ಈ ಪುಟವನ್ನು ಪರಿಶೀಲಿಸಲಾಗಿದೆ
೩೪
ವೈಜ್ಞಾನಿಕ ಸಮಾಜವಾದ

ದೃಷ್ಟಿಯಲ್ಲಿ ಕ್ರೂರವಾಗಿ ಕಂಡುಬಂದಿತೋ ಅದನ್ನು ಅಧರ್ಮ, ಅನ್ಯಾಯ ಎಂದರು. ಹಿತೈಷಿಗಳಾದವರು ಯಾವುದಾದರೂ ಒಂದು ವರ್ಗಕ್ಕೆ ಸೇರಿ ದವರೆಂದು ಹೇಳಿಕೊಳ್ಳಲು ಇಷ್ಟ ಪಡಲಿಲ್ಲ. ತಮ್ಮ ಸಂದೇಶವನ್ನು ಯಾವು ದಾದರು ಒಂದು ವರ್ಗಕ್ಕೆ ಸಂಬೋಧನೆಮಾಡಲೂ ಇಲ್ಲ. ಆದುದರಿಂದ ಯಾವ ವರ್ಗಕ್ಕೂ ಇವರ ಮಾತುಗಳಲ್ಲಿ ನಂಬಿಕೆ ಬರದೆ ಹೋಯಿತು. ಕೆಲವು ಹಿಂಬಾಲಕರು ಸಿಕ್ಕಿ ಸಣ್ಣ ಪುಟ್ಟ ಪಂಥಗಳನ್ನು ಸ್ಥಾಪಿಸಿದರೇ ಹೊರತು ಕಾರ್ಯತಃ ಮತ್ತೇನನ್ನೂ ಗಳಿಸಲಿಲ್ಲ.
ನಿರ್ವೀರ್ಯವಾದ ಕಲ್ಪನಾ ಸಮಾಜವಾದ ಯಾವ ವಿಧವಾದ ಪರಿ ಹಾರವನ್ನು ತರದಿದ್ದುದರಿಂದ ವಿರಕ್ತಿ, ಅಸಹಾಯಕತೆ, ದಾನ ಧರ್ಮಗಳು, ಮನಃಪರಿವರ್ತನೆಯ ಕೆಲಸ ಇವುಗಳಿಗೆ ಎಡೆಗೊಟ್ಟು, ಎಲ್ಲವೂ ತಂಡ ತಂಡ ವಾಗಿ ಆಗಮಿಸುವಂತೆ ಆಗಿದೆ. ಅಸಹಾಯಕ ಸಮಾಜವಾದಕ್ಕೆ ಅನೇಕ ಸಾಧುಸಂತರ, ಮಹರ್ಷಿಗಳ, ಜೀವನ ಮತ್ತು ತಮ್ಮ ನಿದರ್ಶನಗಳಾಗಿವೆ. ಇವರುಗಳು ಯಾರೂ ಸಹ ಶೋಷಿತವರ್ಗವನ್ನು ಸಂಬೋಧಿಸಲಿಲ್ಲ. ಶೋಷಿತವರ್ಗ ರಾಜಕೀಯದಲ್ಲಿ ಪ್ರವೇಶಿಸಿ ರಾಜ್ಯ ಶಕ್ತಿಯನ್ನು ಗಳಿಸ ಬೇಕೆಂದು ತಿಳಿಸಲಿಲ್ಲ. ರಾಜಕೀಯವನ್ನು ದೂರವಿಡಬೇಕೆಂದು ತಿಳಿಸಿದರು, ಆದುದರಿಂದ ಈ ವಾದಗಳೆಲ್ಲವೂ ಕಾಲಕ್ರಮೇಣ, ಚಿಕ್ಕಮಕ್ಕಳು ಒಂದರ ಮೇಲೊಂದು ಅಡ್ಡವಾಗಿ ಡೊಂಕಾಗಿ ಎಳೆಯುವ ಗೆರೆಗಳಂತೆ ಗೋಜಿ ಹೋಗಿ, ನಿಷ್ಟ್ರಯೋಜಿತ ತತ್ತ್ವಗಳಾಗಿ ಉಳಿದುದು ಆಶ್ಚರ್ಯವೇನೂ ಇಲ್ಲ !
ಮುಖ್ಯವಾಗಿ ಹಿಂದುಳಿದ ಆರ್ಥಿಕ ಪರಿಸ್ಥಿತಿ ಸಮಾಜವಾದೀ ವ್ಯವ ಸ್ಥೆಯ ಆಗಮನವನ್ನು ಅಸಾಧ್ಯಮಾಡಿತ್ತು. ಹಿಂದುಳಿದ ಮತ್ತು ಸ್ವಯಂ ಸಂಪೂರ್ಣತೆಯ ಆರ್ಥಿಕ ವ್ಯವಸ್ಥೆ, ವಿಶಾಲ ಭೂಪ್ರದೇಶ ಕಡಿಮೆ ಜನ ಸಂಖ್ಯೆ ಮತ್ತು ಶೋಷಿತವರ್ಗದ ಮೌಢ ಇವುಗಳು ಅತಿಪ್ರಮಾಣ ದಲ್ಲಿ ವರ್ಗವೈಷಮ್ಯವನ್ನೂ ಆರ್ಥಿಕ ವಿರಸವನ್ನೂ ತರದಿರುವುದರಿಂದ ಸಮಾಜವಾದದ ಆವಶ್ಯಕತೆಯೇ ಬರುವುದಿಲ್ಲ. ಶೋಷಣೆ ಮತ್ತು ದುಸ್ಥಿತಿ ಇದ್ದರೂ, ಇವುಗಳ ಒತ್ತಡ ಕ ಡಿ ಮೆ ಇ ರು ವು ದ ರಿ ೦ ದ , ವ್ಯವಸ್ಥೆ ಮತ್ತು ಉತ್ಪಾದನಾಶಕ್ತಿಗಳು ಇನ್ನೂ ಅಭಿವೃದ್ಧಿ ಹೊಂದಲು ಅವಕಾಶವಿರುವುದರಿಂದ, ಸಮಾಜದ ಉತ್ಪಾದನಾ ಸಾಧನಗಳ ಸಮಾಜೀ