ಧಕರಾಗಿಯೋ ಅಥವಾ ಕ್ಷೇಮ ಚಿಂತನೆ ಬಯಸುವರಾಗಿಯೋ ಅಥವಾ
ನೀತಿ, ಧರ್ಮ, ನ್ಯಾಯ ಮತ್ತು ಸಂಸ್ಕೃತಿ ಪುನರುದ್ಧಾರಕರಾಗಿಯೋ
ಅಥವಾ ಅವ್ಯವಸ್ಥೆಯ ಖಂಡನೆಯಲ್ಲೋ ನಿರತರಾಗಿರುತ್ತಾರೆ. ಆಗಾಗ್ಗೆ,
ಸಮಯ ಸಂದರ್ಭಾನುಸಾರ, ಇರುವ ಸ್ಥಿತಿಗತಿಗಳ ಮೇಲೆ ಮುಸುಕು
ಎಳೆಯಲು ಸಮಾಜವಾದ ಶಬ್ದದ ಉಚ್ಚಾರಣಾ ಪ್ರದರ್ಶನಗಳೂ ಸಹ ಬರು
ತಿರುತ್ತವೆ. ಸ್ವಾಮ್ಯವರ್ಗವೂ ಸಹ ಸಮಾಜವಾದದ ಧ್ಯೇಯವಾದಿ ಆಗುತ್ತದೆ.
ಈ ರೀತಿಯಾಗಿ ಬಗೆ ಬಗೆಯ ಸಮಾಜವಾದಗಳು ಪ್ರತಿಪಾದಿತವಾಗುವು
ದಕ್ಕೆ ಈ ವಾದಗಳು ಪ್ರತಿಪಾದಿತವಾದ ಸಮಯದಲ್ಲಿದ್ದ ಸಮಾಜ ಸನ್ನಿವೇಶ,
ಹಿಂದುಳಿದ ಆರ್ಥಿಕ ಪರಿಸ್ಥಿತಿಗಳು, ಇವೇ ಮುಖ್ಯ ಕಾರಣವಾಗಿವೆಯೆಂದು
ಮಾರ್ಕ್ಸ್-ಏಂಗೆಲ್ಸರು ತಿಳಿಸಿದ್ದಾರೆ. ಸಮಾಜದಲ್ಲಿದ್ದ ಶೋಷಣೆ,
ಯಾತನೆ, ದುಸ್ಥಿತಿ, ತಾರತಮ್ಯ, ಮನಕರಗುವ ದೃಶ್ಯ, ರಾಜಕೀಯ
ಗೊಂದಲಗಳು, ಸ್ವಾಮ್ಯ ವರ್ಗದ ಸ್ವಾರ್ಥ ಇವುಗಳು ವಿಚಾರವೆತ್ರರನ್ನು
ಪ್ರಚೋದನೆಗೊಳಿಸಿ ಸುಖೀರಾಜ್ಯದ ನಿರ್ಮಾಣಕ್ಕೆ ಆಶಿಸುವಂತೆ ಮಾಡಿ
ದವು. ಪ್ರತಿಭಟನೆ, ಮುಷ್ಕರ, ದಂಗೆ, ಇತ್ಯಾದಿಗಳ ಮೂಲಕ ನೊಂದವರು
ಪರಿಹಾರವನ್ನು ಯತ್ನಿಸಿದರೆ, ಸಹೃದಯರು, ವಿಚಾರವೇತ್ತರು ತಾತ್ವಿಕ
ರೂಪದಲ್ಲಿ ಸಮಾಜ ಕಲ್ಯಾಣವನ್ನು ಬಯಸಿ ಸಮಾಜ ಸುಧಾರಣೆಗೆ
ಯತ್ನಿಸಿದರು, ಆದುದರಿಂದ ಇವರುಗಳಲ್ಲಿ ಅನೇಕರು ಕೇವಲ ಶೋಷಿತ
ವರ್ಗದ ಹಿತವನ್ನು ಬಯಸುವುದು ಮಾತ್ರವಲ್ಲದೆ ಸರ್ವರ ಹಿತವನ್ನೂ
ಬಯಸಿದ್ದು ಸಹಜವಾಗಿದೆ. ಈ ಕಾರಣದಿಂದ ಸಮಾಜದಲ್ಲಿ ವರ್ಗಗಳ
ಇರುವಿಕೆಯನ್ನಾಗಲಿ, ವರ್ಗವೈಷಮ್ಯವನ್ನಾಗಲಿ, ಶೋಷಿತವರ್ಗದ ಹೋರಾ
ಟದ ಆವಶ್ಯಕತೆಯನ್ನಾಗಲಿ ಅಂಗೀಕರಿಸಲು ಇಚ್ಛಿಸಲಿಲ್ಲ. ಉತ್ಕೃಷ್ಟ
ಸಮಾಜದ ಆಗಮನವನ್ನು ಊಹೆ ಮತ್ತು ಕಲ್ಪನೆಗಳ ಮೂಲಕ ಸಾಧಿಸು
ವುದಕ್ಕೆ ತೊಡಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
ಕಲ್ಪನೆಯ ಮೂಲಕ ಸುಖೀರಾಜ್ಯದ ಆಗಮನವನ್ನು ನಿರೀಕ್ಷಿಸು
ವುದಕ್ಕೆ ಹೊರಟರೆ ವಾಸ್ತವಿಕ ಪರಿಸ್ಥಿತಿಯ ಅರಿವು ಬೇಡವಾಗುತ್ತದೆ.
ಆದುದರಿಂದ, ಸ್ವಾಭಾವಿಕವಾಗಿ ಕಲ್ಪನಾ ಸಮಾಜವಾದಿಗಳು ವಾಸ್ತವಿಕ
ಪರಿಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕಾಗಲಿ ಅಥವಾ ಶೋಷಣೆಯ ಆ
ವಾಸಸ್ಥಾನವನ್ನು ತಿಳಿಯುವುದಕ್ಕಾಗಲಿ ಗಮನಕೊಡಲಿಲ್ಲ, ಯಾವುದು ಅವರ
ಪುಟ:ಕಮ್ಯೂನಿಸಂ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿದೆ
3]
ಕಲ್ಪನಾ ಮತ್ತು ವೈಜ್ಞಾನಿಕ ಸಮಾಜವಾದ
೩೩