ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

v ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ಲವಾದಮೇಲೆ ಪುಷ್ಪಗಳಳ ವನಗಳನ್ನು ಸೇರಿಕೊಂಡು ರಾತ್ರಿಯನ್ನು ಕಳಯುತ ಮಾರನೇ ಚಿರ್ತಕಾಲ ದಲ್ಲಿ ತಿರಿಗೂ ಹುಡುಕುತ ಈ ಮರದೆಯಲ್ಲಿ ಎಲ್ಲಿಯೂ ಸಂಚರಿಸುತ್ತಿದ್ದರು ; ಒಂದು ತಿಂಗಳು ಕಳೆದಮೇಲೆ ಮೂಡಣದಿಕ್ಕಿಗೆ ಹೋದ ವಿನುತನು ಆ ದಿಕ್ಕಿನಲ್ಲಿದ್ದ ಸಮಸ್ತ ಸ್ಥಳಗಳಲ್ಲಿಯ ಹುಡಕಿ ನೀತಾದೇವಿಯನ್ನು ಕಾಣದೆ ತಿರಿಗಿ ಬಂದನು ; ಬಡಗಣದಿಕ್ಕಿಗೆ ಹೋದ ಶತನಲಿ ಯು" ಆ ದಿಕ್ಕಿನಲ್ಲಿದ್ದ ಹಿಮವತ್ಪರ್ವತ ಮೊದಲಾದ ಪರ್ವತಗಳು ನದೀತೀರಗಳು ಮೊದಲಾದ ಸ್ಥಳಗಳಲ್ಲಿ ಅರಸಿ ಕಾಣದೆ ತಿರಿಗಿ ಬಂದನು ; ಪಡವಣದಿಕ್ಕಿಗೆ ಹೋದ ಸುಷೇಣನು ಆ ದಿಕ್ಕಿನಲ್ಲಿದ್ದ ಪರ್ವತಗಳು ಜರಿಗಳು ಗುಹೆಗಳು ನದೀತೀರಗಳು ವನಾಂತರಗಳು ಮೊದಲಾದ ಸ್ಥಳ ಗಳಲ್ಲಿ ಸೀತಾದೇವಿಯನ್ನರಸಿ ಕಾಣದೆ ತಿರಿಗಿ ಬಂದು ಶ್ರೀರಾಮನ ಸಮುಖದಲ್ಲಿದ್ದ ಸುಗ್ರೀವನಿಗೆ ಅಭಿನಂದಿಸಿ ಆತ ನನ್ನು ಕುರಿತು ಈ ಎಲೈ ಸುಗ್ರೀವನೆ, ನಾನು ಪಡವಣದಿಕ್ಕಿಗೆ ಹೋಗಿ ಅಲ್ಲಿರುವ ಪರ್ವತಗಳು ಗುಹಗಳು ಕೂ ಳಗಳು ದೇಶಗಳು ವಿಷಮವಾದ ಸ್ಥಳಗಳು ಮೊದಲಾದವುಗಳಲ್ಲಿ ಅರಸಿನೋಡಿ ಸೀತಾದೇವಿಯನ್ನು ಕಾಣದೆ ತಿಗಿ ಬಂದೆನು ; ಆದರೂ ತೊಂಕಣದಿಕ್ಕಿಗೆ ಹೋದ ಮಹಾ ಬಲವಂತನಾದ ಹನುಮಂತನು ಸೀತಾದೇವಿಯನ್ನರಸಿ ಕಂಡು ಬರುವನೆಂದು ನಂಬುತ್ತೇನೆ ?” ಎಂದು ಹೇಳಿದನು. SV ನ ಆ ಧ ಯ ಹ ನು ಮ೦ ತಾ ದಿ ಗ ಳು ತ೦ಕ ೧ ದಿಕ್ಕಿನಲ್ಲಿ ನೀ ತಾ ದೆ ವಿ ಯ ನ್ನು ಹುಡುಕಿ ದ್ದು , ಆಮೇಲೆ ತೆಂಕಣದಿಕ್ಕಿಗೆ ಹೋದ ತಾರನು ಅಂಗದಕುಮಾರನು ಹನುಮಂತನು ಮೊದಲಾದವರು ಬಹುದೂ ರ ಹೋಗಿ ವಿಂಧ್ಯಪರ್ವತದ ಗುಹೆಗಳಲ್ಲಿಯ ಜರಿಗಳಲ್ಲಿಯ ವನಗಳಲ್ಲಿಯ ಪರ್ವತಾಗ್ರಗಳಲ್ಲಿಯೂ ಈ ಳಗಳಲ್ಲಿಯೂ ಸೀತಾದೇವಿಯನ್ನ ರಿಸಿ ಎಲ್ಲಿಯೂ ಕಾಣದೆ ಅಲ್ಲಲ್ಲಿ ಕಂದಮೂಲ ಫಲಾಹಾರಗಳನ್ನು ಮಾಡಿಕೊಂಡು ಮುಂದೆ ಹೋಗಿ ಉದಳವಿಲ್ಲದೆಯ ವನಗಳಿಲ್ಲದೆಯ ಜನಸಂಚಾರವಿಲ್ಲದೆ ಇದ್ದ ಭಯಂಕರವಾದ ಒಂದು ಅರಣ್ಯದಲ್ಲಿ ಅರಸಿನೋಡಿ ಅಲ್ಲಿಯ ಕಾಣದೆ ಕಂಗೆಟ್ಟು ಆಪ್ರದೇಶವನ್ನು ದಾಟಿ ಮುಂದೆ ಹೋಗಿ ಮನೋಹರವಾದ ನೆಳಲುಳ್ಳ ವೃಕ್ಷಗಳಿಂದಲ೧ ಪುತ್ರಿತವಾದ ತಾವರೇ ಕಮಲಗಳುಳ್ಳ ಕೊಳಗಳಿಂದಲೂ ಅತ್ಯಂತ ಪರಿಮಳವಾದ ಪು ಪ್ರಗಳುಳ್ಳ ಲತೆಗಳಿಂದಲೂ ರಮಣೀಯವಾದ ಒಂದು ವನವನ್ನು ಕಂಡರು ; ಮಹಾತ್ಮನಾಗಿ ಸತ್ಯವಾದಿಯಾಗಿ ತದ ಸಿಯಾದ ಕಂಡಮುನೀಶ್ವರನು ಆ ವನದಲ್ಲಿರುವಾಗ ಹತ್ತು ವರುಷಗಳ ಬಾಲಕನಾದ ಆತನ ಕುಮಾರನು ಆ ವನ ದಲ್ಲಿ ತಪ್ಪಿ ಹೋಗಲು ಆ ಮುನೀಶ್ವರನು ಅತೈ೦ತ ಕೋಪಯುಕ್ತನಾಗಿ ಆ ವನವು ಅನೇಕ ಪುಪ್ಪಫಲಗಳುಳ್ಳದ್ದಾ ದರೂ ಒಬ್ಬರಿಗೂ ಆಶ್ರಯವಾಗದೆಯ ಮೃಗಪಕ್ಷಿಗಳಗೂ ಯೋಗ್ಯವಲ್ಲದೆಯೂ ಹೋಗಲೆಂದು ಶಾಪವನ್ನು ಕೊಟ್ಟಿದ್ದರಿಂದ ಅಲ್ಲಿ ಮೃಗಪಕ್ಷಿಗಳು ಮೊದಲಾದ ಯಾವ ಜೀವಜಂತುವು ಇರಲಿಲ್ಲ; ಆ ವನವನ್ನು ದಾಟಿ ಮುಂ ಗೆ ಅನೇಕ ಪರ್ವತಗಳಲ್ಲಿಯೂ ಜರಿಗಳಲ್ಲಿಯೂ ನೋಡಿ ಕಾಣದೆ ಅಲ್ಲಿಂದ ಮುಂದೆ ಹೋಗಿ ಅನೇಕ ವರ ಕಿರುಗಿದ ಲತಾವಳಿಗಳುಳ್ಳ ಒಂದು ಅರಣ್ಯದಲ್ಲಿ ಅತ್ಯಂತ ಭಯಂಕರವಾದ ಒಬ್ಬ ರಾಕ್ಷಸನನ್ನು ಕಂಡು ಎಲ್ಲರೂ ಸೇರಿ ಒಗ್ಗ ಟ್ಟಾಗಿ ನಿಂತಿರಲು ಆ ರಾಕ್ಷಸನು ಅವರನ್ನು ಕುರಿತು ಎಲೈ ಕಪಿಗಳರ, ನೀವು ನನ್ನ ಆಹಾರಕ್ಕಶವಾಗಿ ಬಂದ ಹಾಗಾಯಿತು ; ನಿಮ್ಮ ವಿಧಿಯು ನಿಮ್ಮನ್ನು ಇಲ್ಲಿಗೆ ಕಳುಹಿಸಿತು ' ಎಂದು ನುಡಿಯುತ ಕೈಗಳನ್ನೆತ್ತಿಕೊಂಡು ಅಟ್ಟಿಕೊಂಡು ಬಂದನು ; ಆಗ ವಾಲಿಯ ಪುತ್ರನಾದ ಅಂಗದಕುಮಾರನು ಅವನು ರಾವಣನಾಗಿರಬೇಕೆಂದೆಣಿಸಿ ಅಂ ಗೈಯಿಂದ ಅಪ್ಪಳಿಸಿ ಹೊಡೆದನು ; ಆ ಪೆಟ್ಟಿನಿಂದ ಘಾಯಪಡೆದು ಆ ರಾಕ್ಷಸನು ರಕ್ಷಮಸಗಿ ದೇವೇಂದ್ರನ ವಜಾ ಯುಧದ ಪೆಟ್ಟಿನಿಂದ ಪರ್ವತವು ಬೀಳುವಂತೆ ಭೂಮಿಯಲ್ಲಿ ಬಿದ್ದು ಶರೀರವನ್ನು ಬಿಟ್ಟನು. ಆಮೇಲೆ ಆ ಕವಿನಾಯಕರು ಅಲ್ಲಿಂದ ಮುಂದೆ ಹೋಗುತ ಅನೇಕ ಘೋರಾರಣ್ಯಗಳಲ್ಲಿಯ ಗುಹೆಗಳಲ್ಲಿ ಯ ಅರಸಿ ಕಾಣದೆ ಕಂಗೆಟ್ಟು ಮಹಾ ಚಿಂತಾಕ್ರಾಂತರಾಗಿ ಒಂದು ಮರದಡಿಯನ್ನು ಸೇರಿದರು.