ವೈಜ್ಞಾನಿಕ ಸಮಾಜವಾದ ಯಲ್ಲಿ ಹಿಟ್ಲರ್ ಸ್ಟೇಯಿನಿನಲ್ಲಿ ಫ್ರಾಂಕ್, ಸರ್ವಾಧಿಕಾರವುಳ್ಳ ಸರ್ಕಾರ ಗಳ ಮುಖಂಡರಾದರು. ಅಧಿಕಾರಕ್ಕೆ ಬಂದ ಫ್ಯಾಸಿಸ್ಟ್ ಸರ್ಕಾರಗಳು ದಬ್ಬಾಳಿಕೆಯ ಮೂಲಕ ಕಾರ್ಮಿಕವರ್ಗವು ಸಂಘಟನೆ ಹೊಂದುವುದನ್ನೂ, ಸಮಾಜವಾದೀ ಚಳವಳಿ ಬಲಗೊಳ್ಳುವುದನ್ನೂ ಮುರಿದವು. ಕಾರ್ಮಿಕರ ಸಂಘಗಳನ್ನೂ ಮತ್ತು ಕಮ್ಯೂನಿಸ್ಟ್ ಪಕ್ಷಗಳನ್ನೂ ನ್ಯಾಯಬಾಹಿರವೆಂದು ಘೋಷಿಸಿದವು. ಸಮಾಜ ವಾದೀ ವ್ಯವಸ್ಥೆ ದೈವನಿಯಮಕ್ಕೆ ವಿರುದ್ಧವೆಂದೂ, ಸಮಾಜವಾದ ಅನೀ ತಿಯ ಮತ್ತು ಅಸ್ವಾಭಾವಿಕ ವಾದವೆಂದೂ ಅಪಪ್ರಚಾರ ಮಾಡಿದವು. ಕ್ರಿಸ್ತ ಜಗದ್ಗುರುಗಳಿಂದ ಧರ್ಮರಕ್ಷರೆಂಬ ಬಿರುದುಗಳನ್ನೂ ಸಹ ಸರ್ವಾಧಿ ಕಾರಿಗಳು ಪಡೆದರು. ಸಮಾಜವಾದೀ ಚಳವಳಿಯನ್ನು ಮುರಿಯಲು ಫ್ಯಾಸಿಸ್ಟ್ ಸರ್ಕಾರಗಳು ಕೈಗೊಂಡ ಕಾರ್ಯಕ್ರಮಗಳನ್ನು ಬಂಡವಾಳ ಶಾಹಿ ಪ್ರಜಾಸತ್ತೆಗಳಾದ ಫ್ರಾನ್ಸ್, ಇಂಗ್ಲೆಂಡ್, ಅಮೆರಿಕಾ ರಾಷ್ಟ್ರಗಳು ಅನುಮೋದಿಸಿದುವು. ಕಮ್ಯೂನಿಸ್ಟರನ್ನು ಧ್ವಂಸಮಾಡಲು ರಕ್ಷಕ ಸರ್ಕಾರ ಗಳು ಬಂದಿವೆಯೆಂದು ಬಗೆದು ಸರ್ವಾಧಿಕಾರಿಗಳಿಗೆ ಬೆಂಬಲವನ್ನೂ ಪ್ರೋತ್ಸಾಹವನ್ನೂ ಕೊಟ್ಟವು. ಸಮಾಜವಾದವನ್ನು ದೂರ ಇಟ್ಟು, ಖಾಸಗೀ ಸ್ವಾಮ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಫ್ಯಾಸಿಸ್ಟ್ ಸರ್ಕಾರಗಳು ಬದುಕಿಸುವುದಾದರೂ ಎಂತು ? ಇತರ ಬಲಿಷ್ಠ ಬಂಡವಾಳಶಾಹಿ ರಾಷ್ಟ್ರಗ ಳೊಡನೆ ಆರ್ಥಿಕ ಪೈಪೋಟಿ ಅಸಾಧ್ಯದಮಾತು. ಉಳಿದಿರುವುದು ಒಂದೇ ಮಾರ್ಗ-ಯುದ್ಧ. ಯುದ್ಧ ಸಿದ್ಧತೆಯಿಂದ ಸೈನ್ಯ ಜಮಾವಣೆ ಆಗಿ, ಮದ್ದು ಗುಂಡುಗಳ ಕಾರ್ಖಾನೆಗಳು ಬೆಳೆದು, ನಿರುದ್ಯೋಗಿಗಳಿಗೆ ಉದ್ಯೋಗ ಸಿಗು ತದೆ. ಯುದ್ಧದ ಮೂಲಕ ತಿಮಿಂಗಿಲದ ಹಾಗಿರುವ ಹಿರಿಯ ಬಂಡವಾಳ ಶಾಹಿ ರಾಷ್ಟ್ರಗಳನ್ನು ಸೋಲಿಸಿದರೆ, ಅವುಗಳು ಸುರಕ್ಷಿತವಾಗಿ ಹೊಂದಿರುವ ವಸಾಹತುಗಳು ಮತ್ತು ಮಾರುಕಟ್ಟೆಗಳು ಸಿಗುತ್ತವೆ ; ಸ್ವದೇಶದಲ್ಲಿ ಬಂಡ ವಾಳಶಾಹಿ ವ್ಯವಸ್ಥೆಗೆ ಒದಗಿರುವ ಬಿಕ್ಕಟ್ಟು ಪರಿಹಾರವಾಗುತ್ತದೆ. ಈ ಉದ್ದೇ ಶದಿಂದ ಇಟಲಿ ಮತ್ತು ಜರ್ಮನಿ ದೇಶಗಳ ಬಂಡವಾಳವರ್ಗ ಹಿಟ್ಲರ್ ಮತ್ತು ಮುಸಲೋನಿಗಳ ಮೂಲಕ ತಮ್ಮ ದೇಶಗಳಿಗೆ ಅನ್ಯಾಯವಾಗಿರುವುದೆಂಬ ಕೂಗನ್ನು ಎಬ್ಬಿಸಿದವು. ಕತ್ತಿಗಳನ್ನು ಝಳಪಿಸಿದರು. ಒಂದನೇ ಮಹಾ
ಪುಟ:ಕಮ್ಯೂನಿಸಂ.djvu/೧೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.