ನ್ನವೇ ಅವಳಿಗೆ ಅದೊಂದೇ ಜೀವನೋಪಾಯ, ಇನ್ನೂ ಕಷ್ಟಗಳು ಒದಹಿ ಬರುವುವೋ ಏನೋ?
ಆದರೆ ತನಗೊಂದು ಪುತ್ರಿ ರತ್ನವು ಇನ್ನೂ ಇದೆಯೆಂಬುದೇ ಅವಳ ಹೃದಯಕ್ಕೆ ಯಥೇಷ್ಟವಾದುದಾಯ್ತು ಈಶ್ವರನಿಂದ ತಾನು ಈ ವಿಧದಲ್ಲಿ ಅನುಗ್ರಹೀತೆಯಾಗಿಹೆನೆಂಬುದೇ ಅವಳಿಗೆ ಅನಂದಕರವಾದುದು. ಕಿನ್ತು ಆ ಬಾಲಿಕೆಯು ಇಂತಹ ದಾರುಣವಾದ ಬಿಸಿಲಿನಲ್ಲಿ ಅವಕಡೆಯಲ್ಲಿ ಸುತ್ತುತಲಿರುವಳೋ-ಎಲ್ಲಿ ಭಿಕ್ಷೆಯನ್ನೆತ್ತುವಳೋ ಅದು ಆರಿಗೆ ಗೊತ್ತಿದೆ ಅಥವಾ ಅವಳು ಎಲ್ಲಿ ಮೂರ್ಛೆಗೊಂಡಿರುವಳೋ ಪಥದಲ್ಲಿ ಬಿದ್ದಿರುತ್ತೆ ಪ್ರಾಣವನ್ನು ಕಳೆದುಕೊಂಡು ಇರುವಳೋ? ಚಿಃ! ಇದೆಂತಹ ದುಶ್ಚಿಂತೆ! ವೃದ್ಧೆಯ ಎರಡೂ ಕಣ್ಗಳಿಂದ ದರದರನೆ ಅಶ್ರುಪಾತವುಂಟಾಗಲಾರಂಭಿಸಿತು.
ಕ್ರಮೇಣ ಅವೇ ಕಣ್ಣುಗಳು ಉಜ್ವಲತೆಯನಾಂತುವು ಅದೇಕೆ? ದ್ವಾದಶವರ್ಷೀಯೆಯಾದೊಬ್ಬ ಬಾಲಕಿಯು ಅಷ್ಟರಲ್ಲಿ ಆ ದ್ವಾರದ ಬಳಿ ಉಪಸ್ಥಿತೆಯಾದಳು. ಆಗಲಾ ಅಂಧಕಾರದ ಕುಟೀರದಲ್ಲಿ ಆಕಸ್ಮಿಕವಾಗಿ ಜ್ಯೋತಿರ್ಮಯಿಯಾದ ಸೌದಾಮಿನಿಯು ವಿಕಾಸಗೊಂಡಂತಾದುದು !
ಅಹದು ಇವಳೇ ಆ ಬಾಲಿಕೆ ! ಚಿಂದಿಚಿಂದಿಯಾದ ಬಟ್ಟೆ ಬರೆಗಳು; ಅಂಗಾಂಗಳಲ್ಲೆಲ್ಲ ದೂಳು ; ತೀಕ್ಷ್ಣವಾದ ಕಿರಣಗಳಿಂದ ಕೆಂಪೇರಿದ ಮುಖಮಂಡಲ; ಲಲಾಟದಮೇಲೆ ಬಿಂದ ಬಿಂದುವಾಗಿ ಹೊಂದಿರುವ ಸ್ವೇದಮಾಲೆ ವಿಶುಷ್ಕವಾದ ವದನ,- ಇಂತಹಾ ಹೀನಾವಸ್ಥೆಯಲ್ಲೂ ಅವಳ ಸೌಂದರ್ಯವು ಮಾತ್ರ ಒಂದೇ ಒಂದು ಬಿಂದುವಿನ ಮಟ್ಟಿಗೆ ಕುಂದಿದುದಿಲ್ಲ. ಅದೇ ದಿರ್ಫುನಯನಳು: ವಕ್ರವಾದ ಸೂಕ್ಷ್ಮ ಭ್ರೂಯುಗಲ; ಚಂಪಕಾಕಲಿಕೆಯಂತಹ ನಾಸಿಕ; ಫುಟನಾಭಂಗಿಯನುಳ್ಳ ಲಲಾಟ ; ಸ್ಫುರಿತಮನೋಮುಗ್ಧಕರವಾದ ಗಂಡಸ್ಥಲ ! ಅಹ ! ಸೃಷ್ಟಿಕರ್ತನು ಆಪಾರ ಅಧ್ಯವಸಾಯದಿಂದ ತನ್ನ ಶಿಲ್ಪನೈಪುಣ್ಯವನ್ನು ಇವಳಲ್ಲಿ ಪ್ರಕಾಶಗೊಳಿಸಿರುವನು, ಆದರೆ ಈ ಸ್ವರ್ಣಕಮಲವು ಇಂತು ದೂಳಿನಲ್ಲಿ ಬಿದ್ದುಕೊಂಡಿರುವುದದೇತಕ್ಕೂ? ಅಭಗಿನಿಯಾದಿವಳಿಗೆ ಅಂತಹ ಸೌಂದರ್ಯವೇಕೆಯೊ?
ವೃದ್ಧೆಯು ಬಾಲೆಯನ್ನು ಕಂಡೊಡನೆಯೆ-'ಕಮಲೆ, ಬಂದೆಯಮ್ಮಾ?!” ಎಂದು ಉಲ್ಲಾಸಭರದಿಂದ ಅಂದಳು ಅಹುದು; ಈ ಬಾಲಿಕೆ