ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ವೈಜ್ಞಾನಿಕ ಸಮಾಜವಾದ 8 2 ವುದು. ಸಣ್ಣ ಪುಟ್ಟ ಬಂಡವಾಳಗಾರರಾಗಲು ಅನೇಕರು ಯತ್ನಿಸುವರು. ಶ್ರೀಮಂತವರ್ಗದ ಮನೋಭಾವನೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಶೋಷಿತ ವರ್ಗದಲ್ಲಿ ತಲೆಹಾಕುತ್ತದೆ. ಪೈಪೋಟಿಯಲ್ಲಿ ಸೋತವರು ತಮ್ಮ ವಿಧಿ ಯನ್ನು ಹಳಿದುಕೊಳ್ಳುವರು, ಗೆದ್ದವರು ತಮ್ಮ ಗೆಲುವಿಗೆ ಬಂಡವಾಳಶಾಹಿ ವ್ಯವಸ್ಥೆಯಿಂದ ದೊರೆತ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಹೊಗಳು ವರು ; ಗಳಿಸಿರುವ ಸಂಪತ್ತಿನ ರಕ್ಷಣೆಗಾಗಿ ಬಂಡವಾಳಶಾಹಿ ವ್ಯವಸ್ಥೆಯ ಹಿಂಬಾಲಕರಾಗುವರು. ಉಭಯತ್ರರೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಡಗಿರುವ ಕಣ್ಣು ಮುಚ್ಚಾಲೆಯ ಆಟವನ್ನೂ, ಅರಣ್ಯದ ಮೃಗಜೀವನದ ಚಿತ್ರವನ್ನೂ ಮರೆಯುತ್ತಾರೆ. ತಾವಿರುವ ಆರ್ಥಿಕ ವ್ಯವಸ್ಥೆ ಅಭೇದ್ಯವಾದ ಎಂದು ಭಾವಿಸಿ ತಮ್ಮ ಬಾಳನ್ನು ಅದಕ್ಕೆ ಹೊಂದಿಸಿಕೊಳ್ಳಲು ಯತ್ನಿಸು ತ್ತಾರೆ. ಈ ಕಾರಣದಿಂದ ಶೋಷಣೆಗೆ ಒಳಗಾಗಿರುವ ವ್ಯಕ್ತಿಗಳು ಜಾಗೃತಿ ಹೊಂದುವುದಿಲ್ಲ; ಜೀವನದಲ್ಲಿರುವ ಆರ್ಥಿಕ ಅಭದ್ರತೆಗೆ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣವೆಂದು ತಿಳಿಯಲು ಅಸಮರ್ಥರಾಗುವರು. ಇಂತಹ ಪರಿಸ್ಥಿತಿಗಳಲ್ಲಿ ಶೋಷಿತವರ್ಗ ಅನೇಕವೇಳೆ ಸ್ವಾಮ್ಯ ವರ್ಗದ ಬೆಂಬಲಿಗ ರಾಗುವುದರಲ್ಲಿ ಆಶ್ಚರ್ಯವಿಲ್ಲ. ಸ್ವರಕ್ಷಣೆಗಾಗಿ ಆದಷ್ಟು ಸ್ವಾಮ್ಯವನ್ನು ಹೊಂದಲು ಯತ್ನಿಸಿರುವ ಶೋಷಿತವರ್ಗದಿಂದ ಸ್ವಾಮ್ಯ ಮತ್ತು ಶೋಷ ಣೆಯ ರಕ್ಷಕ ಪಕ್ಷಗಳಿಗೆ ಬೆಂಬಲ ಸಿಗುತ್ತದೆ. ಅಷ್ಟಲ್ಲದೆ ತಾತ್ಕಾಲಿಕ ತೃಪ್ತಿ, ನಿಸ್ಸಹಾಯಕತೆ ಮತ್ತು ಮೌಡ್ಯ ಇವು ಇರುವ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಶೋಷಿತವರ್ಗವನ್ನು ಬಲಾತ್ಕ ರಿಸುತ್ತವೆ. 1 ಸಂಪ್ರದಾಯ, ಗಣ್ಯ ವ್ಯಕ್ತಿಗಳ ಅಭಿಪ್ರಾಯ, ಇವುಗಳಿಂದ ಬಾಳಿನ ಪರಿಸ್ಥಿತಿಗೆ ಸಮರ್ಥನೆ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಶ್ನಾ (1) ಯಾವ ಆರ್ಥಿಕ ಬದಲಾವಣೆಗಳೂ ಇಲ್ಲದ ಮತ್ತು ಬಹುಕಾಲ ದಾಸ್ಯಕ್ಕೆ ಒಳಗಾಗಿರುವ ದೇಶಗಳ ಜನರ ಮನೋಭಾವ ಇನ್ನೂ ಮಧ್ಯರೂಪವನ್ನು ತಾಳಿರುತ್ತದೆ; ಅಂಜುಪುರುಕ ಮನೋಭಾವ ಬೆಳೆದಿರುತ್ತದೆ. ಜನರು ಬೋನಿ ನಲ್ಲಿ ಬಂಧಿತವಾಗಿರುವ ಮೂಷಕಗಳಂತಿರುತ್ತಾರೆ, ಪರಿಹಾರದ ಮಾರ್ಗಗಳು ಪರಲೋಕ ಚಿಂತನೆಯಲ್ಲಿ, ದೈನ್ಯತತ್ತ್ವದಲ್ಲಿ, ಸಂಸಾರದ ಖಂಡ ನೆಯಲ್ಲಿ, ವಸ್ತು ನಿಗ್ರಹತತ್ತ್ವದಲ್ಲಿ, ವೈರಾಗ್ಯದಲ್ಲಿ, ಹೊಸ ಧರ್ಮದ ಸ್ಥಾಪನೆಯಲ್ಲಿ ಪರವಸಾನ ಹೊ೦ದಿರುತ್ತವೆ,