ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದ Structure) ಫ್ಯಾಸಿಸ್ಟ್ ರಾಷ್ಟ್ರಗಳ ಆಂತರಿಕ ಪ್ರಶ್ನೆಯೆಂದೂ, ಸಮಾಜದಲ್ಲಿ ಉಂಟಾಗಿರುವ ಅಲ್ಲೋಲಕಲ್ಲೋಲವನ್ನೂ ವರ್ಗವೈಷಮ್ಯವನ್ನೂ ಅಡಗಿ ಸಲು ಸರ್ವಾಧಿಕಾರಿ ರಾಜ್ಯವ್ಯವಸ್ಥೆ ಆವಶ್ಯಕವೆಂದೂ, ಸರ್ವಾಧಿಕಾರಿ ಸರ್ಕಾರಗಳಿಂದ ಪ್ರಜಾಸತ್ತೆಗೆ ಅಪಾಯವಿಲ್ಲವೆಂದೂ ಬಂಡವಾಳಶಾಹಿ ಪ್ರಜಾಸತ್ತೆ ಸರ್ಕಾರಗಳು ಸಮರ್ಥಿಸಿದವು. ಫ್ಯಾಸಿಸ್ಟ್ ರಾಜ್ಯಗಳಲ್ಲಿ ಕಾರ್ಮಿಕರ ಚಳವಳಿಯನ್ನು ಮುರಿಯುವುದಕ್ಕೂ, ವರ್ಗ ವೈಷಮ್ಯವನ್ನು ತಡೆಗಟ್ಟುವುದಕ್ಕೂ, ಬಂಡವಾಳ ಆರ್ಥಿಕವ್ಯವಸ್ಥೆಯ ಉಳಿವಿಗೆ ಬಲಾತ್ಕಾ ರದ ಬೆಂಬಲವನ್ನು ಚುನಾವಣೆಗಳ ಮೂಲಕ ಗಳಿಸಿಕೊಳ್ಳುವುದಕ್ಕೂ, ಸರ್ವಾಧಿಕಾರಿ ರಾಜ್ಯ ವ್ಯವಸ್ಥೆ ಫ್ಯಾಸಿಸ್ಟ್ ರಾಷ್ಟ್ರಗಳಲ್ಲಿರುವ ಬಂಡವಾಳ ವರ್ಗಕ್ಕೆ ಆಪತ್ಕಾಲದ ಅಸ್ತ್ರವಾಯಿತು. ರಾಜ್ಯಶಕ್ತಿ (The State) ಯ ಉಪಯೋಗ ಬಹಿರಂಗವಾಗಿ ಪ್ರದರ್ಶನವಾಯಿತು. es ಎರಡನೆಯದಾಗಿ, ಬಂಡವಾಳಶಾಹಿ ವ್ಯವಸ್ಥೆಯ ಉಳಿವಿಗಾಗಿ ಫ್ಯಾಸಿಸ್ಟ್ ಸರ್ಕಾರಗಳು ಕೈಕೊಂಡ ಆರ್ಥಿಕ ನೀತಿಗಳು ಅತಿ ಗಮನಾರ್ಹ ವಾಗಿವೆ. ಬಂಡವಾಳಶಾಹಿ ಪ್ರಜಾಸತ್ತೆ ಸರ್ಕಾರಗಳೂ ಸಹ ಅದೇಬಗೆಯ ರೀತಿನೀತಿಗಳನ್ನು ತಮ್ಮ ದೇಶಗಳಲ್ಲಿ ಒಂದಲ್ಲ ಒಂದು ವಿಧದಲ್ಲಿ ಅನುಸರಿಸಿ ದವು, ಯುದ್ಧಾನಂತರ ಯೂರೋಪಿನ ಹಲವು ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಖಾಸಗೀ ಬಂಡವಾಳ ಉದ್ಯಮಗಳು ಅನೇಕ ಈತಿಬಾಧೆಗಳಿಗೆ ಒಳಗಾಗಿದ್ದವು. ಮುಖ್ಯವಾಗಿ, ಹೆಚ್ಚು ವೇತನ ಮತ್ತು ಸೌಲಭ್ಯಗಳಿಗಾಗಿ ನಡೆಯುವ ಕಾರ್ಮಿ ಕರ ಚಳವಳಿಯಿಂದ ಬಂಡವಾಳವರ್ಗಕ್ಕೆ ರಕ್ಷಣೆ ಬೇಕಾಗಿದ್ದಿತು. ಉತ್ಪಾದನೆ ಯಾಗುವ ವಸ್ತುಗಳು ಮಾರಾಟವಾಗುವ ಭರವಸೆ ಬಂಡವಾಳವರ್ಗಕ್ಕೆ ಬೇಕಾಗಿದ್ದಿತು. ಅಲ್ಪ ಸ್ವಲ್ಪ ರೀತಿಯಲ್ಲಿ ಬಂಡವಾಳಉದ್ಯಮಿಗಳ ಖಾಸಗಿ ಏರ್ಪಾಡುಗಳು-ಉತ್ಪಾದನೆಯ ಪ್ರಮಾಣದ ಬಗ್ಗೆ ಒಪ್ಪಂದ, ಮಾರಾಟದ ಬಗ್ಗೆ ಒಪ್ಪಂದ, ಅನೇಕ ಬಂಡವಾಳ ಉದ್ಯಮಗಳನ್ನು ಒಟ್ಟುಗೂಡಿಸು ವುದರ ಮೂಲಕ ಉತ್ಪಾದನೆ ಮತ್ತು ಮಾರಾಟಗಳ ಸಂಘಟಿತ ನಿರ್ವ ಹಣೆ, ಅಥವ ಅನೇಕ ಬಂಡವಾಳ ಉದ್ಯಮಗಳನ್ನು ಒಬ್ಬ ಹಿರಿಯ ಬಂಡವಾಳ ಉದ್ಯಮಿ ವಹಿಸಿಕೊಳ್ಳುವುದು ಪರಿಸ್ಥಿತಿಯನ್ನು ಎದುರಿಸಲು ಸಾಲದಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಖಾಸಗೀ ಸ್ವಾಮ್ಯಕ್ಕೆ ಚ್ಯುತಿತರದ, ಲಾಭ ದೊರೆತು ಉತ್ಪಾದನೆ ಮೊದಲಿನಂತೆಯೇ ನಡೆಯಲಿಕ್ಕೆ ಅವಕಾಶ ವಿರುವ ಅಥವಾ ಬಂಡವಾಳಉದ್ಯಮಗಳಿಗೆ ನಷ್ಟ ಸಂಭವಿಸದಂತೆ ಭರವಸೆ -