ಸಮಾಜವಾದವೇ ಅಥವಾ ಬಂಡವಾಳವಾದವೇ ? ನೀಡುವ ಮತ್ತು ಅಧಿಕ ನಿರುದ್ಯೋಗ ಪ್ರಾಪ್ತಿಯಾಗದಂತೆ ನೋಡಿಕೊಳ್ಳುವ ಆರ್ಥಿಕ ನೀತಿ ಬೇಕಾಗಿದ್ದಿತು. ಫ್ಯಾಸಿಸ್ಟ್ ಸರ್ಕಾರಗಳು ಹೊಸ ವಿಧದ ಆರ್ಥಿಕ ನೀತಿಯ ಮೂಲಕ ಬಂಡವಾಳವರ್ಗದ ಆಶೋತ್ತರಗಳನ್ನು ನೆರವೇರಿಸಿತು. ಬಂಡವಾಳ ಉದ್ಯಮಗಳ ಮೇಲ್ವಿಚಾರಣೆ ಯ ನ್ನು (Management) ಫ್ಯಾಸಿಸ್ಟ್ ಸರ್ಕಾರಗಳೇ ವಹಿಸಿಕೊಂಡವು. ಫ್ಯಾಸಿಸ್ಟ್ ಸರ್ಕಾರಗಳು ಅನುಸರಿಸಿದ ಆರ್ಥಿಕ ನೀತಿಯಲ್ಲಿ ಒಂದು ವಿಶೇಷವಿದೆ. ಇಂತಹ ಆರ್ಥಿಕ ನೀತಿಯಿಂದ ಖಾಸಗೀ ಸ್ವಾಮ್ಯಕ್ಕಾಗಲೀ ಅಥವಾ ಲಾಭಕ್ಕಾಗಲೀ ಚ್ಯುತಿ ಬರುವುದಿಲ್ಲ. ಬಂಡವಾಳ ಉದ್ಯಮಗಳು ಖಾಸಗಿ ವ್ಯಕ್ತಿಗಳ ಬಳಿಯಲ್ಲೇ ಉಳಿಯುವುವು. ಆದರೆ ಬಂಡವಾಳ ಗಾರರು ಸರ್ಕಾರ ಕೈಗೊಂಡ ನಿರ್ಧಾರಗಳಿಗೆ ಅನುಸಾರವಾಗಿ ಉತ್ಪಾದನೆ ಮಾಡಬೇಕು, ಮಾರಬೇಕು, ಮಾರುಕಟ್ಟೆಯನ್ನು ಕಲ್ಪಿಸಿಕೊಡುವ ಜವಾಬ್ದಾರಿ ಸರ್ಕಾರದ್ದು. ಹೀಗಾಗಿ ಜರ್ಮನಿ ಮತ್ತು ಇಟಲೀ ದೇಶ ಗಳಲ್ಲಿ ರಾಷ್ಟ್ರವೇ ಬಂಡವಾಳ (State Capitalism) ಉದ್ಯಮದಾರ ನಾಯಿತು. 1 ಮೂರನೆಯದಾಗಿ, ಈ ಪರಿವರ್ತನೆಗಳು ಫ್ಯಾಸಿಸ್ಟ್ ರಾಜ್ಯಗಳಲ್ಲಿ ಒಂದು ಹೊಸ ಬಗೆಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ಗಳನ್ನು ತಂದವು. - ಫ್ಯಾಸಿಸ್ಟ್ ರಾಷ್ಟ್ರಗಳಲ್ಲಿ ಸ್ವಾಮ್ಯವನ್ನು ಹೊಂದಿರುವ ಬಂಡವಾಳವರ್ಗ, ಸ್ವಾಮ್ಯವನ್ನು ಹೊಂದಿಲ್ಲದಿರುವ ಕಾರ್ಮಿಕವರ್ಗ ಎರಡೂ ರಾಷ್ಟ್ರದ ಅಂಗಗಳು, ರಾಷ್ಟ್ರದ ಹಿತದೃಷ್ಟಿಯಿಂದ ಉಭಯ ವರ್ಗ ಗಳೂ ಸರ್ಕಾರದ ನಿರ್ಧಾರಗಳಿಗೆ ತಲೆಬಾಗಬೇಕು ಸರ್ಕಾರದ ಮಧ್ಯಸ್ತಿಕೆ ಯನ್ನು ಉಭಯ ವರ್ಗಗಳೂ ಒಪ್ಪಬೇಕು, ಸರ್ಕಾರ ಮತ್ತು ಅದರ ಮುಖಂಡ ಎಲ್ಲರ ಹಿತವನ್ನೂ ಬಯಸುವುದರಿಂದ ಯಾವ ವರ್ಗಕ್ಕೂ ಅನ್ಯಾಯ ಮಾಡುವುದಿಲ್ಲ. ಆದುದರಿಂದ ವರ್ಗಗಳ ಹಿತವನ್ನು ಪ್ರತಿಬಿಂಬಿಸಲಿಕ್ಕಿರುವ ವಿವಿಧ ರಾಜಕೀಯ ಪಕ್ಷಗಳೂ ಅನಾವಶ್ಯಕ. ರಾಷ್ಟ್ರದ ಹಿತದ ಪ್ರತಿನಿಧಿ (1) ಇಂತಹ ವ್ಯವಸ್ಥೆಯನ್ನು ಈ ಸಂಸ್ಥಾ ರಾಜ್ಯ ವ್ಯವಸ್ಥೆ (Corpora- tive State) ಎಂದು ಕರೆಯಲಾಗಿದೆ,
ಪುಟ:ಕಮ್ಯೂನಿಸಂ.djvu/೧೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.