ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ 2 ವೈಜ್ಞಾನಿಕ ಸಮಾಜವಾದ ಕಾರಣವಾದ ಬಂಡವಾಳ ಆರ್ಥಿಕವ್ಯವಸ್ಥೆಯ ನಾಶಕ್ಕೆ ಬೆಂಬಲವೂ ಬಹುಮತವೂ ಸಿಕ್ಕುತ್ತದೆ. ಸಮಾಜವಾದದ ಸ್ಥಾಪನೆ ಸುಗಮವಾಗುತ್ತದೆ. ಗಿ ಸಮಾಜವಾದಿಗಳು 1 ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉಂಟಾಗಿ ರುವ ಅವ್ಯವಸ್ಥೆಗಳಿಗೆ ಉತ್ಪಾದನಾ ಸಾಧನಗಳ ನಿರ್ವಹಣೆಯಲ್ಲೂ ಮತ್ತು ರಾಜ್ಯಾಡಳಿತದಲ್ಲೂ ದುಡಿಯುವವರಿಗೆ ಮತ್ತು ಜನಸಮುದಾಯಕ್ಕೆ ಸರಿ ಸಮಾನ ಪ್ರಾತಿನಿಧ್ಯ ಮತ್ತು ಪ್ರಜಾಸತ್ತೆ ಇಲ್ಲದಿರುವುದೇ ಕಾರಣವೆಂದು ತಿಳಿಸಿದರು. ಆದುದರಿಂದ ಆರ್ಥಿಕ ಕ್ಷೇತ್ರದಲ್ಲಿ ಪ್ರತಿಯೊಂದು ಗುಂಪಿಗೂ ಪ್ರಾಧಾನ್ಯತೆ ಮತ್ತು ಪ್ರಾತಿನಿಧ್ಯವೂ, ಮತ್ತು ಅದರಂತೆ ಪ್ರತಿಯೊಂದು ಗುಂಪಿಗೂ ಪ್ರಾತಿನಿಧ್ಯ ಇರುವಂತೆ ವಿಧಾನಸಭೆಯೊಂದನ್ನು ರಚಿಸಬೇ ಕೆಂದರು. ಆಗ ಯಾವ ವರ್ಗವೂ ಮೇಲುಗೈ ಆಗದೆ, ವರ್ಗವಿರಸಕ್ಕೆ ಆಸ್ಪದವಿಲ್ಲದೆ, ರಾಜಕೀಯ ಪ್ರಜಾಸತ್ತೆಯ ಜೊತೆಗೆ ಆರ್ಥಿಕ ಪ್ರಜಾ ಸತ್ತೆಯೂ ಲಭಿಸುವುದೆಂದರು. ಸಿಂಡಿಕ ಸಮಾಜವಾದಿಗಳು 2 (Syndicalists) ತಮ್ಮ ವಾದವನ್ನು ಮಂಡಿಸಿ, ಇತರ ಸಮಾಜವಾದೀ ಮಾರ್ಗಗಳಿಂದ ಸಮಾಜವಾದದ ಆಗಮನ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ನಾಶ ಇವು ನಿಧಾನವಾಗುವು ದೆಂದೂ, ಆದುದರಿಂದ ಕಾರ್ಮಿಕರು ಸಾರ್ವತ್ರಿಕ ಮುಷ್ಕರವನ್ನು ಹೂಡ ಬೇಕೆಂದೂ, ಅದರ ಮೂಲಕ ಸಮಾಜವಾದ ಕೂಡಲೇ ಲಭಿಸುವುದೆಂದೂ ಸೂಚಿಸಿದರು. (1) ಜಿ. ಡಿ. ಎಚ್. ಕೋಲ್, ಪಂಟ, ಎಸ್. ಜಿ. ಹಾಯ್ಸನ್ ಮತ್ತು ಇತರರಿಂದ ಪ್ರತಿಪಾದಿತವಾದ ವಾದ, ವಿಲಿಯಮ್ ಮಾರಿಸ್ ಮತ್ತು ಜಾಗ ರಸ್ಕಿನರ ಬರೆವಣಿಗೆಗಳು ಈ ವಾದದ ಪ್ರತಿಪಾದಕರಮೇಲೆ ತುಂಬಾ ಪರಿಣಾಮವನ್ನು ಉಂಟುಮಾಡಿದವು. ಬಂಡವಾಳ ಆರ್ಥಿಕವ್ಯವಸ್ಥೆ ಒಂದು ಯಾಂತ್ರಿಕ ವ್ಯವಸ್ಥೆ ಯಾಗಿ ವ್ಯಕ್ತಿಯೂ ಸಹ ಒಂದು ಯಂತ್ರವಾಗುತ್ತಿರುವುದನ್ನು ತಡೆಗಟ್ಟುವುದು ಅಗತ್ಯವಾಗಿದೆ ಎಂದು ರಸ್ಕಿನ್ನನ ವಾದವಾಗಿತ್ತು. ಫೇ ಬಿಯನ್ ಸಮಾಜವಾದಿಗಳಿಗಿಂತ ಗಿಲ್ಡ್ ಸಮಾಜವಾದಿಗಳು ಸ್ವಲ್ಪ ಉಗ್ರ ವಾದಿಗಳು, ಫೇಬಿಯನ್ನರು ನಂಬಿದ್ದಂತೆ ಕೇವಲ ಸುಧಾರಣೆಗಳಿಂದ ಸಮಾಜ ವಾದಿ ವ್ಯವಸ್ಥೆ ಬರುವುದಿಲ್ಲವೆಂದು ತಿಳಿಸಿದರು. ಆದರೆ ಅವರಂತೆಯೇ ಮಾರ್ಕ್ಸ್ ವಾದಸರಣಿಗೆ ವಿರೋಧವನ್ನು ವ್ಯಕ್ತಪಡಿಸಿದರು. (2) ಬ್ಲಾಂ ಎಂಬಾತನು ಈ ತತ್ತ್ವದ ಮೂಲ ಪ್ರತಿಪಾದಕನು, ಕಾಲ ಕ್ರಮೇಣ ತಮ್ಮ ಹಲವು ರೂಪಾಂತರಗಳನ್ನು ತಾಳಿತು, ಕೆಲವರು ಬಾಕುನೀನ್ ಎಂಬ