ಆಧುನಿಕ ಸಮಾಜವಾದದ ಮುಂದೋಟ ೧೫ ವಾಗಿ, ಕಾರ್ಮಿಕವರ್ಗ ಆಧುನಿಕ ಸಮಾಜವಾದದ ಬಾವುಟದ ಅಡಿಯಲ್ಲಿ ಸಂಘಟಿತವಾಗುತ್ತಲಿದೆ. ಕಾರ್ಮಿಕವರ್ಗ ಸಮಾಜವಾದೀ ರ೦ಗದ ಮುಂದೋಟವನ್ನು ಹರ್ಷಧ್ವನಿಗಳಿಂದ ಸ್ವಾಗತಿಸುತ್ತಲಿದೆ. 1848 ರಲ್ಲಿ ಧ್ವನಿಮಾಡಿದ ಆಧುನಿಕ ಸಮಾಜವಾದ ಒಂದು ಶತ ಮಾನದಲ್ಲಿ ಇಷ್ಟು ಮುಂದೋಟಿಗಳಿಸಿರುವುದು ಮಾರ್ಕ್ಸ್-ಏಂಗೆಲ್ಲರ ಇದೇ ಸಂದರ್ಭದಲ್ಲಿ ಪಾರ್ಲಿಮೆಂಟರಿ ಪ್ರಜಾಸತ್ತೆಗೂ ಬಂಡವಾಳ ಆರ್ಥಿಕವ್ಯವಸ್ಥೆಗೂ ಇರುವ ಐತಿಹಾಸಿಕ ಸಂಬಂಧವನ್ನು (Historical Connectin) ನೆನಪಿನಲ್ಲಿಡುವುದು ಅಗತ್ಯವಾಗಿದೆ. ಇಂಗ್ಲೆಂಡ್ ದೇಶದಲ್ಲಿ ಬಾರ್ಲಿಮೆಂಟರಿ ಪ್ರಜಾ ಸತ್ತೆ 17 ನೇ ಶತಮಾನದಲ್ಲಿ ಜನ್ಮತಾ 18 ನೇ ಶತಮಾನ ದಲ್ಲಿ ಪ್ರಬುದ್ಧಾವಸ್ಥೆಗೆ ಬಂದಿತು. ಕ್ರಮೇಣ ಇತರ ರಾಷ್ಟ್ರಗಳಿಗೆ ಹರಡಿತು. ಇದಕ್ಕೆ ಮುಂಚಿತವಾಗಿ ನಿರಂಕುಶ ಪ್ರಭುತ್ವ ವಿದ್ದಿತು. ಬಂಡವಾಳ ಆರ್ಥಿಕ ವ್ಯವಸ್ಥೆಯ ಉದಯವೂ ಸಹ 16, 17 ನೇ ಶತಮಾನಗಳಲ್ಲಿ ಉಂಟಾಯಿತು. 17 ನೇ ಶತಮಾನದಲ್ಲಿ ನಡೆದ ಇಂಗ್ಲಿಷ್ ಕ್ರಾಂತಿಯೂ (1688), 18 ನೇ ಶತಮಾನದಲ್ಲಿ ನಡೆದ ಫ್ರೆಂಚ್ ಕ್ರಾಂತಿಯೂ (1789) ಬಂಡವಾಳ ವರ್ಗದ ಹಿತ ಗಳಿಗೆ ಮಾನ್ಯತೆ ಮತ್ತು ರಕ್ಷಣೆ ಕೊಡುವ ಸರ್ಕಾರವಿರಬೇಕೆಂದು ನಿರಂಕುಶ ಪ್ರಭುತ್ವವನ್ನು ಮೂಲೆಗೊತ್ತಿದ ಸಂಗತಿ ತಿಳಿದ ವಿಷಯ, ಹೊಸ ರಾಜ್ಯ ವ್ಯವಸ್ಥೆ ಜಾರಿಗೆ ಬಂದಿತು. ನಿರಂಕುಶ ವರ್ತನೆಯನ್ನು ತಡೆಗಟ್ಟಲಿಕ್ಕೆ ಕಾರ್ಯಾಂಗವನ್ನು ಶಾಸನಾಂಗ ಮತ್ತು ನ್ಯಾಯಾಂಗಗಳಿಂದ ಪ್ರತ್ಯೇಕಗೊಳಿಸಲಾಯಿತು. ಶಾಸನದ ಆಧಿಪತ್ಯವನ್ನೂ ಶಾಸನದ ಸಮ್ಮುಖದಲ್ಲಿ ಸತ್ವ ಪ್ರಜೆಗಳಿಗೂ ಸಮಾನತೆಯನ್ನೂ ಸ್ಪಷ್ಟಪಡಿಸಲಾಯಿತು, ಹಿತಗಳ (Interests) ಸಂರಕ್ಷಣೆಯನ್ನು ಚುನಾಯಿತ ಪ್ರತಿನಿಧಿಗಳ ಸಮ್ಮತದ ಮೂಲಕ ಭದ್ರಪಡಿಸಲಾಯಿತು. ಸ್ವಾಮಕ್ಕೆ ರಕ್ಷಣೆ ಕೊಡುವ ಮೂಲಭೂತ ಹಕ್ಕುಗಳು ಅ೦ಗೀಕೃತವಾದವು. ಇದೇ ಬಂಡವಾಳ ಶಾಹಿ ಪ್ರಜಾಸತ್ತೆ ಆಗಿದೆ; ಇದರ ರಾಜಕೀಯ ರೂಪ ಮಾತ್ರ ಪಾರ್ಲಿಮೆಂಟ ಪ್ರಜಾಸತ್ತೆಯಾಗುತ್ತದೆ. બે બે ಒಂದು ಪಕ್ಷ, ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯ, ವರ್ಗವಿರಸ (ಬಂಡವಾಳ ಆರ್ಥಿಕವ್ಯವಸ್ಥೆ) ಇವು ಅಳಿದು ಸಮಾಜವಾದಿ ಆರ್ಥಿಕವ್ಯವಸ್ಥೆ ಬರುವುದಾದರೆ ಪಕ್ಷ- ಪ್ರತಿಪಕ್ಷಗಳಿಲ್ಲದ (ಆರ್ಥಿಕ ಅರ್ಥದಲ್ಲಿ ಸ್ವಾಮ್ಯ ಇರಬೇಕ ನ್ನುವ ಇರಕೂಡದೆನ್ನುವ ರಾಜಕೀಯ ಪಕ್ಷಗಳು) ಹೊಸ ರೂಪದ ರಾಜಕೀಯ ವ್ಯವಸ್ಥೆ (ಕಾರ್ಮಿಕ ಪ್ರಜಾಸತ್ತೆ) ರೂಪಗಳಿಸುತ್ತದೆ. (ಇಂತಹ ವ್ಯವಸ್ಥೆಯಲ್ಲಿ ರಾಜ್ಯಶಕ್ತಿಯ (The State) ಭವಿಷ್ಯದ ಬಗ್ಗೆ ಪುಟ ೮೮ ನೋಡಿ). ಮಾರ್ಕ್ಸ್
ಪುಟ:ಕಮ್ಯೂನಿಸಂ.djvu/೧೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.