ನೈಜ್ಞಾನಿಕ ಸಮಾಜವಾದ ಜೀವಾದಿಗಳೆಲ್ಲವೂ ಭೌತ ಸ್ವರೂಪ (Matter) : ಪ್ರಪಂಚದ ಹುಟ್ಟಿಗೆ ಚಲನವಲನಗಳಿಗೆ ದೇವರು ಕಾರಣವಾಗಿರದೆ ಭೌತ ಸ್ವರೂಪವೇ ಕಾರಣವೆಂದು ಆದಿಯಿಂದ ಬಂದು ತಮ್ಮ ಪಂಥ ಹೇಳುತ್ತಲಿತ್ತು. ಈ ವಾದ ಪಾಶ್ಚಾತ್ಯ, ಪೌರ್ವ್ವಾತ್ಯಗಳೆರಡರಲ್ಲೂ ಕಂಡು ಬರುತ್ತದೆ (ಗ್ರೀಸಿನಲ್ಲಿ ಯಪಿಕ್ಯುರಸ್, ಡೆಮೋಕ್ರೆಟಿಸ್; ಭಾರತದಲ್ಲಿ ಲೋಕಾಯತ ಅಣುವಾದಿ ಗಳಾದ ಕಣಾದ ಋಷಿ), ಕ್ರಮೇಣ ಈ ವಾದ ಮೂಲೆಗೆ ಬಿದ್ದು ಭಾವಾತ್ಮಿಕ ತಮ್ಮ ಪ್ರಾಬಲ್ಯಕ್ಕೆ ಬಂದಿತು. ಆದರೆ ಪುನಃ 17-18 ನೇ ಶತಮಾನ ಗಳಲ್ಲಿ ಭೌತವಾದ ಅವತರಿಸಿತು. ಇಂಗ್ಲೆಂಡಿನಲ್ಲಿ ರ್ಡಾಸ್ಪೋಟಸ್, ಹಾಬ್, ಲಾಕ್, ಬೇಕನ್ನರಿಂದ ಪ್ರ ತಿ ಸಾ ದಿ ಸಲ್ಪ ಟ್ಟು, ಫ್ರಾನ್ಸ್ ದೇಶದಲ್ಲಿ ಹಾಲ್‌ಬಾಕ್ಸ್, ಹೆಲ್ಷಿ ಯಸ್, ಡಿಡಿರೋರಿಂದ ಪ್ರಚಾರಕ್ಕೆ ಬಂದಿತು. ಜೊತೆಗೆ 16-17-18 ನೇ ಶತಮಾನಗಳಲ್ಲಿ ರೂಪುಗೊಂಡ ವಿಜ್ಞಾನ ಶಾಸ್ತ್ರ ಈ ವಾದಕ್ಕೆ ಪುಷ್ಟಿ ಕೊಟ್ಟಿತು, ಭೌತವಾದದ ನಿಜಾಂಶಕ್ಕೆ ವಿಜ್ಞಾನ ಸಮರ್ಥನೆ ಕೊಟ್ಟಿತು. ಅಷ್ಟಕ್ಕೇ 18 ನೇ ಶತಮಾನದ ಭೌತವಾದಿಗಳು ತೃಪ್ತಿ ಹೊಂದಿದರು. ಭೌತ ಪ್ರಪಂಚದಲ್ಲಿ ಚಲನೆ ಮತ್ತು ಚೈತನ್ಯ ಇಲ್ಲ ವೆಂದರು. ಯಾಂತ್ರಿಕ ಭೌತವಾದ (Mechanical Materialism) ಪ್ರಚಾರಕ್ಕೆ ಬಂದಿತು.
- ಈ ಸಂಧಿಗ್ಧ ಸಮಯದಲ್ಲಿ ಮಾರ್ಕ್ಸ್ -ಏಂಗೆಲ್ಸರು ಪ್ರವೇಶಮಾಡಿ
ದರು, ಅವರ ನಿಲುವು ಭೌತಾತ್ಮಕ ವಾದವಾಯಿತು. 18 ನೇ ಶತಮಾ ನದ ಅಚೈತನ್ಯದ, ಅಚಲನೆಯ ಭೌತವಾದವನ್ನು ಖಂಡಿಸಿದರು ; ತಾರ್ಕಿಕ ಭೌತವಾದವನ್ನು ಪ್ರತಿಪಾದಿಸಿದರು (Dialectical Materialism) ಭೌತ ಪ್ರಪಂಚದ ಸ್ವರೂಪವೇ ಚಲನೆ ಮತ್ತು ಚೈತನ್ಯ ವೆಂದರು, ಹೆಗೆಲ್ ಪ್ರತಿಪಾದಿಸಿದ ಇತಿಹಾಸ ದೃಷ್ಟಿಯನ್ನು ತಾರ್ಕಿಕ ಭೌತವಾದದ ಅಡಿಪಾಯದ ಮೇಲೆ ಸ್ಥಾಪಿಸಿದರು. ಸಮಾಜದ ಹುಟ್ಟು ಬೆಳವಣಿಗೆ, ಸಾಮಾಜಿಕ ಮತ್ತು ರಾಜಕೀಯ ರಂಗಗಳಲ್ಲಿ ಕಂಡು ಬರುವ ಬದಲಾವಣೆಗಳು ಮತ್ತು ಭಾವನೆಗಳು ಸಮಾಜದ ಆರ್ಥಿಕ ವ್ಯವಸ್ಥೆ ಅಥವಾ ಆಯಕಟ್ಟಿನಲ್ಲಿ (The Economic Structure) ಹುದುಗಿರುವ ಚೇತನಾಶಕ್ತಿಗಳಿಂದ ಮತ್ತು ಆಗುತ್ತಿರುವ ಬದಲಾವಣೆಗಳಿಂದ ಉಂಟಾ ಗಿವೆ ಎಂದು ತಿಳಿಸಿದರು. ಸಮಾಜದ ಸ್ವರೂಪವನ್ನು ಅನಂತ ಚಲನೆ