________________
ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ಆ ಸಮಯದಲ್ಲಿ ಶ್ರೀರಾಮನು ಹನುಮಂತನನ್ನು ನೋಡಿ ಆತನು ಸಮರ್ಥನಲ್ಲದಿದ್ದರೆ ಸುಗ್ರೀವನು ಅಷ್ಟು ಉಪಚಾರವೆಳನೆಂದು ಮನಸ್ಸಿನಲ್ಲೆಸಿಸಿ ಪ್ರೀತಿಯಿಂದ ' ಶ್ರೀರಾಮ ” ಎಂಬ ನಾಮಾಂಕಿತವುಳ ತನ್ನ ಮುದ್ರೆ ಉಂಗುರವನ್ನು ಹನುಮಂತನಿಗೆ ಕೊಟ್ಟು ಆತನನ್ನು ಕುರಿತು " ಎಲೈ ಹನುಮಂತನೆ, ನೀನು ನನ್ನ ಕುರುಹಿನ ಉಂ ಗುರವನ್ನು ಸೀತಾದೇವಿಯ ಕೈಯಲ್ಲಿ ಹೊಟ್ಟೆಯಾದರೆ ಸೀತಾದೇವಿಯು ನಿನ್ನನು ನನ್ನ ಸವಿಾಪದಿಂದ ಬಂದವ ನೆಂದು ವಿಶ್ವಾಸದಿಂದ ಕಂಡು ಭಯವಿಲ್ಲದೇ ನಿನ್ನ ಕಡೆ ಸಂಭಾಷಣಮಾಡುವಳು ! ಎಳ್ಳೆ ಹನುಮಂತನೇ, ನೀನು ಮಖಾ ಬಲವಂತನು; ಮಹಾ ಪರಾಕ್ರಮಿಯು ; ಅದಲ್ಲದೆ ಸುಗ್ರಿವನು ನಿನ್ನ ಕಡೆಯೇ ಈ ಕಾರ್ಯಸ್ಥಿತಿಯ ನ್ನು ಹೇಳಿದನು ; ಆದಕಾರಣ ನನ್ನ ಮನಸ್ಸಿಗೆ ನಿನ್ನಿಂದಲೇ ನನ್ನ ಕಾರ್ಯವಾಗುವದೆಂದು ತೋರುತ್ತದೆ? ಅಂದನು. - ಹನುಮಂತನು ಮಹಾಪ್ರಸಾದವೆಂದು ಆ ಮುದ್ರೆಉಂಗುರವನ್ನು ಕೈಯಲ್ಲಿ ತೆಗೆದು ಶಿರಸಾವಹಿಸಿಕೊಂ ಡು ಶ್ರೀರಾಮನ ಪಾದಗಳಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಆತನಿಂದ ಕಳುಹಿಸಿಕೊಂಡು ಮಹಾಬಲವುಳ ತನ್ನ ಸೇನೆಯನ್ನು ಕೂಡಿಕೊಂಡು ಅದರ ಮಧ್ಯದಲ್ಲಿ ಮೇಘಮರೆಯಿಲ್ಲದ ಅಂತರಿಕ್ಷಮಾರ್ಗದಲ್ಲಿ ನಕ್ಷತ್ರ ಮಹದಿಂದ ಒಪ್ಪುತ್ತಿರುವ ನಿರ್ಮಲವಾದ ಮಂಡಲವುಳ ಚಂದ್ರನಂತೆ ಒಪ್ಪುತ್ತಿದ್ದನು.
