ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದ ಮತ್ತು ಭಾರತ ೧೮೧ ಬಂಡವಾಳಶಾಹಿ ರಾಷ್ಟ್ರಗಳನ್ನೂ ಪರಸ್ಪರವಾಗಿ ಬಂಧಿಸಿರುವುದಾಗಿ ತಿಳಿಸಿ ದನು. ಆರ್ಥಿಕ ವಿರಸಗಳಿಂದ ಪಾರಾಗಲಿಕ್ಕೆ ಯುದ್ಧ ಸಿದ್ಧತೆ ಅಥವಾ ಯುದ್ಧ ಸಾಮ್ರಾಜ್ಯವಾದಿ ಬಂಡವಾಶಾಹಿ ವ್ಯವಸ್ಥೆಗೆ ಉಳಿದಿರುವ ಒಂದೇ ವಾರ್ಗವೆಂದು ತಿಳಿಸಿದನು. ಸಾಮ್ರಾಜ್ಯವಾದೀ ಯುದ್ಧ 19ನೇ ಶತ ಮಾನದಲ್ಲಿದ್ದಂತೆ ಒಂದೆರಡು ಬಂಡವಾಳಶಾಹಿ ರಾಷ್ಟ್ರಗಳಿಗೆ ಸಂಬಂ ಧಿಸಿರುವ ಪ್ರಾದೇಶಿಕ ಯುದ್ಧವಾಗದೆ ಪ್ರಪಂಚದ ಎಲ್ಲಾ ಬಂಡವಾಳಶಾಹಿ ರಾಷ್ಟ್ರಗಳನ್ನು ಸುತ್ತುವರಿದು ವಿಶ್ವಯುದ್ಧವಾಗಿರುವುದಾಗಿ ತಿಳಿಸಿದನು. ಬೇಸತ್ತ ಕಾರ್ಮಿಕವರ್ಗ, ರೈತವರ್ಗ ಮತ್ತು ಪ್ರಾಜ್ಞರವರ್ಗ ಬಂಡವಾಳ ಶಾಹಿ ವ್ಯವಸ್ಥೆಯ ನಿರ್ಮೂಲಕ್ಕಾಗಿ ಕ್ರಾಂತಿಕಾರಕ ಪ್ರತಿಭಟನೆಯನ್ನು ಹೂಡುವುದೆಂದನು, ಇಂತಹ ಕ್ರಾಂತಿಕಾರಕ ಸನ್ನಿವೇಶದಲ್ಲಿ ಜನಸಮು ದಾಯವು ಕಾರ್ಮಿಕವರ್ಗದ ಮುಂದಾಳತ್ವದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಯನ್ನು ವಿನಾಶಗೊಳಿಸುವುದು ಎಲ್ಲೆಡೆಯಲ್ಲಿಯೂ ಸಾಧ್ಯ. ಹಿಂದುಳಿದ ರಾಷ್ಟ್ರ ಅಥವಾ ಮುಂದುವರೆದಿರುವ ರಾಷ್ಟ್ರ ಎಂಬ ವ್ಯತ್ಯಾಸವನ್ನು ಸಾಮ್ರಾಜ್ಯವಾದಿ ಬಂಡವಾಳಶಾಹಿ ವ್ಯವಸ್ಥೆ ತೊಡೆದುಹಾಕಿದೆ. ಸಾಮಾ ಜ್ಯವಾದಿ ಬಂಡವಾಳಶಾಹಿ ವ್ಯವಸ್ಥೆಯ ಸರಪಣಿಯಲ್ಲಿ ಅತಿ ಬಲಹೀನ ಕೊಂಡಿಯು ಕಿತ್ತು ಕಾರ್ಮಿಕವರ್ಗದ ಕ್ರಾಂತಿ ವಿಜಯವಾಗಲು ಸಾಧ್ಯ ವಿದೆ. ಹಿಂದುಳಿದ ಮತ್ತು ವ್ಯವಸಾಯವೇ ಪ್ರಾಧಾನ್ಯವಾಗಿದ್ದ ರಷ್ಯಾ ದೇಶ ದಲ್ಲಿ ಕಾರ್ಮಿಕವರ್ಗ ನಡೆಸಿದ ಮಹಾಕ್ರಾಂತಿ ಲೆನಿನ್ನನ ವಿಮರ್ಶೆಯನ್ನು ಸಮರ್ಥಿಸಿದೆ. ಲೆನಿನ್ನನ ಅನುಯಾಯಿ ಸ್ಟಾಲಿನ್ ಲೆನಿನ್ ವಾದವನ್ನು ಮುಂದುವರಿಸಿ ಏಕಮಾತ್ರ ದೇಶದಲ್ಲಿ ಸಮಾಜವಾದೀ ವ್ಯವಸ್ಥೆಯ ಸ್ಥಾಪನೆ ಮತ್ತು ಅದರ ಅಭಿವೃದ್ಧಿ ಸಾಧ್ಯವೆಂಬುದನ್ನು ಸೋವಿಯಟ್ ಸಮಾಜವಾದಿ ರಾಷ್ಟ್ರದ ನಿರ್ಮಾಣದ ಮೂಲಕ ಪ್ರದರ್ಶಿಸಿದನು. 1 ಪೌರ್ವಾತ್ಯ ದೇಶಗಳಲ್ಲಿ ವೈಜ್ಞಾನಿಕ ಸಮಾಜವಾದದ ಪ್ಯಾಪನೆಯ ಬಗ್ಗೆ ಕೆಲವು ವೃತ್ತಗಳಲ್ಲಿ ಜಿಜ್ಞಾಸೆ ಇದೆ. ಅದೇನೆಂದರೆ ವೈಜ್ಞಾನಿಕ ಸಮಾಜವಾದ ಬಂಡವಾಳಶಾಹಿ ವ್ಯವಸ್ಥೆಗೆ ಪ್ರತೀಕಾರ ರೂಪದಲ್ಲಿದ್ದು ಪಾಶ್ಚಾತ್ಯ ದೇಶಗಳಲ್ಲಿ ಉದ್ಭವಿಸಿದ್ದಾಗಿದೆ. ಆದ್ದರಿಂದ ಸಮಾಜವಾದದ (1) ಸ್ಟಾಲಿನ್ನನ - ಲೆನಿನ್‌ವಾದದ ಸಮಸ್ಯೆಗಳು' ಎಂಬ ಬರೆಹಗಳು ; ಮಾಸ್ಕೊ ಸಂಪುಟ, 1945,