________________
ಕಿ ೩ ೦ ಧಾ ಕಾ ೦ ಡ೪೯ ನೆ ಆ ಧ ಯ , MMMMMMMMMMMMMMMMMMMMMMMMMMMMMMMMMMMM ೪೯ ನೆ ಅ ಧ್ಯಾ ಯು , ಅ೦ ಗ ದ ನು ಕೆ ಪಿ ಗ ೪ ಗೆ ಧೈ ಈ ಹ ೪ ದ್ದು , ಆಮೇಲೆ ಅಂಗದನ ಸಮಸ್ತ ಕಪಿ ನಾಯಕರನ್ನೂ ಕರೆದು “ಎಲೇ ಕವಿನಾಯಕರುಗಳರ, ನಾವು ಅನೇಕ ದನಗಳು ಪರ್ವತಗಳು ನದಿಗಳು ದುರ್ಗಗಳು ಅತಿ ಗಂಭೀರವಾದ ಜರಿಗಳು ಗುಹೆಗಳು ಮೊದಲಾದ ಸ್ಥಳಗಳಲ್ಲಿ ಸೀತಾದೇವಿಯನ್ನರಿಸಿದರೂ ಆ ದೇವಿಯ ಸುದ್ದಿಯನ್ನೇ ಕೇಳದೆ ಹೋದೆವು ; ಸೀತಾದೇವಿಯನ್ನು ರಾವಣನು ತಂ ಕಣದಿಕ್ಕಿಗೆ ತಕೊಂಡು ಹೋದನೆಂಬ ಜನಜನಿತ ವಾರ್ತೆಯನ್ನು ಕೇಳಿದೆವಾದ್ದರಿಂದ ಇನ್ನೂ ಸುಗ್ರೀವನ ಆಜ್ಞೆ ಯಿಂದ ಈ ದಿಕ್ಕಿನಲ್ಲಿಯೆ ಅರಸಿಕೊಂಡು ಮುಂದೆ ಹೋಗೋಣ ; ಆದಕಾರಣ ಎಲ್ಲರೂ ಒಂದೇ ಮನಸ್ಸುಳ್ಳವರು ಗಿ ಒಬ್ಬರಿಗೊಬ್ಬರು ಧೈಗೃಹೇಳಿಕೊಂಡು ನಿದ್ರಾಲಸ್ಕಗಳನ್ನು ಬಿಟ್ಟು ಶರೀರದ ಬಳಲಿಕೆಯನ್ನು ಗಣನೆವಾರದಿ ರಬೇಕು ; ನಾವು ಯಾವಬಗೆಯಲ್ಲಾದರು ಸೀತಾದೇವಿಯನ್ನ ರಸಿ ಕಾಣಬೇಕು ; ಲೋಕದಲ್ಲಿ ಬಂದು ಕಾರ್ಯವು ಬಂದ ಸಮಯದಲ್ಲಿ ಮನಸ್ಸಿನಲ್ಲಿ ಉತ್ಸಾಹವು ದಕ್ಷತ್ರವು ಧೈರ್ಯವು ಇದ್ದರೆ ಆ ಕಾರ್ಯವು ಸಿದ್ಧಿಯಾಗುವ ದೆಂದು ಹೇಳುವರು ; ಆದಕಾರಣ ನೀವು ನಿಮ್ಮ ಬಳಲಿಕೆಯನ್ನು ನೋಡಬೇಡಿ ; ನಾವು ಮತ್ತು ಇರುವ ವನಗಳು ಮೊದಲಾದ ಪ್ರದೇಶಗಳಲ್ಲಿ ಅವಶ್ಯವಾಗಿ ಅರಸಿನೋಡಿ ಶ್ರೀರಾಮನ ಕರ್ಮಫಲವನ್ನು ಕಾಣೋಣ ; ನೀವು ಮನ ಸ್ಸಿನಲ್ಲಿ ದುಃಖವನ್ನು ಲಟುಮಾಡಿಕೊಂಡು ಸುಮ್ಮನಿರುವದು ಕಾರವಲ್ಲ; ಸುಗ್ರೀವನು ಮಹಾ ಕೊಪಶೀಲನು ; ನಿಷ್ಠುರವಾದ ಆಜ್ಞೆಯನ್ನು ಮಾಡುವವನು ; ಅಂಥವನಿಗೆ ಅಂಜಬೇಕು ; ಶ್ರೀರಾಮನಿಗೆ ಪ್ರಿಯವಾದ ಕಾರಣವನ್ನು ಸಾಧ್ಯಮಾಡಬೇಕು ; ನಾನು ನಿನಗೆ ಹಿತವಾದ ಮಾತನ್ನು ಹೇಳಿದೆನು ; ಇನ್ನು ನಿಮ್ಮ ಮನಸ್ಸು ಬಂದಂತೆ ಮಾ ಡಿಕೆ ; ಸಮಸ್ತ ಪ್ರಾಣಿಗಳಗೂ ಕವಯೇ ಒಳ್ಳದು ” ಎಂದು ನುಡಿದನು. ಆ ಮಾತನ್ನು ಕೇಳಿ ಗಂಧಮಾದನನು ತೃಪೆಯಿಂದ ಕಂಗೆಟ್ಟವನಾಗಿ ಮೆಲ್ಲಗೆ “ ಎಲೈ ಕಸಿನಾಯಕರುಗಳ ರ, ಅಂಗದಕುಮಾರನು ಹೇಳಿದ ಮಾತು ನಾವು ಬಂದ ಕಾರ್ಯಕ್ಕೆ ಅನುಕೂಲವಾಗಿ ನಮಗೆಲ್ಲರಿಗೂ ಹಿತವಾದಂಥಾ ದ್ದು ; ಇನ್ನು ನಾವು ನಾನಾಪರ್ವತಗಳಲ್ಲಿಯ ಗುಹೆಗಳಲ್ಲಿಯೂ ಜರಿಗಳಲ್ಲಿಯೂ ಕಾನನಗಳಲ್ಲಿಯೂ ಬಯಲು ರಾಜ್ಯಗಳಲ್ಲಿಯೂ ಪರ್ವತಗಳ ವಜ್ರಗಳಲ್ಲಿಯ ಮತ್ತು ಸುಗ್ರೀವನು ಹೇಳಿದ ಸಮಸ್ತ ಸ್ಥಳಗಳಲ್ಲಿಯೂ ಅರಸಿ ನೋಡುವದೇ ಕಾರ್ಯವು ” ಎಂದು ಅಂಗದನ ವಾಕ್ಯಕ್ಕೆ ಅನುಸಾರವಾಗಿ ಹೇಳಿದನು. ಆಮೇಲೆ ಬಲವಂತರಾದ ಆ ಕಪಿನಾಯಕರೆಲ್ಲರು ಎದ್ದು ವಿಂಧ್ಯಪರ್ವತದಿಂದ ತೆಂಕಣದಿಕ್ಕೆಲ್ಲವನ್ನು ಹುಡುಕಿ ನೋಡಿ ಆ ದಿಕ್ಕಿನಲ್ಲಿ ಶರತ್ಕಾಲದ ಮೇಘದಂತೆ ಅತಿ ಬಿಳುಪಾದ ಬೆಳ್ಳಿಬೆಟ್ಟವನ್ನು ಕಂಡು ಆ ಬೆಟ್ಟದಲ್ಲಿದ್ದ ಜರಿಗ ಳಲ್ಲಿಯ ಗುಹೆಗಳಲ್ಲಿಯೂ ಮಹತ್ತಾದ ಕೂಡುಗಲ್ಲುಗಳಲ್ಲಿಯೂ ನೋಡಿ ಅಲ್ಲಿಂದ ಮುಂದೆ ಇದ್ದ ಅನೇಕ ಪರ್ವತಗಳಲ್ಲಿಯೂ ಲೋಧ ವೃಕ್ಷಗಳಲ್ಲಿಯೂ ನೋಡಿ ಆ ಬೆಟ್ಟದ ಕೋಡುಗಲ್ಲಿನ ತುದಿಯನ್ನೇರಿ ಸುತ್ತಲು ನೋಡಿ ಸೀತಾದೇವಿಯನ್ನು ಕಾಣದ ಶಕ್ತಿಗುಂದಿ ಮತ್ತೊಂದು ದೊಡ್ಡ ಬೆಟ್ಟವನ್ನು ಕಂಡು ಅದಕ್ಕೆ ಹೋಗಿ ಅಲ್ಲಿದ್ದ ಗುಹೆಗಳಲ್ಲಿಯೂ ಜರಿಗಳಲ್ಲಿಯೂ ಕಲ್ಲರೆಗಳಲ್ಲಿಯೂ ನೋಡಿ ಆ ದೇವಿಯನ್ನು ಕಾಣದೆ ಆ ಬೆಟ್ಟದಿಂದ ಭೂಮಿಗಿಳಿದು ಕಂಗೆಟ್ಟು ಒಂದು ಮರದಡಿಯಲ್ಲಿ ಕ್ಷಣಮಾತ್ರವು ಕುಳಿತುಕೊಂಡಿದ್ದು ಶ್ರಮೆಯನ್ನು ಪರಿಹರಿಸಿ ಕೊಡು ಆ ಮರದಡಿಯನ್ನು ಬಿಟ್ಟು ಮತ್ತೂ ತೆಂಕಣದಿಕ್ಕಾಗಿ ಸೀತಾದೇವಿಯನ್ನ ರಸಿಕೊಂಡು ಸಂಚರಿಸು ತಿದ್ದರು.