- - ---
83 ನೇ ಅ ಧ್ಯಾ ಯ . ಕ ಪಿ ಗ ಳು ನಿ ತಾ ದೆ ವಿ ಯ ನ್ನು ಹುಡುಕು ವ ದ ಕೈ ಹೊ ರ ಟಿ ದ್ದು . ಎಲೈ ಕುಶಲವರುಗಳರಾ, ಈರಕಾರವಾಗಿ ಸುಗ್ರೀವನು ಸಮಸ್ತ ಕಪಿ ನಾಯಕರನ್ನೂ ಕರೆದು ಶ್ರೀರಾ ಮನಕಾರ್ ಸಾಧ್ಯವಾಗುವದಕ್ಕೆ ನಾಲ್ಕು ದಿಕ್ಕುಗಳಲ್ಲಿಯೂ ಸೀತಾದೇವಿಯನ್ನು ಹುಡುಕುವದಕ್ಕೆ ತಕ್ಕ ಕಪಿನಾ ಯಕರನ್ನು ಆಯಾ ದಿಕ್ಕಿಗೆ ನೇಮಿಸಿ ಅವರನ್ನು ಕುರಿತು ಎಲೈ ಕಪಿಗಳಿರಾ, ನೀವು ನಾನು ಹೇಳಿದ ಪ್ರಕಾರದಲ್ಲಿ ಸಂಚರಿಸಿ ಸೀತಾದೇವಿಯನ್ನರಸಿ ಕರೆದುಕೊಂಡು ಬನ್ನಿ ” ಎಂದು ಆಜ್ಞಾಪಿಸಿದನು. ಆ ಕಪಿ ನಾಯಕರು ಸುಗ್ರೀವನ ಆಜ್ಞೆಯನ್ನು ಶಿರಸಾವಹಿಸಿ ತಮ್ಮ ತಮ್ಮ ಮಾರ್ಗವನ್ನಿಡಿದು ತೆರಳುತ ಕೂಗುತ ಘರ್ಜಿಸುತ ನೆಗೆದಾಡುತ ಬೊಬ್ಬಿಡುತ ತನಗೆ ನೇಮಿಸಿದ ದಿಕ್ಕುಗಳನ್ನು ನೋಡುತ ಒಬ್ಬರಿಗೊಬ್ಬರು “ ನಾನೇ ರಾವಣನನ್ನು ಕೊಂದು ನೀತಾದೇವಿಯನ್ನು ತರುವೆನು” ನಾನೊಬ್ಬನೇ ಸಮರದಲ್ಲಿ ರಾವಣನ ನ್ನು ಕೊಂದು ಸೀತಾದೇವಿಯನ್ನು ಕರೆದುಕೊಂಡು ಬರುವೆನು_ ನಾನೇ ಆ ದೇವಿಯು ಪಾತಾಳಲೋಕದಲ್ಲಿ ದ್ದರೂ ಕರೆ ತರುವನು *_" ನಾನು ಸಮಸ್ತ ವೃಕ್ಷಗಳನ್ನೂ ಮುರಿಯುವೆನು ” ನಾನು ಸಮಸ್ತ ಪರ್ವತ ಗಳನ್ನೂ ಚೂರ್ಣಮಾಡುವನು *_" ನಾನು ಭೂಮಂಡಲವನ್ನು ಇಬ್ಬಗೆಯಾಗಿ ಸೀಳುವನು ”–“ ನಾನು ಸಮುದ್ರವನ್ನು ಕದಡಿಬಿಡುವನು”_ ನಾನು ಒಂದು ಗಾವುದದಾರಿ ನೆಗೆಯುವೆನು”_ ನಾನು ನೂರುಗಾ ವುದ ದಾರಿಗಿಂತಲೂ ಅಧಿಕವಾಗಿ ನಗದೇನು ?” ನಾನು ಸೀತಾದೇವಿಯು ಭೂಮಂಡಲದಲ್ಲಿದ್ದರೂ ಸಮುದ್ರ ದಲ್ಲಿದ್ದರೂ ಪರ್ವತಗಳಲ್ಲಿದ್ದರೂ ವನಗಳಲ್ಲಿದ್ದರೂ ಪಾತಾಳಲೋಕದಲ್ಲಿದ್ದರೂ ಹೋಗಿ ನೋಡಿಬರುವೆನು ! “ ನಾನು ಭಯವಿಲ್ಲದೆ ಎಲ್ಲಿಗಾದರೂ ಹೋಗುವೆನು ” ಎಂದು ಸುಗ್ರೀವನ ಸಮುಖದಲ್ಲಿ ನುಡಿದು ಮುಂದೆ ಹೊರಟರು. + K ,