ಸಮಾಜವಾದವೇ ಅಥವಾ ಬಂಡವಾಳವಾದವೇ ? ಯುದ್ಧಾನಂತರ ಅತೃಪ್ತಿ ಹೊಂದಿದ್ದ ಇತರ ಸಣ್ಣ ಪುಟ್ಟ ಬಂಡವಾಳಶಾಹಿ ರಾಷ್ಟ್ರಗಳೊಡನೆ ಸಂಧಾನ ಬೆಳಸಿದರು. ಪೌರ್ವಾತ್ಯದಲ್ಲಿ ಬಂಡವಾಳಶಾಹಿ ಆಂಗ್ಲ ಮತ್ತು ಅಮೆರಿಕಾ ರಾಷ್ಟ್ರಗಳ ಆರ್ಥಿಕ ದಬ್ಬಾಳಿಕೆಯನ್ನು ತಡೆಯಲು ಅಸಾಧ್ಯವಾಗಿ ಸಮಯಕಾಯುತ್ತಿದ್ದ ಜಪಾನೀ ಬಂಡವಾಳವರ್ಗ ಹಿಟ್ಲರ್ ಮುಸಲೋನಿಯರ ಮೈತ್ರಿ ಬೆಳಸಿತು ಜರ್ಮನೀ, ಇಟಲೀ ಮತ್ತು ಜಪಾನ್ ಸರ್ಕಾರಗಳು ದೌರ್ಜನ್ಯ ನಡೆಸಲು ಸಿದ್ಧವಾದವು. ಪೌರ್ವಾತ್ಯದಲ್ಲಿ ಜಪಾನೀ ಬಂಡವಾಳಗಾರರು ವಸಾಹತು ಮತ್ತು ಮಾರುಕಟ್ಟೆಗಳ ದಾಹಪೀಡಿತರಾಗಿ 1931 ರಲ್ಲಿ ಚೀಣದಮೇಲೆ ಆಕ್ರಮಣ ವನ್ನಾರಂಭಿಸಿ ಮಂಚೂರಿಯಾ ಪ್ರಾಂತವನ್ನು ವಶಪಡಿಸಿಕೊಂಡಿದ್ದರು. ಅಷ್ಟಕ್ಕೇ ತೃಪ್ತರಾಗದೆ, ಚೀಣವನ್ನು ಸಂಪೂರ್ಣವಾಗಿ ನುಂಗಲು ಸೈನ್ಯಗಳನ್ನು ನುಗ್ಗಿಸಿದರು. ಆಂಗ್ಲ ಮತ್ತು ಅಮೆರಿಕದ ವಸಾಹತು ಮತ್ತು ಮಾರುಕಟ್ಟೆ ಗಳ ಮೇಲೆ ಆಕ್ರಮಣವನ್ನು ಆರಂಭಿಸಲು ಸಮಯ ನಿರೀಕ್ಷಿಸಿದರು. ಅತ್ತ ಯೂರೋಪಿನಲ್ಲಿ ಮುಸಲೋನಿಯು ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕ ಸಮ್ಮತಿಯಿಂದ ಅಬಿಸೀನಿಯ ದೇಶವನ್ನು ವಶಪಡಿಸಿಕೊಂಡನು; ತೃಪ್ತ ನಾಗದೆ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಿಗೆ ಸೇರಿದ್ದ ಆಫ್ರಿಕದ ವಸಾಹತುಗಳ ಮೇಲೆ ದೃಷ್ಟಿ ತಿರುಗಿಸಿದನು. ಹಿಟ್ಲರ್ ಸೈನ್ಯ ಜಮಾವಣೆ ಯನ್ನು ಆರಂಭಿಸಿ, ಸುಸಜ್ಜಿ ತನಾಗಿ, ಯೂರೋಪಿನ ಪುಟ್ಟ ರಾಷ್ಟ್ರಗಳಾದ ಆಸ್ಟ್ರಿಯಾ ಮತ್ತು ಜಕೊಸ್ಲಾವೇಕಿಯಾ ರಾಷ್ಟ್ರಗಳನ್ನು ವಶಪಡಿಸಿಕೊಂಡನು. ಪೋಲೆಂಡಿನ ಆಕ್ರಮಣಕ್ಕೆ ಸಿದ್ಧನಾದನು. " D ಫ್ಯಾಸಿಸ್ಟ್ ಸರ್ಕಾರಗಳು ನಡೆಸುತ್ತಿದ್ದ ದೌರ್ಜನ್ಯಗಳನ್ನು ತಡೆ ಗಟ್ಟಲು " ಲೀಗ್ ಆಫ್ ನೇಷನ್ಸ್ ” ಎಂಬ ವಿಶ್ವಸಂಸ್ಥೆಯಾಗಲೀ ಅಥವಾ ವೈಯಕ್ತಿಕವಾಗಿ ಹಿರಿಯ ಬಂಡವಾಳಶಾಹಿ ರಾಷ್ಟ್ರಗಳಾಗಲೀ ಮುಂದೆ ಬರಲಿಲ್ಲ. ಇದೇ ಸಮಯದಲ್ಲಿ ಸೋವಿಯಟ್ ರಷ್ಯಾ ಮತ್ತು ಬಂಡವಾಳಶಾಹಿ ರಾಷ್ಟ್ರಗಳಲ್ಲಿರುವ ಕಮ್ಯೂನಿಸ್ಟ್ ಪಕ್ಷಗಳು ಫ್ಯಾಸಿಸ್ಟ್ ದೌರ್ಜನ್ಯವನ್ನು ಸಾಮೂಹಿಕ ಯತ್ನದಿಂದ ತಡೆಗಟ್ಟಿದ ಹೊರತು ಪ್ರಪಂಚದಲ್ಲಿ ಶಾಂತಿ ಅಸಾಧ್ಯವೆಂದು ತಿಳಿಸಿದವು. ಸಣ್ಣ ಪುಟ್ಟ ರಾಷ್ಟ್ರಗಳಿಗೆ ರಾಷ್ಟ್ರ ಭದ್ರತೆಯ ಭರವಸೆಯನ್ನು ಕೊಟ್ಟು ಸಾಮೂಹಿಕ ಭದ್ರತೆಯ (Collective Security) ಮೂಲಕ ಆಕ್ರಮಣಕ್ಕೆ ಪ್ರತಿಭಟನೆಯನ್ನು ಏರ್ಪಡಿಸ ಬೇಕೆಂದು ಕರೆಯಿತ್ತವು. బ
ಪುಟ:ಕಮ್ಯೂನಿಸಂ.djvu/೧೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.