ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದವೇ ಅಥವಾ ಬಂಡವಾಳವಾದವೇ ? ಈ ವಾದಗಳ ಬಗ್ಗೆ ಹೆಚ್ಚು ಪ್ರಸ್ತಾವನೆ ಇಲ್ಲಿ ಅನಾವಶ್ಯಕ. ಮುಖ್ಯ ವಾಗಿ 1919 ರ ನಂತರ ಚುನಾವಣೆಗಳಲ್ಲಿ ಬಹುಮತಗಳಿಸಿ, ಕ್ರಾಂತಿ ಇಲ್ಲದೆ, ಮೊಟ್ಟ ಮೊದಲನೆಯಬಾರಿಗೆ ದುಡಿಮೆಗಾರರ ಸರ್ಕಾರ (ಲೇಬರ್ ಸರ್ಕಾರ) ಸ್ಥಾಪಿತವಾದ ದೇಶವೆಂದರೆ ಇಂಗ್ಲೆಂಡ್, ಆದರೆ ಈ ಸರ್ಕಾರ ಬಹು ಕಾಲವಿರಲಿಲ್ಲ. ಇದ್ದಷ್ಟು ಕಾಲದಲ್ಲಿ ಸಮಾಜ ವಾದಿ ನೀತಿಯನ್ನು ಸರ್ಕಾರ ಅನುಸರಿಸಲಿಲ್ಲ. ಸಮಾಜವಾದದ ಸೋಗಿನಲ್ಲಿ ಸ್ವಾಮ್ಯವರ್ಗದ ಪ್ರತಿನಿಧಿಗಳು ಶಾಸನ ಸಭೆಯಲ್ಲಿ ಮತ್ತು ಮಂತ್ರಿಮಂಡಲ ದಲ್ಲೂ ಇದ್ದದ್ದರಿಂದ ಸ್ವಾಮ್ಯಕ್ಕೆ ಚ್ಯುತಿ ಬರುವ ಕಾನೂನುಗಳು ಬರಲಿಲ್ಲ. ಎಲ್ಲವೂ ಬಾಯಿಮಾತಿನ ಮತ್ತು ಭಾಷಣಗಳ ಸಮಾಜವಾದವಾಯಿತೇ ವಿನಾ ಕಾರ್ಯತಃ ಕಾರ್ಮಿಕವರ್ಗಕ್ಕೆ ಯಾವ ಸೌಲಭ್ಯಗಳೂ ಯಲಿಲ್ಲ. ಲೇಬ‌ಸರ್ಕಾರ ಬರುವ ಮುಂಚೆ ಯಾವ ಆರ್ಥಿಕ ವ್ಯವಸ್ಥೆ ಇದ್ದಿತೋ ಅದೇ ವ್ಯವಸ್ಥೆ ಯಾವ ಬದಲಾವಣೆಗಳನ್ನೂ ಹೊಂದದೆ ಮುಂದುವರಿಯಿತು. ಕಾರ್ಮಿಕರ ಸರ್ಕಾರ ಬಂದರೂ ಸಮಾಜವಾದೀ ದೊರೆ ವ್ಯವಸ್ಥೆಯನ್ನು ತರುವುದು ಅಸಾಧ್ಯವೆಂಬುದನ್ನು ಕಾರ್ಮಿಕವರ್ಗಕ್ಕೆ ಬಂಡವಾಳವರ್ಗ ವೇದ್ಯ ಪಡಿಸಿತು ; ಯಾವ ಬಣ್ಣದ ಸರ್ಕಾರವೇ ಬರಲಿ, ಯಾವ ಭಾಷಣವೇ ನಡೆಯಲಿ, ಖಾಸಗೀ ಸ್ವಾಮ್ಯಕ್ಕೆ ಧಕ್ಕೆ ಬರುವುದಿಲ್ಲ ವೆಂಬುದು ಖಚಿತವಾಯಿತು. ಉಳಿದ ಬಂಡವಾಳಶಾಹಿ ದೇಶಗಳಲ್ಲಿ ಕಾರ್ಮಿಕವರ್ಗದ ಚಳವಳಿಗಳು ಬಗೆ ಬಗೆಯ ಸುಧಾರಕ ಸಮಾಜವಾದೀತತ್ತ್ವಗಳ ಮತ್ತು ಸುಧಾರಕ ಮುಖಂಡರುಗಳ ಪ್ರಭಾವಕ್ಕೆ ಸಿಲುಕಿದವು. ಈ ಬಗೆ ಬಗೆಯ ಸಮಾಜ ವಾದಿಗಳು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ತಮ್ಮ ಚಟುವಟಿಕೆಯನ್ನು ಬೇಕ೦ದರು. ಅರಾಜಕವಾದಿ (anarchist) ಯ ಹಿಂಬಾಲಕರಾದರು, ಕಾರ್ಮಿಕರ ಪ್ರಭುತ್ವಕ್ಕೆ ಅಡ್ಡಿ ಬರುವ ಬಂಡವಾಳವರ್ಗವನ್ನು ಶಕ್ತಿಪ್ರದರ್ಶನ ಮೂಲಕ ದಮನ ಮಾಡ ಯಾವ ಸಂಘ ವ್ಯವಸ್ಥೆಯಾಗಲೀ, ಕಟ್ಟು ಪಾಡುಗಳಾಗಲೀ ಸಮಾಜದಲ್ಲಿ ಇರಕೂಡದೆಂದರು. ಇನ್ನು ಕೆಲವರು ಸಿಂಡಿಕವಾದ (Syndicalism) ವನ್ನು ಮಂಡಿಸಿದ ಜಾರೈಸ್ ಸೊರೆಲ್ ಎಂಬಾತನ ಹಿಂಬಾಲಕರಾದರು. ವಾಸ್ತವ ಮುಷ್ಕರಕ್ಕಿಂತ ಮುಷ್ಕರ ನಡೆಯುತ್ತದೆಂಬ ಧೈಯದ ಪಠನೆಯೇ ಕಾರ್ಮಿಕರ ಪ್ರಭುತ್ವವನ್ನು ತರುತ್ತದೆಂದರು,