ಈ ಪುಟವನ್ನು ಪರಿಶೀಲಿಸಲಾಗಿದೆ
ವೈಜ್ಞಾನಿಕ ಸಮಾಜವಾದದ ಆಧಾರ
೪೭


ಯೆಂದು ಕಂಡುಹಿಡಿದರು. ಸಮಾಜಕ್ಕೆ ಅನ್ವಯಿಸುವ ಹಾಗೆ ಐತಿಹಾಸಿಕ ಭೌತವಾದವನ್ನು ಪ್ರತಿಪಾದಿಸಿದರು (Historical Materialism).
ಇದೇ ಸಮಯದಲ್ಲಿ ಫ್ರಾನ್ಸ್ ದೇಶದಲ್ಲಿ ಪ್ರಚಾರಕ್ಕೆ ಬಂದಿದ್ದ ಸಮಾಜವಾದ ಮಾರ್ಕ್-ಏಂಗೆಲ್ಸರ ಐತಿಹಾಸಿಕ ಭೌತವಾದ ದೃಷ್ಟಿಗೆ ಪುಷ್ಟಿಕೊಟ್ಟಿತು, ಇತಿಹಾಸಜ್ಞರು ವರ್ಗ ಹೋರಾಟ ವರ್ಗಗಳ ಇರುವಿಕೆ, ವಿರಸ ಇತ್ಯಾದಿಗಳ ಕಡೆ ಗಮನ ಸೆಳೆದಿದ್ದರು. ಇವುಗಳು ಕೊನೆಗೊಳ್ಳ ಬೇಕಾದರೆ ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಮಾರ್ಪಾಡು ಮಾಡಿದ ಹೊರತು, ಆರ್ಥಿಕ ಸಮಾನತೆಯನ್ನು ಸ್ಥಾಪಿಸಿದ ಹೊರತು, ಖಾಸಗೀ ಸ್ವಾಮ್ಯ ವಿನಾಶವಾದ ಹೊರತು ಸಾಧ್ಯವಿಲ್ಲವೆಂದು ಫ್ರೆಂಚ್ ಸಮಾಜವಾದಿ ಗಳು ತಿಳಿಸಿದ್ದರು. ಈ ಮಧ್ಯೆ ಶೋಷಣೆಯಿಂದ ಪಾರಾಗಲು ಯತ್ನಿಸಿ ಕಾರ್ಮಿಕವರ್ಗ ಸ್ವಾಮ್ಯವರ್ಗದ ಮೂಲೋತ್ಪಾಟನೆಗೆ ಶ್ರಮಿಸುತ್ತಿದ್ದಿತು. ಹೀಗಿರುವಾಗ, ಸಮಾಜವಾದಿಗಳು ಆಶಿಸಿದಂತೆ, ಸ್ವಾಮ್ಯವರ್ಗ ನಿರ್ನಾಮ ವಾಗುವುದಕ್ಕೆ ಸಹಾಯ ಸಂದರ್ಭಗಳನ್ನು ಆಧುನಿಕ ಬಂಡವಾಳ ಆರ್ಥಿಕ ವ್ಯವಸ್ಥೆ ಕಲ್ಪಿಸಿದೆಯೇ ಎಂಬುದಕ್ಕೆ ಉತ್ತರ ಬೇಕಾಯಿತು. ಈ ಉತ್ತರದ ಸಂಶೋಧನೆ ಮಾರ್ಕ್-ಏಂಗೆಲ್ಸರ ಪ್ರಥಮ ಕರ್ತವ್ಯವಾಯಿತು. ಉತ್ತರ ಸಿಕ್ಕಿತು, ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿರುವ ವಿರಸಗಳು ಮತ್ತು ಅದು ಜನ್ಮ ಕೊಟ್ಟಿರುವ ಹೊಸ ಶಕ್ತಿಯಾದ ಕಾರ್ಮಿಕವರ್ಗ ಬಂಡವಾಳ ವ್ಯವ ಸ್ಥೆಗೂ ಖಾಸಗೀ ಸ್ವಾಮ್ಯಕ್ಕೂ ಚ್ಯುತಿ ತರುವುದೆಂದರು. ಸಮಾಜವಾದದ ಆಗಮನ ಅನಿವಾರ್ಯವೆಂದರು. ತತ್ ಪರಿಣಾಮವಾಗಿ ಕಾರ್ಮಿಕವರ್ಗದ ಚಳವಳಿಗೂ ಸಮಾಜವಾದಕ್ಕೂ ನಿಕಟ ಸಂಬಂಧವನ್ನು ಕಲ್ಪಿಸಿದರು.
ಕಾರ್ಮಿಕವರ್ಗದ ಹೋರಾಟ ಮತ್ತು ಚಳವಳಿಗೆ ಶೋಷಣೆಯೇ ಮುಖ್ಯ ಕಾರಣವಾಗಿದೆ ಎಂದು ಮಾರ್ಕ್ಸ್-ಏಂಗೆಲ್ಸರು ತಿಳಿಸಿದರು. ಆದುದರಿಂದ, ಶೋಷಣೆ ಆಗುತ್ತಿರುವ ರೀತಿಯನ್ನು ವ್ಯಕ್ತಪಡಿಸುವುದು ಅಗತ್ಯವಾಯಿತು. ಇದಕ್ಕೆ ಇಂಗ್ಲೆಂಡ್ ದೇಶದಲ್ಲಿ ಬೃಹತ್ ಪ್ರಮಾಣ ದಲ್ಲಿ ವ್ಯವಸ್ಥೆ ಹೊಂದಿದ್ದ ಬಂಡವಾಳ ಉತ್ಪಾದನಕ್ರಮ ಶೋಷ ಣೆಯ ಮರ್ಮವನ್ನು ಬಹಿರಂಗಪಡಿಸಲು ನೆರವಾಯಿತು. ಮಾರ್ಕ್ಸ್- ಏಂಗೆಲ್ಸರು ಬಂಡವಾಳ ಆರ್ಥಿಕ ವ್ಯವಸ್ಥೆಯ ಬೆಳವಣಿಗೆ ಅದು ಕೆಲಸ ಮಾಡುವ ರೀತಿ, ಇತ್ಯಾದಿಗಳನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿದರು. ಲಾಭ