ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದವೇ ಅಥವಾ ಬಂಡವಾಳವಾದವೇ ? ೧೧೩ ಸಮಾಜವಾದದ ಧೈಯ ಹೊಸದಲ್ಲವೆಂದು ಕ್ರೈಸ್ತ ಸಮಾಜವಾದಿಗಳು ಹೇಳಿದರು. ಏಸುಕ್ರಿಸ್ತ ಮತ್ತು ಇತರ ಸಾಧುಸಂತರು ಹೇಳಿರುವ ನೀತಿ ಗಳನ್ನು ಉದಹರಿಸಲಾಯಿತು. ಜನರು ಕ್ರಿಸ್ತನ ಬೋಧನೆಗಳನ್ನು ಮರೆತಿರುವುದೇ ಅವ್ಯವಸ್ಥೆಗೆ ಕಾರಣವೆಂದರು. ಆದುದರಿಂದ ಕ್ರಿಸ್ತನ ಉಪದೇಶಗಳಲ್ಲಿ ನಂಬಿಕೆಯಿಟ್ಟು ಸನ್ಮಾರ್ಗಿಗಳಾಗಬೇಕೆಂದರು. ದಾನಧರ್ಮ ಗಳನ್ನು ಮಾಡುವುದಾದರೆ, ನೆರೆಹೊರೆಯವರನ್ನು ಸಹೋದರ ಸ ದರಿ ಯರೆಂದ ಭಾವಿಸುವುದಾದರೆ ಎಲ್ಲವೂ ಸರಿಹೋಗುವುದೆಂದರು, ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ತಪ್ಪಿಲ್ಲ; ಮುಖ್ಯ, ಬಂಡವಾಳಗಾರರು ತಾವು ಗಳಿಸುತ್ತಿ ರುವ ವರಮಾನ ಮತ್ತು ಹೊಂದಿರುವ ಸಂಸತ್ತು ಎಲ್ಲವೂ ಸಮಾಜಕ್ಕೆ ಸೇರಿ ದ್ದೆಂದು ಬಗೆದು, ತಾವು ಸಮಾಜದ ಧರ್ಮದರ್ಶಿಗಳೆಂದು (Trustees) ಭಾವಿಸುವುದಾದರೆ ವರ್ಗರಹಿತ್ಯ, ವಿರಸರಹಿತ ಮತ್ತು ಶೋಷಣಾರಹಿತ ಸುಖೀಸಮಾಜ ಆಗಮಿಸುತ್ತದೆ ಎಂದರು. ವಿಕಾಸ ಸಮಾಜವಾದಿಗಳು 1 ತಮ್ಮ ವಾದವನ್ನು ಮಂಡಿಸಿ, ಸಮಾಜ ವಾದ ಒಂದು ಧೈಯ ಅಥವಾ ಗುರಿ ಮಾತ್ರ ಎಂದರು. ಆದುದರಿಂದ ಅದು ಕೂಡಲೇ ಬರಲು ಸಾಧ್ಯವಿಲ್ಲ; ಸಾವಧಾನವಾಗಿ ಅದು ಬರಬೇಕು, (1) ಎಡ್ವರ್ಡ್ ಬರ್ ಸೈನ್ ಎಂಬ ಎಂಬ ಜರ್ಮನಿ ದೇಶದ ಸುಧಾರಕ ಸಮಾಜವಾದಿ ವಿಕಾಸಸಮಾಜವಾದವನ್ನು ಪ್ರತಿಪಾದಿಸಿದನು. ಮಾರ್ಕ್ಸ್ ವಿಮರ್ಶಿಸಿದ ರೀತ್ಯಾ ಬಂಡವಾಳ ಆರ್ಥಿಕ ವ್ಯವಸ್ಥೆಯ ಪತನ ಮತ್ತು ಸಮಾಜ ವಾದಿ ವ್ಯವಸ್ಥೆಯ ಆಗಮನ ಇವು ದುಸ್ಸಾಧ್ಯವೆಂದೂ, ಸದ್ಯದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಪತನ ಸಂಭವಿಸುವುದಿಲ್ಲವೆಂದೂ ಈತನ ವಾದವಾಗಿದ್ದಿತು. ಕ್ರಮೇಣ ಕಾರ್ಲಾಟ್ ಮತ್ತು ಇತರರು ವಿಕಾಸವಾದದ ಆರಾಧಕರಾದರು, ವಿಕಾಸ ಸಮಾಜವಾದದ ಜೊತೆಗೆ ಇನ್ನೂ ಹಲವು ಬಗೆಯ ವಾದಗಳು ವಿಂಗಡಿಸಬಹುದು, ಪ್ರತಿಪಾದಿತವಾದವು. ಇವುಗಳನ್ನು ಎರಡು ಬಗೆಯಾಗಿ