ಇದೇ ಮಾರ್ಕ್ಸ್‌ವಾದದಲ್ಲಿ ಅಡಗಿರುವ ವೈಶಿಷ್ಟತೆ ಮತ್ತು ವೈಜ್ಞಾ
ನಿಕ ಮಾರ್ಗವಾಗಿದೆ. ವಿಜ್ಞಾನಿಯಾದವನು ಪ್ರಕೃತಿಯನ್ನು ಪರೀಕ್ಷಿಸಿ
ವೈಜ್ಞಾನಿಕ ಸೂತ್ರಗಳನ್ನು ರಚಿಸುವುದರ ಮೂಲಕ ಪ್ರಕೃತಿಯ ಚಲನ
ವಲನೆ ಮತ್ತು ಘಟನೆಗಳನ್ನು ತರ್ಕಿಸುವಂತೆ ಮಾರ್ಕ್ಸ್-ಏಂಗೆಲ್ಸರು
ಸಮಾಜದ ಇತಿಹಾಸವನ್ನು ಪ್ರತಿಬಿಂಬಿಸುವಂತೆ ಸಮಾಜ ಸೂತ್ರಗಳನ್ನು
(Social Laws) ರಚಿಸಿದರು. ಸಮಾಜವಾದದ ಅನಿವಾರ್ಯತೆಯನ್ನು
ತರ್ಕಿಸಿದರು. ಇತಿಹಾಸ ವಿಜ್ಞಾನದ ಸಿದ್ಧಾಂತವನ್ನು (The Science
of History) ಪ್ರತಿಪಾದಿಸಿದರು.
ಸಮಾಜ ಸೂತ್ರಗಳ ರಚನೆಗಾಗಿ ಮಾರ್ಕ್ಸ್-ಏಂಗೆಲ್ಸರು ತೊಡಗಿ
ಸಮಾಜದ ಇತಿಹಾಸವನ್ನು ಸುದೀರ್ಘವಾಗಿ ಪರಿಶೋಧಿಸಿದರು. ಈ ಫಲ
ವಾಗಿ ಸಮಾಜ ವ್ಯವಸ್ಥೆಯಲ್ಲಿ ವಿಕಾಸವೂ, ಸಮಾಜದ ಪ್ರತಿಯೊಂದು
ಅವಸ್ಥೆಯ ಸ್ವರೂಪ ಒಂದು ಕ್ರಮಕ್ಕೆ ಒಳಪಟ್ಟಿರುವುದೂ ಮತ್ತು ಒಂದು
ಅವಸ್ಥೆ ಅದರ ಹಿಂದಿನ ಅವಸ್ಥೆಯಿಂದ ಹೊರಹೊಮ್ಮಿರುವುದೂ ಕಂಡು
ಬಂದಿತು. ಈ ಪ್ರಕಾರ ಸಮಾಜ ಅನಾಗರಿಕ, ಪ್ರಾಚೀನ ಊಳಿಗಮಾನ್ಯ
ಘಟ್ಟಗಳನ್ನು ದಾಟಿ ಈಗ ಬಂಡವಾಳಶಾಹಿ ಘಟ್ಟಕ್ಕೆ ಬಂದಿದೆ. ಅಲ್ಲದೆ
ಸಮಾಜವಿಕಾಸ, ಬದಲಾವಣೆಗಳು, ವಿಕಾಸದಲ್ಲಿ ಕ್ರಮ ಎಲ್ಲವೂ ಆರ್ಥಿಕ
ಬದಲಾವಣೆಗಳಿಂದ ಉಂಟಾಗಿರುವುದು ವ್ಯಕ್ತವಾಯಿತು ಮತ್ತು ಪ್ರತಿ
ಆರ್ಥಿಕ ವ್ಯವಸ್ಥೆಯಲ್ಲಿಯೂ ಅದಕ್ಕೆ ಸರಿಹೊಂದುವ ಸಾಮಾಜಿಕ ನ್ಯಾಯ,
ರಾಜಕೀಯ ವ್ಯವಸ್ಥೆ ಮತ್ತು ಭಾವನೆಗಳು ಇರುವುದು ಗೋಚರವಾಯಿತು.
ಜೊತೆಗೆ ಪ್ರತಿಯೊಂದು ಅವಸ್ಥಾರೂಪದಲ್ಲಿ ವರ್ಗಗಳಿದ್ದು (Classes)-
ಪ್ರಾಚೀನ ಸಮಾಜದಲ್ಲಿ ಯಜಮಾನ ಮತ್ತು ಗುಲಾಮ, ಊಳಿಗಮಾನ್ಯ
ಸಮಾಜದಲ್ಲಿ ಒಡೆಯ ಮತ್ತು ಜೀತಗಾರ-ವರ್ಗವೈಷಮ್ಯವಿರುವುದು
ಕಂಡು ಬಂದಿತು. ಈ ವರ್ಗಗಳು ಮತ್ತು ವರ್ಗವೈಷಮ್ಯ ಬಂಡವಾಳ
ಅವಸ್ಥೆಯಲ್ಲಿ ಅತ್ಯಂತ ಉಗ್ರರೂಪವನ್ನು ತಾಳಿ, ಸ್ವಾಮ್ಯವರ್ಗ
(Bourgeoisie) ಮತ್ತು ಕಾರ್ಮಿಕವರ್ಗ (Proletariat) ಪರಸ್ಪರ
ವಿರೋಧಿಗಳಾಗಿ ನಿಂತಿರುವುದು ಗೋಚರವಾಯಿತು. ಬ೦ಡವಾಳ
ವ್ಯವಸ್ಥೆಯಲ್ಲಿ ಹುದುಗಿರುವ ವಿರಸಗಳು ವರ್ಗವೈಷಮ್ಯವನ್ನು ತೀವ್ರ
ಗೊಳಿಸುತ್ತಿರುವುದು ವ್ಯಕ್ತವಾಯಿತು. ವಿರಸವನ್ನು ತೊಡೆದುಹಾಕಲು