ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದದ ಸಮಸ್ಯೆಗಳು ೧೬೧ ಭಾರತದಲ್ಲಿ ಧಾರ್ಮಿಕ ಕ್ರಾಂತಿಯನ್ನು ತರಲು ಯತ್ನಿಸಿ ಬೇರೊ೦ದು ಧರ್ಮವನ್ನು ಪ್ರಚಾರಮಾಡಿದವರಲ್ಲಿ ಜೈನ ತೀರ್ಥಂಕರರು, ಬುದ್ಧ, ದಾಸರು ಗಳು ಬಸವಣ್ಣ ಮುಖ್ಯರಾದವರು, ಭೇದಭಾವಕ್ಕೂ ಶೋಷಣೆಗೂ ಆವಾಸ ಸ್ಥಾನವಾಗಿದ್ದ ಜಾತಿಪದ್ಧತಿಯನ್ನೂ ಮತ್ತು ಇದನ್ನು ಎತ್ತಿ ಹಿಡಿದ ಧಾರ್ಮಿಕ ತತ್ತ್ವಗಳನ್ನೂ ಮುಖಂಡರು ಖಂಡಿಸಿದರು, ಪ್ರತಿಯಾಗಿ, ಭೇದಭಾವಕ್ಕೆ ಅವ ಕಾಶ ಪತ್ತಿರುವ ಜಾತಿಪದ್ಧತಿಯನ್ನು ದಮನಮಾಡಬೇಕೆಂದೂ, ದೈವಾನುಗ್ರಹ ಅಥವ ಪರಿಪಕ್ವತೆಯನ್ನು ಸತ್ವರೂ ಸ್ವತಂತ್ರವಾಗಿ ಹೊಂದಲು ಬಾಧ್ಯರೆಂದೂ ಸಾರಿ ದರು. ಸಕಲ ಕಷ್ಟಗಳ ನಿವಾರಣೆಗೆ ದೈವಾನುಗ್ರಹ ಅಥವ ಪರಿಪಕ್ವತೆಯೇ ಮಾರ್ಗವೆಂದೂ, ವಸ್ತು ನಿಗ್ರಹ ಮತ್ತು ಸಂಸಾರ ಬಂಧನದ ತ್ಯಾಗ ಇವುಗಳಿಂದ ಮಾತ್ರ ಮುಕ್ತಿ ಸಾಧಿಸಲು ಸಾಧ್ಯವೆಂದೂ ತಿಳಿಸಿದರು. ಆದರೆ, ಈ ಹೊಸಧರ್ಮ ಗಳು ಬೋಧಿಸಿದ ಮುಕ್ತಿ ಮಾರ್ಗ ಹಿಂದೂ ಧರ್ಮ ಬೋಧಿಸದೇ ಇದ್ದ ಮಾರ್ಗ ವೇನೂ ಆಗಿರಲಿಲ್ಲ. ಸ೦ಸಾರ ಧಾರ್ಮಿಕಮುಖಂಡರ ಗಮನವೆಲ್ಲಾ ವಸ್ತು ನಿಗ್ರಹ ಮತ್ತು ಬಂಧನದ ತ್ಯಾಗದಲ್ಲಿ ಪರವಸಾನ ಹೊಂದಿತು. ಇವುಗಳಿಗೆ ಪ್ರತಿಕಾರದಂತಿದ್ದ (Opposite) ಜನರ ಆರ್ಥಿಕ ಜೀವನ ಮತ್ತು ಆರ್ಥಿಕವ್ಯವಸ್ಥೆಯ ಬಗ್ಗೆ ಮೌನ ವನ್ನು ತಾಳಿದರು; ಆವುಗಳ ವಿಮರ್ಶೆಯನ್ನು ಕಡೆಗಣಿಸಿದರು. ಇದರಿಂದ ಉಂಟಾದ ಪರಿಣಾಮಗಳು ಮಹತ್ತರವಾದದ್ದಾದವು. ಆರ್ಥಿಕ ವ್ಯವಸ್ಥೆಯ ಬಗ್ಗೆ ಪ್ರತಿಭಟನೆ ಧಾರ್ಮಿಕ ಪ್ರತಿಭಟನೆಯ ರೂಪವನ್ನು ತಾಳಿತು. ಶೋಷಣೆಗೆ ಆವಾಸಸ್ಥಾನವಾದ ಆರ್ಥಿಕ ವ್ಯವಸ್ಥೆಯ ಬಗ್ಗೆ ನೇರವಾದ ಪ್ರತಿಭಟನೆಯನ್ನೂ ವರ್ಗವೈಷಮ್ಯವನ್ನೂ ಹೊಸ ಧರ್ಮಗಳು ತಡೆಗಟ್ಟಿದವು. ಅತೃಪ್ತಿ ಮತ್ತು ಅಸಮಾಧಾನಗಳು ಹಲ್ಲಿಲ್ಲದ ಮೂಕ ಧಾರ್ಮಿಕ ಪ್ರತಿಭಟನೆಯಲ್ಲಿ ಪಠ್ಯವಸಾನಹೊಂದಿದುವು. ಜನಸಾಮಾನ್ಯ ರಿಗೆ ಯಾವ ಪರಿಹಾರವೂ ಸಿಗಲಿಲ್ಲ, ಈ ಧಾರ್ಮಿಕ ತತ್ತ್ವಗಳು ಅನುಸರಣೆಯಲ್ಲಿದ್ದ ಆರ್ಥಿಕವ್ಯವಸ್ಥೆಯನ್ನು ಅಂಗೀಕರಿಸಿದವು. ಹೊಸ ಧರ್ಮಗಳಿಂದ ಅನುಸರಣೆ ಯಲ್ಲಿದ್ದ ಆರ್ಥಿಕವ್ಯವಸ್ಥೆಯ ಅಂಗೀಕಾರವೇ ಕ್ರಮೇಣ ಈ ಹೊಸ ಧರ್ಮಗಳ ಉತ್ತರೋತ್ತರದ ಇತಿಹಾಸದಲ್ಲಿ ಕೆಲವು ಭಾರತದಿಂದಲೇ ಉದ್ಘಾಟನೆ ಹೊಂದ ಲೂ (ಭೌದ್ಧವತ) ಇನ್ನು ಕೆಲವು ನಿಸ್ಸಾಹಾಯಕತೆಯ ಪ್ರತಿಬಿಂಬವೆಂಬಂತೆ ಉಳಿ ಯಲೂ ಕಾರಣವಾಯಿತು. ಸಂಸಾರ ಜನಸಾಮಾನ್ಯರೆಲ್ಲರೂ ವಸ್ತು ನಿಗ್ರಹವನ್ನೂ ಸಂಸಾರ ಬಂಧನದ ತ್ಯಾಗ ವನ್ನೂ ಮಾಡಲಿಲ್ಲವಾಗಿ ಹೊಸ ಧರ್ಮಗಳ ತತ್ರದಲ್ಲಿ ಮಾರ್ಪಾಡುಗಳ ಬಂದವು. ಜನಸಾಮಾನ್ಯರಿಗೆ ಅನ್ವಯವಾಗುವಂತಹ ಒಂದು ತತ್ತ ಬಂಧನವನ್ನು ತ್ಯಜಿಸಲಿಚ್ಚಿಸಿದವರಿಗೆ ಒಂದು ತತ್ರ ಅನುಷ್ಠಾನಕ್ಕೆ ಬಂದವು. ವ್ಯವಹಾರ ಪ್ರಪಂಚದ ನಿತ್ಯತಯನ್ನು ಅಂಗೀಕರಿಸಲಾಯಿತು, ವ್ಯವಹಾರ ಪ್ರಪಂಚದ ಸಾಮಾನ್ಯ ಜನರು ಸಂಸಾರ ತ್ಯಜಿಸಿದವರಿಗೆ ಅನ್ನ ಆಹಾರಾದಿ ಸೌಕ