ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದವೇ ಅಥವಾ ಬಂಡವಾಳವಾದವೇ ? d ಆರ್ಥಿಕ ಪರಿಸ್ಥಿತಿ ವಿಷಮಿಸಿ, ಕಾರ್ಮಿಕರ ಚಳವಳಿಯ ಒತ್ತಡವನ್ನು ತಡೆಗಟ್ಟುವುದು ಅಸಾಧ್ಯವಾಗಿರುವಾಗ, ಜರ್ಮನಿ ದೇಶವನ್ನೂ ಮತ್ತು ಇತರ ಸಣ್ಣ ಪುಟ್ಟ ಬಂಡವಾಳಶಾಹಿ ರಾಷ್ಟ್ರಗಳನ್ನೂ ಸಮಾಜವಾದೀ ತತ್ತ್ವದ ಪ್ರಭಾವದಿಂದ ಸಂರಕ್ಷಿಸುವುದು ಅಸಾಧ್ಯದ ಮಾತಾಗಿತ್ತು. ಆದರೆ ಇದು ದುಸ್ಸಾಧ್ಯವೆಂದು ಬಗೆದು ಬಿಟ್ಟು ಬಿಡುವುದೂ ಸಹ ವಿವೇಚನಾರಹಿತ ನೀತಿ ಯಾಗುವುದಲ್ಲದೆ ಆತ್ಮಹತ್ಯದ ನೀತಿಯಾಗುತ್ತದೆ. ಏಕೆಂದರೆ, ಹಲವು ಸಮಾಜವಾದೀ ರಾಷ್ಟ್ರಗಳ ಜನನಕ್ಕೆ ಆಸ್ಪದ ಕೊಟ್ಟಂತಾಗುತ್ತದೆ. ಆದುದ ರಿಂದ ಏಕಮಾತ್ರವಿರುವ ಸೋವಿಯಟ್ ರಾಷ್ಟ್ರಕ್ಕೆ ಮತ್ತೊಂದು ಸಮಾಜ ವಾದೀ ರಾಷ್ಟ್ರದ ಜನನದಿಂದ ಬೆಂಬಲ ಸಿಗದಹಾಗೆ ನೋಡಿಕೊಳ್ಳುವುದು ಹಿರಿಯ ಬಂಡವಾಳಶಾಹಿ ಪ್ರಜಾಸತ್ತೆ ರಾಷ್ಟ್ರಗಳಿಗೆ ಹಗಲಿರುಳಿನ ಚಿಂತನೆ ಯಾಯಿತು. ಅದರಲ್ಲೂ ಅತ್ಯಂತ ಹೇರಳವಾಗಿ ಖನಿಜ ಸಂಪತ್ತುಳ ಮತ್ತು ಕೈಗಾರಿಕೆಯಲ್ಲಿ ಮುಂದುವರಿದ ಜರ್ಮನಿ ದೇಶ ಸಮಾಜ ವಾದೀ ರಾಷ್ಟ್ರವಾಗುವುದಾದರೆ ! ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಯಾವ ಮಾರ್ಗದಿಂದಾದರೂ ಸರಿಯೆ ಯೂರೋಪಿನ ಹಲವು ದೇಶಗಳಲ್ಲಿ ಬಂಡವಾಳ ಆರ್ಥಿಕವ್ಯವಸ್ಥೆಯನ್ನು ಸಂರಕ್ಷಿಸುವವರು ಅಮಿತವಾಗಿ ವಂದನಾರ್ಹರೇ ಹೊರತು ಶತ್ರುಗಳಲ್ಲ. ಯುದ್ಧಾನಂತರ ಯೂರೋಪಿನ ಹಲವು ರಾಷ್ಟ್ರಗಳಲ್ಲಿ ಕುಸಿದು ಬೀಳುತ್ತಿದ್ದ ಬಂಡವಾಳ ಆರ್ಥಿಕವ್ಯವಸ್ಥೆಗೆ ಫ್ಯಾಸಿಸ್ಟ್ ಸರ್ಕಾರಗಳು ಕೊಟ್ಟ ರಕ್ಷಣೆ ಸಾಮಾನ್ಯದ ಕೆಲಸವೇನೂ ಆಗಿ ರಲಿಲ್ಲ. ಖನಿಜಸಂಪತ್ತುಳ್ಳ ಇದರ ಪರಿಣಾಮವಾಗಿ ಬಂಡವಾಳಶಾಹಿ ಪ್ರಜಾಸತ್ತೆ ಸರ್ಕಾರಗಳು ಯೂರೋಪಿನ ಹಲವು ರಾಷ್ಟ್ರಗಳಲ್ಲಿ ಉಂಟಾದ ರಾಜಕೀಯ ಬದಲಾವಣೆ ಗಳನ್ನೂ, ಅಧಿಕಾರಕ್ಕೆ ಬಂದಾಗಿನಿಂದ ಫ್ಯಾಸಿಸ್ಟ್ ಸರ್ಕಾರಗಳು ಮಂಡಿಸಿದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ರೀತಿನೀತಿಗಳನ್ನೂ ಸಹಾನು ಭೂತಿಯಿಂದ ಕಂಡವು. ಮೊದಲನೆಯದಾಗಿ, ಫ್ಯಾಸಿಸ್ಟ್ ಸರ್ಕಾರಗಳು ಅನುಸರಿಸಿದ ಸರ್ವಾಧಿಕಾರಿ ತಕ್ಕೆ (Dictatorship) ಅನುಮೋ ದನೆ ಸಿಕ್ಕಿತು. ಸರ್ವಾಧಿಕಾರಿ ರಾಜ್ಯವ್ಯವಸ್ಥೆ (Totalitarian State (1) ಎರಡನೇ ಮಹಾ ಯುದ್ಧಾನಂತರ ಇದೇ ತೆರನಾದ ಸಮಸ್ಯೆ ಬಂಡವಾಳ ಶಾಹಿ ಪ್ರಜಾಸತ್ತೆ ರಾಷ್ಟ್ರಗಳನ್ನು ಪುನಃ ಕಾಡತೊಡಗಿತು : 8 ನೇ ಅಧ್ಯಾಯವನ್ನು ನೋಡಿ.