೧೮೦ ವೈಜ್ಞಾನಿಕ ಸಮಾಜವಾದ ಣೆಗೆ ಮತ್ತು ದುಃಸ್ಥಿತಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣವೆಂದೂ ತೀರ್ಮಾನಕ್ಕೆ ಬಂದರು. ವಸಾಹತುಗಳಿಗಾಗಿ ಬೇಟೆ, ಪೈಪೋಟ, ಬಂಡ ವಾಳದ ರಫ್ತು ಮತ್ತು ಯುದ್ಧಗಳು ಇವೇ ಬಂಡವಾಳಶಾಹಿ ವ್ಯವಸ್ಥೆ ವಿರಸ ಗಳಿಂದ ಪಾರಾಗಲಿಕ್ಕೆ ಹುಡುಕುವ ಮಾರ್ಗವಾಗುವುದೆಂದರು, ಜನ ಸಮುದಾಯದ ನಿತ್ಯಜೀವನ ದಿನೇ ದಿನೇ ಅಧೋಗತಿಗೆ ಇಳಿದು ಕಾರ್ಮಿ ಕವರ್ಗದ ಕ್ರಾಂತಿಕಾರಕ ಹೋರಾಟ ಮೂಡುವುದೆಂದರು ; ಹಾಗೆಯೇ ಸಮಾಜವಾದದ ಆಗಮನವೂ ಅನಿವಾರ್ಯವೆಂದರು, 19 ನೇ ಶತಮಾನದ ಬಂಡವಾಳಶಾಹಿ ವ್ಯವಸ್ಥೆಯ ಇತಿಹಾಸ ಮಾರ್ಕ್ಸ್-ಏಂಗಲ್ಲರ ವಿಮರ್ಶೆಯನ್ನು ಸಮರ್ಥಿಸಿದೆ. ಬಂಡವಾಳಶಾಹಿ ವ್ಯವಸ್ಥೆ ಎಲ್ಲ ದೇಶಗಳಿಗೂ ವಿಸ್ತರಿಸದಂತೆ ವಿರಸಗಳೂ ಅದನ್ನು ಹಿಂಬಾಲಿ ಸಿವೆ. ವ್ಯವಸಾಯ ಮತ್ತು ಕೈಗಾರಿಕೆ ಈ ಎರಡು ಕ್ಷೇತ್ರಗಳಲ್ಲೂ ಬಂಡ ವಾಳಶಾಹಿ ಉತ್ಪಾದನಾ ಕ್ರಮವು ಬಂದಿದೆ. ಬಂಡವಾಳ ವ್ಯವಸ್ಥೆ ಜನ್ಮ ಇತ್ತಿರುವ ಕೈಗಾರಿಕಾ ಕಾರ್ಮಿಕವರ್ಗ, ಭೂಮಿ ಇಲ್ಲದ ನಿರ್ಗತಿಕ ರೈತಾಪಿ ವರ್ಗ ತಮ್ಮ ಶೋಷಣೆಯನ್ನು ಕಂಡಿವೆ. ಬಂಡವಾಳವರ್ಗ ಮತ್ತು ಕಾರ್ವಿಕವರ್ಗ ವರ್ಗ ವೈಷಮ್ಯವನ್ನು ತಾಳಿ ಎದುರು ಬದರಾಗಿ ನಿಂತಿವೆ. ಉತ್ಪಾದನಾ ಸಾಧನಗಳಲ್ಲಿವ ಖಾಸಗೀ ಸ್ವಾಮ್ಯದ ವಿರುದ್ಧ ಕಾರ್ವಿಕ ವರ್ಗ ಚಳವಳಿಯನ್ನು ಹೂಡಿದೆ; ಬಂಡವಾಳವರ್ಗ ಸ್ವಾಮ್ಯದ ರಕ್ಷಣೆಗಾಗಿ ನಿಂತಿದೆ. 17-18ನೇ ಶತಮಾನಗಳಲ್ಲಿ ನಿರಂಕುಶ ಪ್ರಭುತ್ವದ ವಿರುದ್ಧ ಮುಂದಾಳುತ್ವ ವಹಿಸಿದ್ದ ಬಂಡವಾಳವರ್ಗ ಪ್ರತಿಗಾಮಿಯಾಗಿದೆ. ಕಾರ್ಮಿಕವರ್ಗ ಸಮಾಜವಾದೀ ಪತಾಕೆಯನ್ನು ಹಾರಿಸಿದೆ. ಮಾರ್ಕ್ಸ್-ಏಂಗ ರನಂತರ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉಂ ಟಾಗಿರುವ ಬದಲಾವಣೆಗಳನ್ನು ನಿರ್ದೆಶಿಸಿ ವೈಜ್ಞಾನಿಕ ಸಮಾಜವಾದದ ವಿಶ್ವವ್ಯಾಪ್ತಿ ಸ್ವರೂಪವನ್ನು ಲೆನಿನ್ ವಿಶದಪಡಿಸಿದನು. ಇಪ್ಪತ್ತನೇ ಶತ ಮಾನದಲ್ಲಿ ವಿರಸಪೂರಿತವಾಗಿರುವ ಬಂಡವಾಳಶಾಹಿ ವ್ಯವಸ್ಥೆ ಸಾಮಾ ಜ್ಯವಾದೀ ಬಂಡವಾಳಶಾಹಿ ವ್ಯವಸ್ಥೆಯಾಗಿ (Imperialism-The Highest stage of capitalism) ಮಾರ್ಪಾಟು ಹೊಂದಿ ಎಲ್ಲಾ (1) ಲೆನಿನ್ನನ:- ಸಾಮ್ರಾಜ್ಯಶಾಹಿ- ಬಂಡವಾಳಶಾಹಿ ವ್ಯವಸ್ಥೆಯ ಆತ ನ್ನತ ಮಟ್ಟ' ಎಂಬ ಬರೆಹ,
ಪುಟ:ಕಮ್ಯೂನಿಸಂ.djvu/೧೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.