________________
೭v ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ,
ರ್ವತದ ಬಡಗಣ ಕಡುಗಲ್ಲಿನಲ್ಲಿ ಏಕಕರ್ಮ ನಿಂದ ನಿರ್ಮಿತವಾಗಿ ರತ್ನ ಖಚಿತವಾಗಿ ಸುವರ್ಣಮಯವಾಗಿ ರಮ ಣೀಯವಾದ ಕುಬೇರನ ಮನೆಯು ಇರುವದು ; ಅಲ್ಲಿ ಹೊಂದಾವರೇ ಕಮಲಗಳಿಂದ ಪರಿಪುರ್ಣವಾಗಿ ವಿಶಾಲವಾದ ಹಂಸಪಕ್ಷಿ ಕೊಳರ್ವಕ್ಕಿಗಳಿಂದ ಪರಿಪೂರ್ಣವಾದ ಒಂದು ಕೊಳವಿರುವದು ; ಅದರಲ್ಲಿ ಸಮಸ್ತ ಯಕ್ಷರಿಗೂ ಅಧಿಕ ತಿಯಾದ ಕುಬೇರನು ಅಪ್ಪರಸ್ತ್ರೀಯರೊಡನೆಯ ಗುಚ್ಛಕರೆಂಬ ದೇವತೆಗಳೊಡನೆಯ ಕೂಡಿಕೊಂಡು ಜಲ ಕ್ರೀಡೆಯಾಡುತ್ತಿರುವನು ; ಅಲ್ಲಿ ಯಾರಿಗೂ ಪ್ರವೇಶ ಮಾಡುವದಕ್ಕೆ ಅಸಾಧ್ಯವಾದ ಕೌಂಚವೆಂಬ ಬಿಲದ್ವಾರವಿರು ವದು ; ಆ ಬಿಲದ್ವಾರವನ್ನು ಹೊಕ್ಕು ಹೋಗುವಲ್ಲಿ ಸಾವಧಾನದಿಂದಿರಿ? ; ಆ ಬಿಲದಲ್ಲಿ ಸಮಸ್ತ ದೇವತೆಗಳಿಂದಲೂ ಪುಜಿಸಲು ಯೋಗ್ಯರಾಗಿ ಮಹಾತ್ಮರಾಗಿ ಸೂರ್ಯಪ್ರಭೆಯಂತೆ ತನುಕಾಂತಿಯುಳ್ಳ ಯಷಿಗಳರುವರು ; ಅವರ ನ್ನು ನೋಡಿ ವಿಚಾರಿಸೀ ; ಮತ್ತೂ ಆ ಕಿಂಚಪರ್ವತದ ತಪ್ಪಲುಗಳಲ್ಲಿ ಅನೇಕ ಕೊಡುಗಲ್ಲುಗಳ ದೊಡ್ಡ ಕಲ್ಲರೆಗಳ ಗುಂಡುಕಲ್ಲುಗಳೂ ಇರುವವು ; ಅಲ್ಲಿ ನೋಡಿ ಅಲ್ಲಿಂದ ಮುಂದೆ ಮರಗಳಿಲ್ಲದ ಕಾವಶೈಲವೆಂಬ ಬೆಟ್ಟ ವಿರುವದು ; ಅಲ್ಲಿ ಸಮಸ್ಯಪಕ್ಷಿಗಳಿಗೂ ಆಶ್ರಯವಾದ ಮಾನಸಸರೋವರವಿರುವದು ; ಆ ಬೆಟ್ಟವು ದೇವದಾನವರು ಮೊದಲಾದವರಿಗೂ ಸಂಚರಿಸುವದಕ್ಕೆ ಅಸಾಧ್ಯವಾದದ್ದು ; ಅಲ್ಲಿ ಹುಡುಕಿ ನೋಡಿ ಮುಂದೆ ಹೋದರೆ ಅಲ್ಲಿ ಕುದು ರೇ ಮುಖದಂತೆ ಮುಖವುಳ್ಳ ಸ್ತ್ರೀಯರಿರುವರು ; ಆ ದೇಶವನ್ನು ದಾಟಿ ಸಮಸ್ತ ಸಿದ್ಧರಿಂದಲೂ ಋಷಿಗಳಿಂದಲೂ ಅಟ್ಟಣಿಸಲ್ಪಟ್ಟ ವಾಲಖಿಲ್ಯಾಶ್ರಮಕ್ಕೆ ಹೋಗಿ ತಪಸಮರ್ಥ ದಿಂದ ಶುದ್ಧಾತ್ಮರಾದ ವಾಲಖಿಲ್ಯರಿಗೆ ನಮಸ್ಕರ ವನ್ನು ಮಾಡಿ ಸೀತಾದೇವಿಯು ವೃತ್ತಾಂತವನ್ನು ಕೇಳಿ ; ಅಲ್ಲಿಂದ ಮುಂದೆ ಹೊಂದಾವರೇ ಕಮಲಗಳಿಂದ ಇಟ್ಟ ೯ಣಿಸಿ ಬಾಲಸೂರ್ಯನಂತೆ ಪ್ರಕಾಶಮಾನವಾಗಿ ಹೊಳೆಯುತ ಹಂಸಪಕ್ಷಿಗಳಿಂದ ರಮಣೀಯವಾದ ವೈಖಾನಸಸರ ಸೈಂಬ ಕೊಳವಿರುವದು ; ಆ ಕೊಳಕ್ಕೆ ನಿಕ್ಕಗಲ್ಲ ಜಲಖಾನಾರ್ಥವಾಗಿ ಅನೇಕ ಹೆಣ್ಣಾನೆಗಳನ್ನು ಕೂಡಿಕೊಂಡು ಬರುವ ಐರಾವತವನ್ನು ನೋಡಿ ಅಲ್ಲಿಂದ ಮುಂದೆ ಹೋದರೆ ಚಂದ್ರಸೂರ ನಕ್ಷತ್ರಗಳಲ್ಲದ್ದಾದರೂ ಯಾವಾಗಲೂ ಪ್ರಕಾಶಮಾನವಾಗಿ ಒಪ್ಪುವ ಒಂದು ದೇಶವಿರುವದು ; ಅಲ್ಲಿ ಮಹಾತ್ಮರಾಗಿ ತಮ್ಮ ತನುಕಾಂತಿಯಿಂದ ಬೆಳಗುತ್ತಿ ರುವ ತಪಸ್ವಿಗಳರುವರು ; ಅಲ್ಲಿಂದ ಮುಂದೆ ಶೈಲೋದಕವೆಂಬ ಒಂದು ನದಿ ಇರುವದು ; ಆ ನದಿಯ ಎರಡು ತೀರ ಗಳಲ್ಲಿಯೂ ಬಿದಿರುಗಳು ಬಂದು ತೀರದಿಂದ ಮತ್ತೊಂದು ತೀರಕ್ಕೆ ಬೊಗ್ಗಿ ರುವವು; ಅಲ್ಲಿರುವ ಮಗಳು ಆ ಬಿದಿ ರುಗಳನ್ನಿಡಿದುಕೊಂಡು ಒಂದು ತಡಿಯಿಂದ ಮತ್ತೊಂದು ತಡಿಗೆ ಸಂಚರಿಸುತ್ತಿರುವರು ; ಆ ನದಿಯು ಪುಣ್ಯವನ್ನು ಮಾಡಿದವರಿಗೆ ಸಮಸ್ತ ಭೋಗಗಳನ್ನೂ ಕೊಡುತ್ತಿರುವದು ; ಮತ್ತೂ ಅಲ್ಲಿ ಹೊಂದಾವರೇ ಕಮಲಗಳುಳ್ಳ ಕೆಳ ಗಳೂ ನೀಲಮಣಿಯಂತೆಯ ವೆಡದಂತೆ ಯ ನಿರ್ಮಲವಾದ ಉದಕವುಳ್ಳ ಅನೇಕ ನದಿಗಳೂ ಇರುವವು; ಆ ನದಿಗಳಲ್ಲಿ ಬಾಲಸಧ್ಯಪ್ರಭೆಯಂತೆ ಕಾಂತಿಯುಳ ಸುವರ್ಣಮಯವಾದ ಕೆಂದಾವರೇ ಕಮಲಗಳಿಂದ ಒಪ್ಪುತ್ತಿರುವ ಮಡಗಳುಂಟು ; ಅನಘ್ರವಾದ ಪದ್ಮರಾಗದಂತೆಯ ಸುವರ್ಣಪ್ರಭೆಯಂತೆಯ ಎಸಳುಗಳುಳ್ಳ ವಾಗಿ ವಿಚಿತ್ರ ವರ್ಣವಾದ ಕನ್ನೆ ದಿನ ಪುಪ್ಪಗಳಿಂದ ಮನೋಹರವಾಗಿ ಅನರ್ಥ್ಯವಾದ ಮುತ್ತಿನ ಮಣಿಗಳುಳ್ಳದ್ದಾಗಿ ಸುವರ್ಣ ಮಯವಾದ ಮಳಲೊಟ್ಟುಗಳುಳ್ಳ ಆ ನದಿಗಳಲ್ಲಿ ಸರ್ವಾಭರಣಭೂಷಿತರಾಗಿ ನಾನಾವರ್ಣವುಳ್ಳವರಾಗಿ ಉತ್ತಮರಾ ದ ಪುರುಷರು ಸಂಚರಿಸುತ್ತಿರುವರು; ಮತ್ತು ಅಲ್ಲಿ ಸುವರ್ಣಮಯವಾದ ಯಜ್ಞಪುರುಷನ ಕಾಂತಿಗೆ ಸಮಾನವಾದ ಕಾಂತಿಯುಳ್ಳ ಪುಪ್ಪಫಲಗಳಿಂದ ಇಟ್ಟಣಿಸಿದ ವನಗಳಿರುವವು; ಆ ವನಗಳಲ್ಲಿ ಎಲ್ಲಿ ನೋಡಿದರೂ ದಿವ್ಯವಾದ ಪಕ್ಷಿ ಗಳು ಸ್ವರಗೈಯುತ್ತಿರುವವು ; ವೃಕ್ಷಗಳು ದಿವ್ಯಗಂಧವುಳ್ಳವಾಗಿ ರಸವತ್ತಾಗಿ ನುಣುಪಾಗಿ ಮನಸ್ಸಿಗೆ ಬೇಕಾದ ಫಲಗಳನ್ನು ಕೊಡುತ್ತಿರುವವು ; ಕೆಲವು ವೃಕ್ಷಗಳು ಬಯಸುವ ವಸ್ತುಗಳನ್ನ ಫಲಗಳನ್ನೂ ಸುಪ್ಪತ್ತಿಗೆಸಹಿತ ವಾದ ಮಂಟಗಳನ್ನೂ ಭೋಗಯೋಗ್ಯವಾದ ಪುಸ್ಮಮಾಲಿಕೆಗಳನ್ನೂ ಕೊಡುವವು ; ಕೆಲವು ವೃಕ್ಷಗಳು ಏನ ಯೋಗ್ಯವಾದ ಪಾನೀಯಗಳನ್ನೂ ಸಾದುವಾದ ಭಕ್ಷಗಳನ್ನೂ ಕೊಡುವವು ; ಆ ವನಗಳಲ್ಲಿ ನವಯುವನವುಳ್ಳವ ರಾಗಿ ಕೋಮಲಾಂಗಿಯರಾದ ಗಂಧರ್ವ ಕಿನ್ನರ ನಿದ್ದ ವಿದ್ಯಾಧರಾದಿ ಸ್ತ್ರೀಯರೊಡನೆ ದೇವತೆಗಳು ರಮಿಸಿಕೊಂಡಿ ರುವರು ; ಅಲ್ಲಿರುವ ಪ್ರಾಣಿಗಳು ಪುರ್ಣಸ್ಥಿತ್ಮರು ; ರತಿಕ್ರೀಡೆಗಳಲ್ಲಿ ಅತಿ ಪ್ರವೀಣರು ; ಎಲ್ಲರೂ ಆರ್ಥಕಾಮಗಳೆಂಬ