೧೫೨ ವೈಜ್ಞಾನಿಕ ಸಮಾಜವಾದ ಮಾರ್ಕ್ಸ್ವಾದ ಮಾತ್ರ ಪ್ರಪಂಚದ ಮೂಲೆ ಮೂಲೆಗೂ ಹಬ್ಬುತ್ತಾ ಮನೆಮಾತಾಗುತ್ತಿದೆ. ಪ್ರತಿಗಾಮಿ ಶಕ್ತಿಗಳೂ ಸುಧಾರಕ ಸಮಾಜವಾದಿ ಗಳೂ ಎಷ್ಟು ತಡೆದರೂ ಮಾರ್ಕ್ಸ್‌ವಾದ ಕಾರ್ಮಿಕರ ಉಸಿರಾಗುತ್ತಿದೆ. ದಿನೇ ದಿನೇ ಬಂಡವಾಳವರ್ಗದ ಕುಹಕಗಳು, ಪ್ರಜಾಸತ್ತೆಯ ಸೋಗು ಮತ್ತು ಸುಧಾರಕ ಸಮಾಜವಾದೀ ಮಾರ್ಗ ಎಲ್ಲವೂ ನಿಯೋಜನ e ರುವ ಖಾಸಗಿ ಸ್ವಾಮ್ಯ ಪ್ರಜಾಸತ್ತೆಯನ್ನು ಅಣುಕು ಪ್ರಜಾಸತ್ತೆಯನ್ನಾಗಿ ಮಾಡಿದೆ. ಅಷ್ಟೇ ಅಲ್ಲ, ಸ್ವಾಮ್ಯವರ್ಗ ತನಗಿರುವ ಸಾಧನ ಶಕ್ತಿಗಳ ಮೂಲಕ ಚುನಾವಣೆ ಗಳ ಮೇಲೆ ಪ್ರಭಾವಬೀರಿ ಉತ್ಪಾದನಾಸಾಧನಗಳ ರಾಷ್ಟ್ರೀಕರಣಕ್ಕೆ ಬಹು ಮತದ ಒಪ್ಪಿಗೆಯನ್ನು ದುರ್ಲಭಮಾಡಿದೆ. ತಾತ್ವಿಕವಾಗಿ (In Theory) ಪ್ರಜಾ ಸತ್ತ ರಾಜ್ಯವ್ಯವಸ್ಥೆಯಲ್ಲಿ ಉತ್ಪಾದನಾಸಾಧನಗಳ ರಾಷ್ಟ್ರೀಕರಣಕ್ಕೆ ಬಹುಮತ ದೊರಕುವ ಸಂಭವಿದೆ, ಆದರೆ, ಕಾರ್ಯತಹಃ (In Practice) ಸ್ಪಾಮ್ಯಾಧಾರದ ಮೇಲೆ ನಡೆಯುವ ಪ್ರಜಾಸತ್ತೆಯಲ್ಲಿ ಚುನಾವಣೆಗಳು ಸ್ವಾಮ್ಯವರ್ಗಕ್ಕೆ ರಕ್ಷಣಾ ಕವಚದಂತಿವೆ. ಅದುದರಿಂದಲೇ ಒಂದು ದೇಶದಲ್ಲಿ ಪ್ರಜಾಸತ್ತೆ ಇದೆ ಅಥವ ಇಲ್ಲ ಎಂಬುದನ್ನು ಸ್ವಾಮ್ಯದ ರಕ್ಷಣೆಗಾಗಿ ಇರುವ ಪ್ರಚಾರ ಸ್ವಾತಂತ್ರದಿ೦ದ, ಸ್ವಾಮ್ಯ ವರ್ಗ ತನ್ನದೇ ಆದ ರಾಜಕೀಯ ಪ್ರತಿಪಕ್ಷವನ್ನು ರಚಿಸಿಕೊಳ್ಳುವುದಕ್ಕೆ ಇರುವ ಸ್ವಾತಂತ್ರ ದಿಂದ ಸ್ವಾಮ್ಯವರ್ಗ ನಿರ್ಧರಿಸುತ್ತದೆ. ಆದುದರಿಂದ ಒಂದು ದೇಶದ ರಾಜ್ಯವ್ಯವಸ್ಥೆ ಪ್ರಜಾಸ ವ್ಯವಸ್ಥೆಯೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವಾಗ ಪ್ರಜಾಸತ್ತೆಯ ಬಗ್ಗೆ ಕೇವಲ ಭಾದ ರೂಪದ ಲಕ್ಷಣಗಳಿಗೆ (Formal Characteristics) ಗ ಮನಕೊಟ್ಟರೆ ಅನರ್ಥ ವಾಗುತ್ತದೆ. ಸ್ವಾಮ್ಯವರ್ಗದ ತಾಕತಜ್ಞರು (Theoreticians) ಮಾಡು ತಿರುವುದು ಇದೇ ಕೆಲಸವಾಗಿದೆ. ಪ್ರಜಾಸತ್ತೆಯ ಭಾವರೂಪದ ಲಕ್ಷಣಗಳಾದ ಕಾರ್ಯಾಂಗದಿಂದ ಶಾಸನಾಂಗ ಮತ್ತು ನ್ಯಾಯಾಂಗಗಳ ಬೇರ್ಪಡೆ, ಶಾಸನದ ಆಧಿಪತ್ಯ (Rule of Law), ಪ್ರತಿ ಪಕ್ಷವನ್ನು ರಚಿಸುವುದಕ್ಕೆ ಅವಕಾಶ (Opposition Party), ಪ್ರತಿ ಪಕ್ಷಕ್ಕೆ ಬಹುಮತ ಬಂದರೆ ಸರ್ಕಾರವನ್ನು ರಚಿಸುವುದಕ್ಕೆ ಅವಕಾಶ (To form a Ministry), ಅಧಿಕಾರದಲ್ಲಿರುವ ಪಕ್ಷವನ್ನು ನಿರ್ಭಯದಿಂದ ಟೀಕೆಗೊಳಪಡಿಸುವುದಕ್ಕೆ ಸ್ವಾತಂತ್ರ, ಇವುಗಳೇ ಪ್ರಜಾಸತ್ತೆಯ ಮುಖ್ಯ ತಿರುಳೆಂದು ಹೇಳುತ್ತಲಿದ್ದಾರೆ. ರಾಜ್ಯವ್ಯವಸ್ಥೆಗೆ ಅಡಿ ಪಾಯವಾದ ಆರ್ಥಿಕ ವ್ಯವಸ್ಥೆಯನ್ನು ಪ್ರಜಾಸತ್ತೆ ಲಕ್ಷಣಗಳಿಂದ ಬೇರ್ಪಡಿಸಿ ದ್ದಾರೆ. ಆರ್ಥಿಕ ವ್ಯವಸ್ಥೆಗೂ ರಾಜ್ಯವ್ಯವಸ್ಥೆಗೂ ಇರುವ ಸಂಬಂಧ ವೇದ್ಯವಾಗಿ ರುವಾಗ ಪ್ರಜಾಸತ್ತೆ ಲಕ್ಷಣಗಳಿಂದ ಆರ್ಥಿಕ ವ್ಯವಸ್ಥೆಯನ್ನು ಬೇರ್ಪಡಿಸು ವುದರ ಮರ್ಮ ಈಗ ಬಹಿರಂಗವಾಗಿ ಕಾಣುತ್ತದೆ.
ಪುಟ:ಕಮ್ಯೂನಿಸಂ.djvu/೧೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.