ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ಧಾ ಕಾ೦ ಡ_೬೨ ನೆ ಅ ಧ್ಯಾ ಯ , ೧೦೧ ಕ್ರಮವಿತ್ತೋ ಅಂಥಾ ಪರಾಕ್ರಮವುಂಟಾಗಿ ನನ್ನ ಶರೀರವು ಮೊದಲಿನಂತೆ ತೇಜಸ್ಸುಳ್ಳದ್ದಾಗಿದೆ ; ನಿಶಕರವನಿ ಯು ಹೇಳಿದ ಮಾತುಗಳ ಪ್ರಕಾರ ಕೆಲವು ಕಾರ್ಯಗಳು ತಾರ್ಕಣ್ಣವಾದದ್ದರಿಂದ ಮಿಕ್ಕ ಕಾರ್ಯಗಳ ತರ್ಕ ”ವಾಗಲುಳ್ಳವಲ್ಲದೆ ತಪ್ಪವು ; ಆದ್ದರಿಂದ ನೀವು ಸೀತಾದೇವಿಯನ್ನರಸುವದಕ್ಕೆ ತಕ್ಕ ಪ್ರಯತ್ನವನ್ನು ಅವಶ್ಯಕ ವಾಗಿ ಕಾಣಿ ; ನನಗೆ ಈಗ ಗರಿಹುಟ್ಟಿ ಬಂದಿದೆ ; ಇದು ಮುಂದೆ ನಿಮ್ಮ ಕಾರ್ಯವಾಗುವದಕ್ಕೆ ಶಕುನವು ?', ಎಂದು ನುಡಿದು ಮುಂದೆ ಪರಗತಿಯನ್ನು ಸಾಧಿಸಿಕೊಳ್ಳಬೇಕೆಂಬ ಬುದ್ದಿಯಿಂದ ವಿಂಧ್ಯಪರ್ವತದ ಕೊಡುಗಲ್ಲಿನಿಂದ ಬೇ ಚರವಾರ್ಗವಾಗಿ ಹೋದನು. ಆಮೇಲೆ ವಾಯುವೇಗ ಮನೋವೇಗವುಳವರಾದ ಹನುಮಂತನು ಮೊದಲಾದ ಕಪಿನಾಯಕರು ಸಂಪಾತಿಯ ಮಾತನ್ನು ಕೇಳಿ ಅತಿ ಹರ್ಷಪಟ್ಟು “ ನಮಗಿನ ಕಾರೈಸಿದ್ದಿಯಾಗಲುಳ್ಳದ್ದು; ನಾವಿನ್ನು ನೀತಾದೇವಿಯನ್ನು ಕಂಡರೆ ನಮ್ಮ ಒಡೆಯನಾದ ಸುಗ್ರೀವನ ಸವಿಾಪಕ್ಕೆ ಹೋಗ ಬಹುದು ' ಎಂದು ನಿಶ್ಚಯಿಸಿಕೊಂಡು ಹಾಗಾದರೂ ನೀತಾದೇವಿಯನ್ನರಸಿ ಕಾಣಬೇಕೆಂದು ಪ್ರೀತಿಯಿಂದಲೂ ಹರ್ಷದಿಂದಲೂ ಯತ್ನ ಮಾಡುತ್ತಿದ್ದರು. ೬೨ ನೆ ಜಾ ೦ ಬ ನ ೦ ನ ಹ ನು ಮ೦ತ ನು ಸ ಮ ಅ ಧ್ಯಾ ಯ . ದ ನ ನ್ನು ದಾಟಿ ಬ ರ ಲ ಸ ವ ಥ ೯ ನೆ ೦ ದ ದ . ಆ ಬಳಿಕ ಗೃಢರಾಜನಾದ ಸಂಗಾತಿಯ ಮಾತನ್ನು ಕೇಳಿ ಆ ಕವಿನಾಯಕರೆಲ್ಲರೂ ಕೂಡಿಕೊಂಡು ಆತಿ ಹರ್ಷಯುಕ್ತರಾಗಿ ಬೊಬ್ಬಿಟ್ಟು ಘರ್ಜಿಸುತ ಸಮಸ್ತ ಲೋಕಗಳ ಪ್ರತಿಬಿಂಬವೋ ಎಂಬ ಮರದೆಯಲ್ಲಿದ್ದ ತೆಂಕಣ ಸಮುದ್ರದ ಬಡಗಣತೀರಕ್ಕೆ ಬಂದು ಪಳಗವಿಳಿದು ಅಲ್ಲಿ ಘನಗಾತ್ರವಾದ ಶರೀರಗಳಿಂದ ಭಯಂಕರವಾ ಗಿ ಬಾಯಿಬಿಟ್ಟು ಕೊಂಡಿದ್ದ ನಾನಾ ಜಲಚರ ಪ್ರಾಣಿಗಳುಳ್ಳದ್ದಾಗಿ ಒಂದು ದಿಕ್ಕಿನಲ್ಲಿ ಮಹತ್ತಾದ ತೆರೆಗಳಿಂದ ಇಟ್ಟ ೧ಣಿಸಿದ್ದಾಗಿ ಒಂದು ದಿಕ್ಕಿನಲ್ಲಿ ಚಂಚಲವಿಲ್ಲದೆ ನಿದ್ರೆ ಮಾಡುವಂತೆ ಒಪ್ಪುವಂಥಾದ್ದಾಗಿ ಒಂದು ದಿಕ್ಕಿನಲ್ಲಿ ಸರ್ವ ತಾಕಾ ರವಾದ ತೆರೆಗಳ ಹೊಯ್ತು ಗಳಿಂದ ಅತಿ ಭಯಂಕರವಾಗಿ ಮತ್ತೊಂದು ದಿಕ್ಕಿನಲ್ಲಿ ಪಾತಾಳವಾಸಿಗಳಾದ ದಾನವರಿಂದ ಇಟ್ಟಣಿಸಿದ್ದಾಗಿ ಆಕಾಶದಂತೆ ನೋಡುವದಕ್ಕೆ ಅಸಾಧ್ಯವಾದ್ದಾಗಿ ತಡಿಗಳಲ್ಲದೆ ಒಪ್ಪುತಿದ್ದ ಆ ಸಮುದ್ರವನ್ನು ಕಂಡು ಭಯಪಟ್ಟು ಅಂಥಾ ಸಮುದ್ರವನ್ನು ದಾಟಿ ಲಂಕಾದ್ವೀಪಕ್ಕೆ ಹೋಗುವದು ಹೇಗೆಂದು ಕಂಗೆಡುತ್ತಿದ್ದರು; ಆ ಕ ವಿನಾಯಕರನ್ನು ಕಂಡು ಅಂಗದಕುಮಾರನು ಧೈರ್ಯಗುಂದದೆ ಅವರನ್ನು ಅಂಜದಿರಬೇಕೆಂದು ಸಂತವಿಟ್ಟಅವ ರನ್ನು ಕುರಿತು “ ಎಲೈ ಕಪಿನಾಯಕಮಕ್ಕಳರಾ, ಮನಸ್ಸಿನಲ್ಲಿ ಧೈರ್ಯಗುಂದಿ ಕಂಗೆಟ್ಟು ದರಪಡಬೇಡಿ , ದುಃಖವು ಕೋಪಕರಳಿದ ಸರ್ಪವು ಅರಿಯದ ಬಾಲಕನನ್ನು ಕೊಲ್ಲುವಂತೆ ಪುರುಷನ ಬಲವನ್ನು ಕೆಡಿಸುವದು ; ಯಾವ ಪುರುಷನು ಆಪತ್ಕಾಲಬಂದಲ್ಲಿ ಧೈರ್ಯಗುಂದಿ ದುಃಖಪಡುವನೋ ಆತನ ತೇಜಸ್ಸು ಗುಂದುವದು ; ಆತನ ಕಾರೈಸಿದ್ದಿಯ ಕಡುವದು” ಎಂದು ಧೈರ್ಯಹೇಳಿ ಸಂತವಿಟ್ಟನು. ಆ ಬಳಿಕ ಅಂಗದನು ಆ ರಾತ್ರಿಯನ್ನು ಕಳೆದು ಸಮಸ್ತ ಆಪಿನಾಯಕರನ್ನೂ ಕೂಡಿಕೊಂಡು ಮುಂತಾ ಲೋಚನೆ ಮಾಡುತ್ತಿರಲು ಆತನನ್ನು ಸುತ್ತುವರಿದಿದ್ದ ಕಪಿಸೇನೆಯು ದೇವೇಂದ್ರನನ್ನು ಸುತ್ತುವರಿದಿರುವ ದೇವ ಸೇನೆಯಂತ ಅತಿ ರಮಣೀಯವಾಗಿ ಒಪ್ಪುತಿತ್ತು! ಅಂಥಾ ಅಪರಿಮಿತವಾದ ಕಪಿಸೇನೆಯನ್ನು ವಾಲಿಯ ತನಯನಾದ ಅಂಗದನ ಅತಿ ಪರಾಕ್ರಮಿಯಾದ ಹನುಮಂತನ ಹೊರ್ತಾಗಿ ಆಜ್ಞೆಯಲ್ಲಿ ನಿಲ್ಲಿಸುವವರೊಬ್ಬರೂ ಇಲ್ಲ ; ಆ ಬ ೪ಕ ಅಂಗದಕುಮಾರನು ಹನುಮಂತನು ಮೊದಲಾದ ಕವಿನಾಯಕರನ್ನು ಸನ್ಮಾನಿಸಿ ಸಂತವಿಟ್ಟು ಅವರನ್ನು ಕುರಿತು “ಎಲೈ ಕವಿನಾಯಕಮಕ್ಕಳಿರಾ ಕೇಳ; ನಮ್ಮಲ್ಲಿ ಈ ಸಮುದ್ರವನ್ನು ದಾಟಿ ಲಂಕಾದ್ವೀಪಕ್ಕೆ ಹೋಗಿ ಸೀತಾದೇ - 26