ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ವೈಜ್ಞಾನಿಕ ಸಮಾಜವಾದ ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ಕೆಲವು ದೋಷಗಳನ್ನು ಎಲ್ಲರೂ ಒಪ್ಪುವ ರೀತಿಯಲ್ಲಿ ತಿದ್ದು ಪಡಿ ಮಾಡುವುದರ ಮೂಲಕ ಧೈಯವನ್ನು ಸಾಧಿಸ ಬೇಕಾಗಿದೆ ಎಂದರು. ವಾದ. ಬಂಡವಾಳ ಒಂದು ಆರ್ಥಿಕ ವಾದ, ಇನ್ನೊಂದು ರಾಜಕೀಯ ಆರ್ಥಿಕವ್ಯವಸ್ಥೆ ನಿರೀಕ್ಷಣೆ ಮಾಡಿದಂತೆ ಸುಗುಮವಾಗಿಯೂ ವ್ಯವಸ್ಥಿತ ರೀತಿ ಯಲ್ಲಿಯೂ ವರ್ತಿಸದಿದ್ದುದು ಬಂಡವಾಳ ಶಾಹಿ ಅರ್ಥಶಾಸ್ತ್ರಜ್ಞರನ್ನು ದಿಗ್ಧಮ ಗೊಳಿಸಿತು. ಬಂಡವಾಳಶಾಹಿ ಅರ್ಥ ಶಾಸ್ತ್ರವನ್ನು ಮರುವಿಮರ್ಶೆಗೆ ಒಳಪಡಿಸ ಲಾಯಿತು. ಈ ರೀತಿ ಹೊರಬಿದ್ದ ಹೊಸ ವಾದಗಳಲ್ಲಿ ಜೆ. ಎಂ. ಕೀನ್ಸ್ ಎಂಬ ಅರ್ಥಶಾಸ್ತ್ರಜ್ಞನ ವಾದವು ಬಹು ಮುಖ್ಯವಾದದ್ದು. ಕೂಡಾಣಿಕ (Savings) ಮತ್ತು ಬಂಡವಾಳ ವಿನಿಯೋಗದ (Investment) ನೀತಿ ಮತ್ತು ಹಣಕಾಸಿನ ನೀತಿಯ ಮೂಲಕ ನಿರುದ್ಯೋಗವನ್ನೂ, ಆರ್ಥಿಕ ಕೊಭೆಯನ್ನೂ ತಡೆಗಟ್ಟು ವುದು ಸಾಧ್ಯವೆಂದನು, ಒಟ್ಟಿನಲ್ಲಿ, ಆಧುನಿಕ ಬಂಡವಾಳಶಾಹಿ ಅರ್ಥ ಶಾಸ್ತ್ರಜ್ಞರು ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರ ಪ್ರವೇಶಿಸುವುದನ್ನು ಅಂಗೀಕರಿಸಿದ್ದಾರೆ. ಮೊದಲು ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರವು ಪ್ರವೇಶಿಸ ಕೂಡದೆಂಬುದು ಬಂಡವಾಳ ಶಾಹಿ ಅರ್ಥಶಾಸ್ತ್ರಜ್ಞರ ವಾದವಾಗಿತ್ತು. (ಪುಟ 64, 65 ನೋಡಿ.) ರಾಜಕೀಯ ವಾದಗಳಲ್ಲಿ * ಬಹುವಾದ' (Pluralism) ಬಹು ಮುಖ್ಯ ವಾದದ್ದು. ಡುಗ್ರೀ (Duguit) ಮತ್ತು ಕ್ರಾಬೆ (Krabbe) ಈ ವಾದದ ಪ್ರಮುಖ ಪ್ರತಿಪಾದಿತರು. ಎಲಿಯಟ್, ಲಾಸ್ಕಿ, ಬಾರ್‌ರ್ ಇವರುಗಳು ಈ ವಾದವನ್ನು ಬೆಳಸಿದ್ದಾರೆ. ಯುದ್ಧಗಳಿಗೂ, ರಾಜ್ಯದಲ್ಲಿ ಸರ್ವಾಧಿಕಾರ ಛಾಯೆ ಗಳಿಗೂ ಮತ್ತು ನಶಿಸುತ್ತಿರುವ ವ್ಯಕ್ತಿ ಸ್ವಾತಂತ್ರಗಳಿಗೂ ಸಾರ್ವಭೌಮ ತತ್ತ್ವದ (Sovereignty) ಆರಾಧನೆಯೇ ಪ್ರಮುಖ ಕಾರಣವಾಗಿದೆ ಎಂದು ವಾದಿಸ ಲಾಗಿದೆ, ಸಾರ್ಮಭೌಮ ತತ್ತ್ವದ ನಿರಾಕರಣೆಗೆ ಕರೆಕೊಡಲಾಗಿದೆ, ಈ ವಾದಗಳ ಬಗ್ಗೆ ಹೆಚ್ಚು ಪ್ರಸ್ತಾವನೆ ಅನಗತ್ಯ ಸಾರ್ಮಭೌಮ ತತ್ತ್ವವು ಕುಸಿದಿಲ್ಲ ಮತ್ತು ಕುಸಿಯುವ ಚಿನ್ನೆಗಳೂ ಇಲ್ಲ.