ಸಮಾಜವಾದ ಸಮಸ್ಯೆಗಳು 022 ತಿಳಿಸಿದೆ. ತಾತ್ಕಾಲಿಕವಾಗಿ ತೃಪ್ತಿಗೊಳ್ಳುವ ಮನೋಭಾವವನ್ನೂ ಶೋಷಿತ ವರ್ಗ ವರ್ಜಿಸಿ, 1 ಆರ್ಥಿಕದಾಸ್ಯದ ಕರ್ತೃವಾದ ಬಂಡವಾಳಶಾಹಿ ವ್ಯವ ಸ್ಥೆಯ ಮೇಲೋತ್ಪಾಟನೆಗೆ ಸಂಘಟಿತರಾಗಿ' ಎಂದು ಕರೆಯಿತ್ತಿದೆ. ಆದರೆ ಅಜಾಗೃತಿ, ಸಂಪ್ರದಾಯಬದ್ಧತೆ, ಜಡತ್ವ ಮತ್ತು ಮುಂದೆ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆಂಬ ಆಸೆ ಶೋಷಿತವರ್ಗವನ್ನು ಬಹಳಕಾಲದವರಗೆ ಚೇತನಾರಹಿತ ವಸ್ತುವಿನಂತೆ ಇಡಲಾರವು. ಜನ ಜೀವನವನ್ನು ಆವರಿಸಿರುವ ವಿರಸಪೂರಿತ ಬಂಡವಾಳಶಾಹಿ ವ್ಯವಸ್ಥೆ ನಿರ್ದಾಕ್ಷಿಣ್ಯವಾಗಿ ತನ್ನ ಚಲನವಲನಗಳಿಂದ ದುಃಸ್ಥಿತಿಯನ್ನು ಸಮೂಹಕ್ಕೆ ಕಾಣಿಕೆಯಾಗಿ ಬಿತ್ತುತ್ತಲೇ ಇರುತ್ತದೆ. ಶೋಷಿತವರ್ಗದ ಸಹನೆ ಎಲ್ಲೆ ಮಾರುವಂತೆಯೂ, ಜಡತ್ವ ಕುಲುಕುವಂತೆಯೂ ಆಗುತ್ತದೆ. ಜನ ಸ್ವಾಮ್ಯವರ್ಗದ ಧೋರಣೆಯೂ ಸಹ ಶೋಷಿತವರ್ಗದಲ್ಲಿ ಅಶಾಂತಿ ಹೆಚ್ಚಿಸಲು ಸಹಾಯಕವಾಗುತ್ತದೆ. ಲಾಭ ಸಂಗ್ರಹಣಕಾರ್ಯದಲ್ಲಿ ಏಕಾಗ್ರಚಿತ್ತದಿಂದ ಬಂಡವಾಳವರ್ಗ ತಲ್ಲೀನವಾಗಿರುವಾಗ, ಶೋಷಿತವರ್ಗದ ನಿಟ್ಟುಸುರು ಕಣ್ಣಿಗೆ ಬೀಳುವುದಿಲ್ಲ. ಶೋಷಿತವರ್ಗದಲ್ಲಿ ಕಾಣಿಸಿಕೊಳ್ಳುವ ಅತ್ಯುಪ್ತಿ ಅಸಮಾಧಾನಗಳು ಸ್ವಾಮ್ಯವರ್ಗವನ್ನು ಕೆರಳಿಸುವುದಕ್ಕೆ ಮಾತ್ರ ಕಾರಣವಾಗುತ್ತವೆ. ಶೋಷಿತವರ್ಗಕ್ಕೆ ಪರಿಹಾರ ನೀಡುವುದರ ಬದಲು, ಸ್ವಾಮ್ಯದ ರಕ್ಷಣೆಗಾಗಿ, ಇರುವ ಸ್ಥಿತಿಗತಿಗಳನ್ನು ಸಮರ್ಥಿಸುವುದಕ್ಕಾಗಿ ಬಂಡವಾಳವರ್ಗ ದಬ್ಬಾಳಿಕೆಯನ್ನು ಆರಂಭಿಸುತ್ತದೆ. ಇವುಗಳೇ ಪೀಠಿಕೆ, ಜನಸಮುದಾಯದಲ್ಲಿರುವ ಅಶಾಂತಿ ಅಸಮಾಧಾನಗಳ ಜೊತೆಗೆ ಉಗ್ರ ಆರ್ಥಿಕಬಿಕ್ಕಟ್ಟೋ ಅಥವಾ ಯುದ್ಧದ ಪರಿಣಾಮಗಳಿಂದಾಗುವ ಆರ್ಥಿಕ ದುಃಸ್ಥಿತಿಯೋ ಕೂಡಿಕೊಂಡರೆ ಸಂದಿಗ್ಧ ಪರಿಸ್ಥಿತಿ ಉಂಟಾಗುತ್ತದೆ. ಶಾಸನ ಬದ್ಧ ರೀತಿಯಲ್ಲಿ ಗಳಿಸಲಸಾಧ್ಯವಾದ ಪರಿಹಾರಗಳನ್ನು ಶಾಸನಗಳ ಉಲ್ಲಂಘನೆಗಳ ಮೂಲಕ ದೊರಕಿಸಿಕೊಳ್ಳಲು ಶೋಷಿತವರ್ಗ ಯತ್ನಿಸು ಇದೆ. ಕ್ರಾಂತಿ ಸನ್ನಿಹಿತವಾಗುತ್ತದೆ. ಕ್ರಾಂತಿಯಲ್ಲಿ ಗೆದ್ದ ವರ್ಗ ಶಾಸನ ವನ್ನು ರಚಿಸುತ್ತದೆ ಮತ್ತು ಕ್ರಾಂತಿಯನ್ನು ಸಂರಕ್ಷಿಸಲು ಕ್ರಮಗಳನ್ನು ಕೈಗೊಳ್ಳುತ್ತದೆ, 1 1. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪರಸ್ಪರ ವಿರೋಧಿಗಳೆನಿಸಿದ ಒಪ್ಪಿಗೆಯ ತತ್ರ ಕ್ಯೂ ಕ್ರಾಂತಿಗೂ ಇರುವ ಹತ್ತಿರದ ಸಂಬಂಧ ಇದೇ ಆಗಿದೆ.
ಪುಟ:ಕಮ್ಯೂನಿಸಂ.djvu/೧೭೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.