ಕೆಲವರು ನಗುವರು; ಮತ್ತೆ ಕೆಲವರು ಅಳುವರು. ಕೆಲವರು ನಗುತ್ತ ಸಂಗಡಲೇ ಕಣ್ಣೀರನ್ನಿಳಿಸುವರು. ಕೆಲವರು ಅತ್ತತ್ತು ಕಡೆಯಲ್ಲಿ ನಕ್ಕುಬಿಡುವುದೂ ಉಂಟು. ಆದರೆ, ನಮ್ಮಲ್ಲಿ ಯಾರೇ ಆಗಲಿ, ಅಳುವನ್ನು ಮೆಚ್ಚುವುದಿಲ್ಲ; ಅನ್ಯರ ಅಳುವನ್ನೂ ಸಹಿಸಿಕೊಳ್ಳುವುದಿಲ್ಲ. ಕಿನ್ತು(ಆದರೆ) ಆವಾಗಲೂ ನಗುತ್ತಲೇ ಇರುವವರಿಗೆ ಮಾತ್ರ ಅನ್ಯರು ಅಳುತಲಿರುವುದೇಕೆಂದು ಅರಿವುದೇ ಇಲ್ಲ.
ಆ ವೃದ್ಧೆಯ ರೋಧನವಾದರೋ, ಸಾಮಾನ್ಯವಾದುದಲ್ಲ. ಹಿಂದೆ ಅವಳ ಸಂಸಾರವು ಸುಖಮಯವಾಗಿಯೇ ಇದ್ದುದು. ಅವಳ ಮನೆಯ ಅಂಗಳವು ಪುತ್ರ ಕನ್ಯೆಯರ ಸುಖದ ಆಟಗಳಿಂದಲೇ ಆವಾಗಲೂ ಸುಶೋಭಿತವಾಗಿಯೇ ಇದ್ದುದು. ತನ್ನ ಪತಿಯ ಮೇಲಣ ಪ್ರೇಮದಿಂದ ಅವಳ ಹೃದಯವು ಸದಾ ತುಂಬಿಕೊಂಡೇ ಇದ್ದಿತು. ಕಮಲೆಯ ಕೃಪೆಯಿಂದ, ದುಃಖವೆಂಬ ಶಬ್ದವೂ ಸಹಾ ಅವಳಿಗೆ ಗೋಚರವಾಗಿದ್ದುದಿಲ್ಲ. ಪರಂತು, ಆಕೆಯ ನಿರ್ಮಲವಾದ ಹೃದಯಾಕಾಶದಲ್ಲಿ ಚಿರದುಃಖದ ಕಾಲಮೇಘವೊಂದು ಅದೆಲ್ಲಿಂದ ಹರಿದುಬಂದುದೋ-ಅರರಿವರು?ಕಮಲೆಯ ಕೃಪೆಯೂ ಕಾಲಾಂತರದಲ್ಲಿ ಕುಂದುತ್ತೆ ಬಂದುದು. ವೃದ್ಧೆಯ ಪುತ್ರಕನ್ನೆಯರು ಅಳಿದು ಹೋದರು. ತನ್ನ ಪ್ರಾಣಾಧಿಕನಾದ ಪತಿಯನ್ನೂ ಅವಳು ಕಳೆದುಕೊಂಡಳು. ಪುತ್ರಕನ್ನೆಯರ ಮಧುರಹಾಸದಿಂದ ಉಜ್ವಲಿತವಾದ ಆಕೆಯ ಗೃಹವು, ಇಂದಿಗೆ ದರಿದ್ರತೆಯಿಂದುಂಟಾದ ತಪ್ತಶ್ವಾಸಗಳಿಂದ ಮಾತ್ರ ತುಂಬಿಕೊಂಡಿದೆ! ಅದುಕಾರಣ ಆಕೆಯು ಇಂದು ಪರ್ಣಕುಠೀರವಾಸಿನಿ; ಆಕೆಗೆ ಆರ ಸಾಹಾಯ್ಯವೂ ಇಲ್ಲ, ಸುಬಲವೂ ಇಲ್ಲ! ಮೊದಲಾದರೆ, ಅವಳ ಆಜ್ಞೆಗಳನ್ನು ಪ್ರತಿಪಾಲನೆಗಯ್ಯಲು ಎಷ್ಟೋ ದಾಸದಾಸೀ ಜನಗಳು ಪುಣ್ಯಾರ್ಥಿಯರೆಂದೆನಿಸಿಕೊಳ್ಳುತಲಿದ್ದರು! ಈಗ ಅವಳಿಗೆ ಒಂದು ಹಿಡಿಯ ತುಂಬ ಉದರಾನ್ನಕ್ಕೂ ಲಾಲಾಯಿತೆಯಾಗಿ ಬಿದ್ದುಕೊಂಡೇ ಇರಬೇಕಾಗಿದೆ. ಆಹಹ! ಇದಕ್ಕಿಂತಲೂ ಹೆಚ್ಚಿನ ದುರವಸ್ಥೆಯೂ ಉಂಟಾಗುವುದಿದೆಯೇ? ವೃದ್ಧೆಗೆ ಇನ್ನು ಕನ್ನೆಯೊಬ್ಬಳೇ ಮಾತ್ರ ಉಳಿದಿರುವಳು. ತನಗೆ ಕಣ್ಣುಗಳು ಕಾಣವು; ನಡೆಯಲು ಬರಲಿಲ್ಲ; - ಬಾಲಿಕೆಯು ಬೇಡಿ ತರುವ ಭಿಕ್ಷಾ