ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದ ವ್ಯಾಪನೆ ಪೌರ್ವಾತ್ಯ ದೇಶಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಇರುವಿಕೆ ಯನ್ನು ಅವಲಂಬಿಸಿದೆ. ಆದರೆ ಪೌರ್ವಾತ್ಯ ದೇಶಗಳಲ್ಲಿ ಬಂಡವಾಳ ಶಾಹಿ ವ್ಯವಸ್ಥೆ ರೂಪುಗೊಂಡಿಲ್ಲ; ಒಂದು ಪಕ್ಷ ಬಂಡವಾಳವಶಾಹಿ ವ್ಯವಸ್ಥೆ ಪೌರ್ವಾತ್ಯ ದೇಶಗಳಲ್ಲಿ ಇರವುದಾದರೂ, ಪೌರ್ವಾತ್ಯ ದೇಶಗಳ ಸಾಂಸ್ಕೃತಿಕ ಹಿನ್ನಲೆ ಮತ್ತು ಆಧ್ಯಾತ್ಮಿಕ ಮನೋಭಾವ ( Spiritual out-look) ಬಂಡವಾಳಶಾಹಿ ವ್ಯವಸ್ಥೆ ತನ್ನ ವಿರಸಗಳನ್ನು ಬಿತ್ತಲು ಅವಕಾಶವಿಲ್ಲದ ಹಾಗೆ ಮಾಡಿವೆ. ಎರಡನೆಯವಾಗಿ, ಸಮಾಜವಾದ ತತ್ತ್ವವು ಪೌರ್ವಾತ್ಯ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸದಲ್ಲ; ಬಹಳ ಹಳೆಯದು. ಪಾಶ್ಚಾತ್ಯ ದೇಶಗಳಲ್ಲಿ ಈಗ ಅದರ ಆವಶ್ಯಕತೆಯ ಬಗ್ಗೆ ಜಿಜ್ಞಾಸೆಗಳಾಗುತ್ತಿದ್ದರೆ, ಸಮಾಜವಾದೀ ಮನೋಭಾವ, ಸಮಾಜವಾದೀ ವ್ಯವಸ್ಥೆ ಪೌರ್ವಾತ್ಯ ದೇಶಗಳಲ್ಲಿ ಅನಾದಿಕಾಲದಿಂದಲೂ ಇವೆ. ಪೌರ್ವಾತ್ಯ ಜನಜೀವನದಲ್ಲಿ ಸಮಾಜವಾದ ರಕ್ತಗತವಾಗಿರುವಾಗ ಅದರ ಆವಶ್ಯಕತೆಯ ಬಗ್ಗೆ ಪುನಃ ಈಗ ಉಪದೇಶ ನಡೆಯುವುದು ಅನಾವಶ್ಯಕವಾಗಿದೆ. ಮೂರನೆಯದಾಗಿ, ಒಂದು ಪಕ್ಷ, ಸಮಾಜವಾದೀ ತತ್ತ್ವದ ಉಪದೇಶ ಅವಶ್ಯಕವಾಗಿ ಕಂಡು ಬಂದರೂ ಮಾರ್ಕ್ಸ್-ಏಂಗರು ಪ್ರತಿಪಾದಿಸಿರುವ ಭೌತಾತ್ಮಿಕ ಕ ಸಮಾಜ ವಾದಕ್ಕೆ ಸ್ಥಳವೇ ಇಲ್ಲ, ಪೌರ್ವಾತ್ಯ ದೇಶಗಳಲ್ಲಿ ಅದರಲ್ಲೂ ಭಾರತದಲ್ಲಿ, ಆಗಬೇಕಾಗಿದೆ ಶಿಥಿಲವಾಗಿರುವ ಧರ್ಮದ ಪುನರುಜ್ಜಿ ವನದ ಕೆಲಸ ಮಾತ್ರ. ಗಾಂಧೀಜಿಯವರು ಈ ಧರ್ಮದ ಸ್ವರೂಪವನ್ನು ಮತ್ತೆ ಪ್ರಸಾರ ಮಾಡಿದ್ದಾರೆ. ಭಾರತದ ಧರ್ಮಕ್ಕೆ ಅನುಗುಣವಾಗಿರುವಂತಹ ಸಮಾಜವಾದೀ ತತ್ತ್ವವನ್ನು ಅನುಷ್ಠಾನಕ್ಕೆ ತರುವುದು ಮಾತ್ರ ಉಳಿದಿದೆ. 3 ಪೌರ್ವಾತ್ಯ ದೇಶಗಳಲ್ಲಿ ಅದರಲ್ಲೂ ಭಾರತದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಇದೆಯೇ ಅಥವಾ ಇಲ್ಲವೇ ಮತ್ತು ಭಾರತದಲ್ಲಿ ಅನಾದಿಕಾಲದಿಂದಲೂ ಸಮಾಜವಾದೀ ತತ್ತ್ವ ಮತ್ತು ವ್ಯವಸ್ಥೆ ಇದ್ದವೇ ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ಉತ್ಪಾದನಾ ವಸ್ತುಗಳಲ್ಲಿ ಖಾಸಗೀ ಸ್ವಾಮ್ಯ, ಮಾರುಕಟ್ಟೆ ಯಲ್ಲಿ ವಿಕ್ರಯಿಸಲು ಸರಕುಗಳ ತಯಾರಿಕೆ ಮತ್ತು ಮಾರಾಟ, ಹಾಗೆ ತಯಾ ರಿಸಲು ಇತರರನ್ನು ಕೂಲಿಗಾಗಿ ನೇಮಿಸಿಕೊಳ್ಳುವುದು ಲಾಭ, ಪೈಪೋಟಿ ಇವುಗಳು ಬಂಡವಾಳಶಾಹಿ ವ್ಯವಸ್ಥೆ ಎಂದು ಕರೆಯಲು ನಿರ್ದೇಶಿಸುವ ಲಕ್ಷಣ ಗಳಾಗಿವೆ, ಅತ್ಯಂತ ಅನಾಗರಿಕಕಾಲದ ಸಮಾಜ ವ್ಯವಸ್ಥೆಯನ್ನು ಬಿಟ್ಟರೆ,