ಈ ಪುಟವನ್ನು ಪ್ರಕಟಿಸಲಾಗಿದೆ
ಮು ನ್ನು ಡಿ

ವಿದ್ಯಾಭ್ಯಾಸದ ಸರ್ವಶ್ರೇಣಿಗಳಲ್ಲಿಯೂ ದೇಶಭಾಷೆ ಶಿಕ್ಷಣಮಾಧ್ಯ
ಮವಾಗಬೇಕಾದುದು ಅತ್ಯವಶ್ಯವಾಗಿದೆ, ಇದು ಒಬ್ಬಿಬ್ಬರು ಭಾಷಾಭಿ
ಮಾನಿಗಳು ದುರುದ್ದೇಶದಿಂದಾಗಲಿ ಪಕ್ಷಪಾತ ಮನೋಭಾವದಿಂದಾಗಲಿ
ಹೇಳುವ ಮಾತಲ್ಲ. ರಾಷ್ಟ್ರದ ಸರ್ವತೋಮುಖವಾದ ಪ್ರಗತಿ ಮತ್ತು
ವಿದ್ಯಾರ್ಥಿಗಳ ಸರ್ವಾಂಗೀಣವಾದ ವಿಕಾಸ-ಇವುಗಳ ಹಿನ್ನೆಲೆಯಲ್ಲಿ
ನಡೆಸಿದ ಕೂಲಂಕಷವಾದ ಚರ್ಚೆ ಮತ್ತು ಸರ್ವಂಕಷವಾದ ವಿಚಾರ
ಮಂಥನಗಳ ಫಲವಾಗಿ ಸಿದ್ದಿ ಸಿದ ತವಿದು ಡಾ| ಅಮರನಾಥಝಾ
ರಂಥ ಶ್ರೇಷ್ಠ ಶಿಕ್ಷಣತಜ್ಞರಿಂದ ಹಿಡಿದು ಮಹಾತ್ಮ ಗಾಂಧಿಜಿಯಂಥ
ರಾಷ್ಟ್ರ ನಾಯಕರವರೆಗೆ ಎಲ್ಲರೂ ದೇಶಭಾಷಾಮಾಧ್ಯಮದ ಸಾರ್ಥಕತೆ
ಯನ್ನು ಒತ್ತಿ ಹೇಳಿದ್ದಾರೆ. ಹಿಂದಿನ ಆಂಗ್ಲ ಸರ್ಕಾರ ನೇಮಿಸಿದ್ದ
ಸ್ಯಾಡ್ಡರ್ ವಿಚಾರಣಾಸಮಿತಿ ಮತ್ತು ಹಾರ್ಟೊಗ್ ಸಮಿತಿಗಳೂ ಸರ್
ಚಾರ್ಲ್ಸ್‌ವುಡ್, ಸರ್ ಸಾರ್ಜಂಟ್ ಮೊದಲಾದ ವಿದೇಶೀಯ ಶಿಕ್ಷಣ
ತಜ್ಞರೂ ದೇಶಭಾಷಾಮಾಧ್ಯಮದಿಂದಲ್ಲದೆ ಭಾರತೀಯರ ಶಿಕ್ಷಣ ಸಫಲ
ವಾಗದೆಂದೂ ಸಮರ್ಪಕವಾಗದೆಂದೂ ಏಕಕಂಠದಿಂದ ಸಾರಿದ್ದಾರೆ.

ಈ ಶಿಕ್ಷಣ ಸೂತ್ರವನ್ನು ದೃಷ್ಟಿಯಲ್ಲಿಟ್ಟು ಕೊಂಡೇ ಭರತಖಂಡದ
ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ದೇಶಭಾಷಾಮಾಧ್ಯಮ ಯಶಸ್ವಿಯಾಗಿ
ಕಾವ್ಯಗತವಾಗುತ್ತಿದೆ. ನಾಗಪುರ, ಅಲಹಾಬಾದ್, ಕಾಶಿ ಮೊದಲಾದ
ವಿಶ್ವವಿದ್ಯಾನಿಲಯಗಳಿಂದ ಅಧಿಕೃತವಾಗಿ ದೊರೆತ ವರದಿಗಳಿಂದ ವಿದ್ಯಾರ್ಥಿ
ಗಳು ಆದರಪೂರ್ವಕವಾಗಿ ಅನಿರ್ಬಂಧವಾಗಿ ದೇಶಭಾಷಾ ಮಾಧ್ಯಮವನ್ನು
ಆರಿಸಿಕೊಳ್ಳುತ್ತಿರುವುದೂ ಅದರಿಂದ ಪರೀಕ್ಷೆಗಳಲ್ಲಿ ಫಲಿತಾಂಶ ತುಂಬ
ಆಶಾದಾಯಕವಾಗಿ ಗೋಚರಿಸುತ್ತಿರುವುದೂ ಸುಸ್ಪಷ್ಟವಾಗುತ್ತದೆ.

ದೇಶಭಾಷಾಮಾಧ್ಯಮ ಬೇಡವೆನ್ನುವ ಸಂಪ್ರದಾಯಶರಣರ ಸಂಖ್ಯೆ
ಈಗೀಗ ಬಹುಮಟ್ಟಿಗೆ ಇಳಿಮುಖವಾಗುತ್ತಿದ್ದರೂ ಅಲ್ಲೊಬ್ಬರು. ಇಲ್ಲೊ
ಬ್ಬರು ಇನ್ನೂ ಇದ್ದಾರೆ, ಅವರು ತಮ್ಮ ನಿಲುವನ್ನು ಸಾಧಿಸಲು ಕೊಡುವ
ಮುಖ್ಯಕಾರಣಗಳಿವು.