ಕರಣ, ಸ್ವಾಮ್ಯದ ನಾಶ, ಎಲ್ಲವೂ ದುಸ್ಸಾಧ್ಯದ ಮಾತಾಗುತ್ತದೆ.
ಇಂತಹ ಪರಿಸ್ಥಿತಿಗಳಲ್ಲಿ ಸಮಾಜವಾದೀ ವ್ಯವಸ್ಥೆಯನ್ನು ಆಶಿಸುವುದು
ಕಲ್ಪನೆಯಾಗುತ್ತದೆ. ಇರುವ ಆರ್ಥಿಕ ಪರಿಸ್ಥಿತಿ ವಿರಸಪೂರಿತವಾಗಿ,
ಅದರಲ್ಲಿರುವ ವಿರಸಗಳೇ ಸಮಾಜದ ಉತ್ಪಾದನಾ ಸಾಧನಗಳನ್ನು
ಸಮಾಜೀಕರಣಮಾಡುವಂತೆ ಎಡೆಗೊಡುವವರೆಗೂ ಸಮಾಜವಾದದ ಆವಶ್ಯ
ಕತೆಯೇ ಇರುವುದಿಲ್ಲ,
ಮಾರ್ಕ್-ಏಂಗೆಲ್ಸರು ಕಲ್ಪನಾ ಸಮಾಜವಾದದ ವಿರುದ್ಥ ತಮ್ಮ
ವೈಜ್ಞಾನಿಕ ವಾದವನ್ನು ಮಂಡಿಸಿದರು. ಐತಿಹಾಸಿಕನಾಗಿ ರೂಪುಗೊಂಡಿ
ರುವ ಕಾರ್ಮಿಕವರ್ಗ ಮತ್ತು ಸ್ವಾಮ್ಯವರ್ಗಗಳ-ಹೊರಾಟದ
ಫಲವಾಗಿ ಆವಶ್ಯಕವಾಗಿ ಸಮಾಜವಾದ ಜನ್ಮತಾಳುತ್ತದೆಂದರು.
(Scientific Socialism is the necessary outcome
of the struggle between two historically developed
classes-the proletariat and the bourgeoisie).
ಅತ್ಯಂತ ಪರಿಪೂರ್ಣತೆಯ ಸಮಾಜವನ್ನಾಗಲಿ ಅಥವಾ ಉತ್ಕೃಷ್ಟ ಸಮಾಜ
ವನ್ನಾಗಲಿ ಅಥವಾ ಮಾದರಿ ಸಮಾಜವನ್ನಾಗಲಿ ನಿರ್ಮಾಣಮಾಡುವುದು
ಅನಾವಶ್ಯಕವಾಗಿದೆ. ಸಮಾಜವಾದದ ಆಗಮನವನ್ನು ನಿರೀಕ್ಷಿಸಲು ಆರ್ಥಿಕ
ಮತ್ತು ಐತಿಹಾಸಿಕ ಘಟನೆಗಳನ್ನು ಮತ್ತು ಅವುಗಳಿಂದ ಅನಿವಾರ್ಯವಾಗಿ
ಹೊರಹೊಮ್ಮಿರುವ ವರ್ಗಗಳು ಮತ್ತು ವರ್ಗಗಳ ವಿರೋಧವನ್ನು (ವೈಷಮ್ಯ)
ಪರೀಕ್ಷಿಸಬೇಕು. ಹೀಗೆ ವ್ಯವಸ್ಥೆ ಹೊಂದಿರುವ ಆರ್ಥಿಕ ಪರಿಸ್ಥಿತಿಗಳಲ್ಲಿ
ಬಡಿದಾಟವನ್ನು ಕೊನೆಗಾಣಿಸಲು ಮಾರ್ಗವನ್ನು ಸಂಶೋಧಿಸಬೇಕು.
(Its scientific socialism) task was no longer to
manufacture a system of society as perfect as
possible, but to examine the historico-economic
succession of events from which these classes
and their antagonism had of necessity sprung,
and to discover in the economic conditions thus
created the means of ending the conflict).