1. ದೇಶಭಾಷೆಗಳಲ್ಲಿ ಪಾರಿಭಾಷಿಕ ಅಥವಾ ವೈಜ್ಞಾನಿಕ ಪದಗಳ
ದಾರಿದ್ರ್ಯ.
2. ಗ್ರಂಥಗಳ ಅಭಾವ.
3. ವಿವಿಧ ಪ್ರಾಂತಗಳ ವಿದ್ವಾಂಸರ ಸಂಪರ್ಕಕ್ಕೆ ಮತ್ತು ಸರ್ಕಾರಿ
ನೌಕರರ ಪರಸ್ಪರ ವಿನಿಮಯಕ್ಕೆ ಅಡಚಣೆ.
ಈ ಕಾರಣಗಳು ಸಂಪೂರ್ಣ ನಿರಾಧಾರವೆಂಬುದು ಕೆಳಗಣ ವಿವರಣೆ ಯಿಂದ ವ್ಯಕ್ತವಾಗುತ್ತದೆ.
1. ವೈಜ್ಞಾನಿಕ ಅಥವಾ ಪಾರಿಭಾಷಿಕ ವಿಷಯಗಳಿಗೆ ಹೊಸ
ಹೊಸ ಶಬ್ದಗಳನ್ನು ಸೃಷ್ಟಿಸುವ ಸಂಕಟಕ್ಕೆ ಗುರಿಯಾಗಬೇಕಾಗಿಲ್ಲ, ಅಂತರ
ರಾಷ್ಟ್ರೀಯ ಶಬ್ದಗಳನ್ನೆ ಇದ್ದಕ್ಕಿದ್ದ ಹಾಗೆಯೆ ಬಳಸಿಕೊಳ್ಳಬಹುದು.
ಆವಶ್ಯಕತೆ ಕಂಡುಬಂದರೆ ಮಾತ್ರ ವಿವರಣಾತ್ಮಕವಾಗಿ ದೇಶಭಾಷೆಯ
ಶಬ್ದಗಳನ್ನು ಉಪಯೋಗಿಸಬಹುದು. ಪಾರಿಭಾಷಿಕ ಶಬ್ದಗಳು ವಾಸ್ತವ
ವಾಗಿ ಅಂಕಿತನಾಮಗಳು ತಾನೆ ! ಕೇಂದ್ರ ಸರ್ಕಾರದ ವಿದ್ಯಾ ಖಾತೆ ತಯಾ
ರಿಸಿರುವ ಪಾರಿಭಾಷಿಕ ಪದಗಳ ಕೋಶ ಈ ತತ್ವವನ್ನೇ ಅವಲಂಬಿಸಿದೆ.
ಮೈಸೂರು ವಿಶ್ವವಿದ್ಯಾನಿಲಯವೂ ಈ ಮಾರ್ಗವನ್ನೆ ಸಂಪೂರ್ಣವಾಗಿ
ಅಂಗೀಕರಿಸಿದೆ.
2. ಈಗಾಗಲೆ ಎಲ್ಲ ಭಾಷೆಗಳಲ್ಲಿಯೂ ವೈಜ್ಞಾನಿಕ ಗ್ರಂಥಗಳು
ಹೊರಬೀಳುತ್ತಿವೆ ಆವಶ್ಯಕತೆ ಹೆಚ್ಚಿದಂತೆಲ್ಲ ಅವುಗಳ ಸಂಖ್ಯೆಯ
ಬೆಳೆಯುತ್ತದೆ, ಪೇಟೆಯಲ್ಲಿ ಗಿರಾಕಿಯಿದೆಯೆಂದು ತಿಳಿದರೆ ಸಾಕು,
ಗ್ರಂಥಗಳು ಲೆಕ್ಕವಿಲ್ಲದೆ ಹೊರಬರುತ್ತವೆ.
3. ಅಂತರರಾಷ್ಟ್ರೀಯ ಪಾರಿಭಾಷಿಕ ಶಬ್ದಗಳನ್ನು ಬಿಡುವುದಿಲ್ಲ
ವಾದುದರಿಂದಲೂ ಹಿಂದಿ ಅಥವಾ ಇಂಗ್ಲಿಷ್ ಭಾಷೆಯನ್ನು ಕಡ್ಡಾಯ
ವಾಗಿ ಎಲ್ಲ ವಿದ್ಯಾರ್ಥಿಗಳೂ ಒಂದಲ್ಲ ಒಂದು ರೀತಿಯಲ್ಲಿ ಕಲಿಯಬೇಕಾಗಿರು
ವುದರಿಂದಲೂ ವಿದ್ವಾಂಸರ ಸಂಪರ್ಕಕ್ಕಾಗಿ ಸರ್ಕಾರಿ ನೌಕರರ ವಿನಿಮ
ಯಕ್ಕಾಗಲಿ ಅಡಚಣೆ ಆಗುವುದಿಲ್ಲ. ಈ ದೊಡ್ಡ ರಾಷ್ಟ್ರದಲ್ಲಿ ಸರ್ಕಾರಿ
ನೌಕರರ ಸಂಖ್ಯೆ ಅತ್ಯಲ್ಪಭಾಗವೆನ್ನುವುದನ್ನೂ ಈ ಅತ್ಯಲ್ಪಸಂಖ್ಯೆಯ