುಳ್ಳವನು ; ನೀನು ಈ ಸ್ಥಳದಲ್ಲಿಯೇ ಇದ್ದರೆ ಶ್ರೀರಾಮುಲಕ್ಷಣ ರ ಕಾರ್ಯವನ್ನೂ ಸಮಸ್ತ ಬ್ರಾಹ್ಮಣರ ಕಾರೈವನ್ನೂ ಇಂದ್ರಾದಿ ಸಮಸ್ತ ದೇವತೆಗಳ ಕಾರ್ಯವನ್ನೂ ಆಗ ಮಾಡಲುಳ್ಳವನು ; ನಾನು ರಾಮಲಕ್ಷ್ಮಣರನ್ನು ನೋಡಬೇಕೆಂದು ಮನಸ್ಸಿನಲ್ಲಿ ಬಯಸಿಕೊಂಡಿದ್ದೇನೆ ; ಈಗಾ ದರೆ ನಾನು ಬಹುಕಾಲವು ಪ್ರಾಣಗಳನ್ನು ಧರಿಸಿಕೊಂಡು ನಿಲ್ಲಲಾರೆನು ; ನಾನು ಸ್ವಲ್ಪ ಕಾಲದಲ್ಲಿ ಶರೀರವನ್ನು ಬಿಡುವೆನು' ಎಂದು ಅನೇಕ ಪ್ರಿಯವಚನಗಳಿಂದ ನನ್ನನ್ನು ಸಂತವಿಟ್ಟು ತನ್ನ ಆಶ್ರಮಕ್ಕೆ ಹೋದನು.

  • ಆ ಬಳಿಕ ನಾನು ಆ ಕೋಡುಗಲ್ಲಿನಿಂದ ಮೆಲ್ಲಮೆಲ್ಲಗೆ ವಿಂಧ್ಯಪರ್ವತವನ್ನು ಹತ್ತಿಕೊಂಡು ನಿಶಾಕರಮುನಿ ಯ ಮಾತನ್ನು ನೆನೆದು ನಿಮ್ಮ ಬರವನ್ನು ನೋಡಿಕೊಂಡಿದ್ದೆನು; ಅದು ಮೊದಲು ಇಂದಿಗೆ ನೂರು ವರುಷಗಳು ಸಂಪುರ್ಣವಾದವು ; ಈ ಮರದೆಯಲ್ಲಿ ನಿಶಾಕರಮುನಿಯು ಹಿಮವತ್ಪರ್ವತದ ಮಹಾಪ್ರಸ್ಥಾನವನ್ನು ಹೊ *ು ಹೋದಮೇಲೆ ನಾನು ಬಹುಕಾಲದಿಂದ ನಿಮ್ಮನ್ನು ಎದುರುನೋಡಿಕೊಂಡು ದುಃ9ಿಸಿಕೊಂಡಿದ್ದೆನು; ನನಗೆ ಮರಣವಾಗಬೇಕೆಂಬ ಬುದ್ದಿ ಹುಟ್ಟಿದರೂ ಆ ಬುದ್ದಿಯನ್ನು ಪರಾಜಿತನಾಡಿ ನಿಶಾಕರಮುನಿಯ ವಾಕ್ಯಗಳನ್ನೇ ಮನಸ್ಸಿನಲ್ಲಿರಿಸಿಕೊಂಡು ನನ್ನ ಪ್ರಾಣಗಳನ್ನು ರಕ್ಷಿಸಿಕೊಂಡಿದ್ದೆನು ; ಯಜ್ಞಪುರುಷನ ಪ್ರಭೆಯು ಅಂಧಕಾ ರವನ್ನು ತೊಲಗಿಸುವಂತೆ ಆ ಮುನಿಯು ಹೇಳಿದ ಬುದ್ಧಿಯು ನನ್ನ ದುಃಖಾಂಧಕಾರವನ್ನು ತೊಲಗಿಸಿಕೊಂಡಿ ತು; ನಾನು ರಾವಣನ ಪರಾಕ್ರಮವನ್ನು ಬಲ್ಲವನಾದ್ದರಿಂದ ಸೀತಾದೇವಿಯನ್ನು ಎತ್ತಿಕೊಂಡು ಹೋಗುತ್ತಿದ್ದ ರಾವಣನನ್ನು ಕಂಡುಬಂದ ನನ್ನ ಮಗನಾದ ಸುಪಾರ್ಶ್ವನನ್ನು ಕುರಿತು ಸೀತಾದೇವಿಯನ್ನು ಉಪೇಕ್ಷೆ ಮಾಡಿ ರಾವಣನನ್ನು ಬಿಟ್ಟು ಬಂದಿದ್ದಕ್ಕಾಗಿ ಬಹಳವಾಗಿ ಕೋಪಿಸಿಕೊಂಡೆನು ; ರಾಮಲಕ್ಷ್ಮಣರು ಸೀತಾದೇವಿಯ ವಿ ಯೋಗದಿಂದ ದುಃಖಾಕ್ರಾಂತರಾಗಿರುವರು; ನನಗೆ ದಶರಥರಾಯನ ಸ್ನೇಹದಿಂದ ಆತನ ಮಕ್ಕಳಾದ ರಾಮಲಕ್ಷ ಣರನ್ನು ನೋಡಬೇಕೆಂದು ಬಹಳ ಇಚ್ಛೆಯಾಗಿದೆ ” ಎಂದು ನುಡಿದನು.

ಆ ಸಮಯದಲ್ಲಿ ಅಂಗದಾದಿ ಕಪಿ ನಾಯಕರು ನೋಡುತ್ತಿರಲು ಸಂಗಾತಿಗೆ ಗರಿಗಳು ಹುಟ್ಟಿದವು ; ಆತನು ಕೆಂಪಾದ ಗರಿಗಳಿಂದ ಮನೋಹರವಾದ ತನ್ನ ಶರೀರವನ್ನು ನೋಡಿ ಅತ್ಯಂತ ಸಂತೋಷಪಟ್ಟು ಆ ಕಪಿನಾಯಕರ ನ್ನು ಕುರಿತು “ ಎಲೈ ಕವಿನಾಯಕಮಕ್ಕಳುಗಳಿರಾ, ಮಹಾತ್ಮನಾದ ನಿಶಾಕರಮುನಿಯ ಪ್ರಭಾವದಿಂದ ನನಗೆ ಸರಕಿರಣಜಾಲೆಯಿಂದ ಶೀದುಹೋದ ಗರಿಗಳು ತಿರಿಗಿ ಹುಟ್ಟಿದವು; ನನಗೆ ಯವನಾವಸ್ಥೆಯಲ್ಲಿ ಎಂಥಾ ಪರಾ