ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ – ೦ ಧಾ ಕಾ೦ ಚ~-೪೩ ನೆ ಆ ಯ . MMMMMM ನಮಗೆ ಉಪಕಾರವನ್ನು ಮಾಡಿದ ಶ್ರೀರಾಮನಿಗೆ ಪ್ರಕೃಪಕಾರವನ್ನು ಮಾಡಿ ಕೃತಾರ್ಥರಾಗುವವು ; ಮತ್ತೂ ಸೀತಾದೇವಿಯನ್ನು ಕಂಡುಬರುವ ಕಾರೈಕ್ಕೆ ಸಾಧನಗಳಾದ ಕಾರೈಗಳ ನಂಟೆ ಆ ಕಾರೈಗಳನ್ನು ದೇಶಕಾಲಗ ಳನ್ನರಿತು ಯತ್ನ ಮಾಡಿಕೊಳ್ಳೇ ಎಂದು ಆಜ್ಞಾಪಿಸಿದನು. ಆ ಮಾತನ್ನು ಕೇಳಿ ಆ ಕಪಿನಾಯಕರು ಸುಷೇಣನನ್ನು ಮುಂದಿಟ್ಟುಕೊಂಡು ವರುಣನಿಂದ ಪರಿಪಾಲಿಸ ಆಟ್ಟ ಪಶ್ಚಿಮದಿಕ್ಕಿನಲ್ಲಿ ಸೀತಾದೇವಿಯನ್ನರಸಿ ಕಾಣುವದಕ್ಕೋಸ್ಕರ ತೆರಳಿದರು.


------

೩ ನೆ ಅ ಧ್ಯಾ ಯ . ಸು ಗಿ, ವ ನು ಸಿ ತಾ ಬೆ ವಿ ಯ ನ ರ ಸು ವ ದ ಕ್ಲಾ ಗಿ ಇ ಸಿ ಗ ಳ ನ್ನು ಬ ಡ ಗ ಣ ದಿ ಕೈ ಗೆ ಕ ಳ ಹಿ ಸಿ ದ್ದು , ಈ ಮುರಾದೆಯಲ್ಲಿ ಸುಗ್ರೀವನು ತನ್ನ ಮಾವನಾದ ಸುಶೇಣನನ್ನು ಪಡುವಣದಿಕ್ಕಿಗೆ ಕಳುಹಿಸಿ ಮಹಾ ಸಮರ್ಥನಾದ ಶತವಲಿಯನ್ನು ಕರೆದು ಆತನನ್ನು ಕುರಿತು ತನಗೂ ಶ್ರೀರಾಮನಿಗೂ ಹಿತವಾದ ಮಾತುಗಳಿಂದ * ಎಲೈ ಶತವಲಿಯೆ, ನೀನು ನಿನಗೆ ಸಮಾನರಾಗಿ ಯಮನ ಮಕ್ಕಳಾಗಿ ನಿನ್ನ ಮಂತ್ರಿಗಳಾದ ಕಪಿನಾಯಕರನ್ನು ಕೂಡಿಕೊಂಡು ಬಡಗಣದಿಕ್ಕಿಗೆ ಹೋಗಿ ಹಿಮವತ್ಪರ್ವತಪರ್ಯಂತರ ಸಂಚಾರಮಾಡಿ ಶ್ರೀರಾಮನ ಪಟ್ಟದರಾಣಿ ಯಾದ ಸೀತಾದೇವಿಯನ್ನರಸಿ ಬಾ; ಈ ಸಮಯದಲ್ಲಿ ಶ್ರೀರಾಮನ ಕಾರವನ್ನು ಸಾಧ್ಯಮಾಡಿದೆವಾದರೆ ನಾವೆಲ್ಲ ರೂ ಆತನ ಕರುಣೆಯಿಂದ ಕೃತಾರ್ಥರಾಗುವೆವು ; ನಾವು ಆತನಿಂದ ಮೊದಲೇ ಉಪಕಾರವನ್ನು ಪಡೆದವರಾದ್ದರಿಂದ ಆತನಿಗೆ ಪ್ರತ್ಯುಪಕಾರವನ್ನು ಮಾಡಿದರೆ ನಮ್ಮ ಜನ್ಮವು ಸಫಲವಾಗುವದು ; ಒಬ್ಬರಿಂದ ಒಂದು ಉಪಕಾರವನ್ನು ಪಡೆದು ಅವರಿಗೆ ಪ್ರತ್ಯುಪಕಾರವನ್ನು ಮಾಡಿದರೆ ಜನ್ಮವು ಸಫಲವಾಗುವದು ; ಹಾಗಿರುವಲ್ಲಿ ಉಪಕಾರವನ್ನು ಪ ಡೆಯದೆ ಉಪಕಾರವನ್ನು ಮಾಡಿದರೆ ಹೇಳುವದೇನು ! ಆದಕಾರಣ ನಾವು ಶ್ರೀರಾಮನಿಂದ ಉಪಕಾರವನ್ನು ಪಡೆದು ಪ್ರತ್ಯುಪಕಾರವನ್ನು ಮಾಡದಿರಬಾರದು ; ಇದನ್ನು ನಿನ್ನ ಮನಸ್ಸಿಗೆ ಸರಿ ತಂದುಕೊಂಡು ನನಗುಪಕಾರವಾಗಿ ನೀ ತಾದೇವಿಯನ್ನ ರಸಿಕೊಂಡು ಬರಬೇಕು ! ಶ್ರೀರಾಮನು ವನುವಾತ್ರದವನಲ್ಲ; ಆತನು ಪರಮಪುರುಷ ನಾದ ಪುರುಷೋತ್ತಮನು; ಅದಲ್ಲದೆ ನಮ್ಮಲ್ಲಿ ಬಹು ಪ್ರೀತಿಯುಳ್ಳವನು ; ಆದಕಾರಣ ನೀವು ಬಡಗಣದಿಕ್ಕಿಗೆ ಹೋಗಿ ಆ ದಿಕ್ಕಿನಲ್ಲಿರುವ ವನದುರ್ಗ ಜಲದುರ್ಗ ಗಿರಿದುರ್ಗ ಮೊದಲಾದ ಪ್ರದೇಶಗಳಲ್ಲಿಯ ಪಟ್ಟಣಗಳಲ್ಲಿಯ ನಿನ್ನ ಪರಾಕ್ರಮಕ್ಕೆ ತಕ್ಕ ಹಾಗೆ ವಿಚಾರಿಸಿ; ಮತ್ತೂ ಆ ಬಡಗಣದಿಕ್ಕಿನಲ್ಲಿರುವ ಮೃಚ್ಛದೇಶ ಪುಳಂದದೇಶ ಶೂರಸೇನದೇಶ ಪ್ರಸ್ಥಲದೇಶ ಭರತದೇಶ ಕುರುದೇಶ ಮಾಪ್ರದೇಶ ಕಾಂಭೋಜದೇಶ ಯವನದೇಶ ಶಕ್ತಿದೇಶ ಆರಟ್ಟಿದೇಶ ಬಾಹಿಕದೇಶ ನೃಷ್ಟಿಕದೇಶ ಪರವದೇಶ ಟಂಕಣದೇಶ ಚೀನದೇಶ ಮೊದಲಾದ ದೇಶಗಳಲ್ಲಿ ಹುಡುಕಿ ನೋಡೀ; ಮತ್ತು ಉದ್ದವಾದ ವೃಕ್ಷಗಳುಳ್ಳ ವನಗಳಲ್ಲಿಯೂ ಕಮಲಸಮೂಹಗಳಲ್ಲಿಯ ದೇವದಾರು ವನಗಳಲ್ಲಿ ಯೂ ಆರಿಸಿ ನೋಡಿ ; ಆಮೇಲೆ ಜೀವಗಂಧರ್ವರಿಂದ ಸೇವಿಸಲ್ಪಟ್ಟ ಸೇವಾಶ್ರಮಕ್ಕೆ ಹೋಗಿ ಅಲ್ಲಿಂದ ಮುಂದೆ ದೊಡ್ಡ ತಪ್ಪಲುಗಳುಳ್ಳ ಕಾಳಗಿರಿಯೆಂಬ ಪರ್ವತಕ್ಕೆ ಹೋಗಿ ಆ ಪರ್ವತದ ಗುಹೆಗಳಲ್ಲಿಯ ಜರಿಗಳಲ್ಲಿಯ ಅರಸಿನೋಡಿ ಅಲ್ಲಿಂದ ಮುಂದೆ ಹೇಮಗರ್ಭ ವೆಂಬ ಪರ್ವತಕ್ಕೆ ಹೋಗಿ ಅಲ್ಲಿಂದ ಮುಂದೆ ಸಮಸ್ತ ಪಕ್ಷಿಗಳಿಗೂ ನಿಲುಗಡೇಸಾನವಾದ ದೇವಸಖವೆಂಬ ಹೆಸರುಳ್ಳ ಪರ್ವತಕ್ಕೆ ಹೋಗಿ ಆ ಪರ್ವತದಲ್ಲಿರುವ ವನಸಮೂಹಗಳಲ್ಲಿ ಯ ಜಗತಿಗಳಲ್ಲಿಯ ಗುಹೆಗಳಲ್ಲಿಯೂ ಅರಸಿನೋಡೀ ; ಅಲ್ಲಿಂದ ಮುಂದೆ ನೂರುಗಾವುದದಾರಿ ಪರ್ಯಂತರ ಪರ್ವತಗಳ ನದಿಗಳ ವನಗಳ ಪಟ್ಟಣಗಳ ಪ್ರಾಣಿಗಳ ಇಲ್ಲದ ಕಾನನವನ್ನು ದಾಟಿ ಮುಂದೆ ಹೋದರೆ ಮಹಾ ಮನೋಹರವಾಗಿ ಅತಿ ಬಿಳುಪಾದ ಕೈಲಾಸಪರ್ವತವನ್ನು ಕಂಡು ಅತ್ಯಂತ ಸಂತೋಷ ಪಡುವಿರಿ ; ಆ ಪ 20