ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ - ಅಧ್ಯಾಯ 4. ಸಮಾಜವಾದದ ಅನಿವಾರ್ಯತೆಗೆ (Inevitability) ಬಂಡವಾಳ ಶಾಹಿ ವ್ಯವಸ್ಥೆಯಲ್ಲಿರುವ ವಿರಸಗಳೇ ಕಾರಣವಾಗಿವೆ. ಮಾರ್ಕ್ಸ್, ಏಂಗೆಲ್ಲರು ಈ ವಿರಸಗಳ ಬಗ್ಗೆ ಮತ್ತು ವಿರಸಗಳಿಗೆ ಎಡೆಯಿತ್ತಿರುವ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ದೀರ್ಘವಾದ ವಿವರಣೆಯನ್ನು ಕೊಟ್ಟ ದ್ದಾರೆ.
- ಒಂದನೆಯದಾಗಿ, ಬಂಡವಾಳ ಆರ್ಥಿಕವ್ಯವಸ್ಥೆಯ ಪ್ರಥಮಲಕ್ಷಣ
ವೆಂದರೆ ಖಾಸಗೀ ಸ್ವಾಮ್ಯ ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿ ಉತ್ಪಾದನಾ ವಸ್ತುಗಳಾದ ಭೂಮಿ, ಕೈಗಾರಿಕೆಗಳು ಮತ್ತು ಇತರ ಸಂಪತ್ತುಗಳು ಖಾಸಗಿಯಾಗಿ ವ್ಯಕ್ತಿಗಳಿಗೆ ಸೇರಿದ್ದಾಗಿವೆ, ಈ ವಸ್ತುಗಳನ್ನು ಹೊಂದಿರು ವವನು ತನಗೆ ಇಷ್ಟ ಬಂದ ರೀತಿಯಲ್ಲಿ ಅನುಭವಿಸಲು ಶಕ್ತನು. ಅವನ್ನು ಎಷ್ಟು ಪ್ರಮಾಣದಲ್ಲಿ ಹೊಂದಿರಬೇಕೆಂಬುದಕ್ಕೆ ಮಿತಿ ಇಲ್ಲ.
- ಬಂಡವಾಳಶಾಹಿ ವ್ಯವಸ್ಥೆಯ ದ್ವಿತೀಯ ಲಕ್ಷಣವೆಂದರೆ ಖಾಸಗೀ
ಉತ್ಪಾದನೆ, ನಿತ್ಯ ಜೀವನಕ್ಕೆ ಬೇಕಾಗಿರುವ ಆವಶ್ಯಕವಾದ ಅನ್ನ ಆಹಾರಾದಿಗಳು ಮತ್ತು ಇತರೆ ವಸ್ತುಗಳು ಪ್ರತ್ಯೇಕ ಪ್ರತ್ಯೇಕವಾಗಿ ಖಾಸಗೀ ವ್ಯಕ್ತಿಗಳು ತಯಾರಿಸಿದ್ದು ಅಥವಾ ಬೆಳೆದವುಗಳಾಗಿವೆ. ಮುಖ್ಯ ವಾಗಿ ಈ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ದೃಷ್ಟಿಯಿಂದಲೇ ಪದಾರ್ಥಗಳ ತಯಾರಿಕೆ ಅಥವ ಉತ್ಪಾದನೆ ನಡೆಯುವುದು, ಮಾರುಕಟ್ಟೆಯಲ್ಲಿ ಪದಾರ್ಥ ಗಳನ್ನು ವಿಕ್ರಯಮಾಡಿ ಹಣ ಪಡೆಯಬೇಕು. ಉತ್ಪಾದನೆಯ ಮೇಲೆ ಮಾರುಕಟ್ಟೆಯ ಬೆಲೆಯು ಬೀರುವ ಪ್ರಭಾವವನ್ನು ತಡೆದುಕೊಳ್ಳಲು ವ್ಯಕ್ತಿಗಳು ಸಿದ್ಧರಿರಬೇಕು ಬಂಡವಾಳಶಾಹಿ ಉತ್ಪಾದನೆಯ ಮರ್ಮವೆಂದರೆ ವಿಕ್ರಯವಾಗುವ ವಸ್ತುವಿಗೆ ಸರಿಯಾದ ಪ್ರತಿಫಲ ಸಿಕ್ಕುವ ಹಾಗಿದ್ದರೆ ಇನ್ನೂ ಹೆಚ್ಚಾಗಿ ಪದಾರ್ಥಗಳು ತಯಾರಾಗುತ್ತವೆ. ಇಲ್ಲವಾದರೆ, ನಷ್ಟದಿಂದ ಪಾರಾಗಲು ಉತ್ಪಾದನೆಯೇ ನಿಲ್ಲುತ್ತದೆ. ಮೂರನೆಯದಾಗಿ, ಕೂಲಿಗಾಗಿ ದುಡಿಮೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉತ್ಪಾದನಾಕಾರ್ಯ ಕೇವಲ ಒಬ್ಬನಿಂದ ಸಾಧ್ಯವಿಲ್ಲ ಇದು ಸಾಮೂಹಿಕ ವಾಗಿ ನಡೆಯುವ ಕಾರ್ಯ, ಕೂಲಿಗಾಗಿ ದುಡಿಯುವ ಕಾರ್ಮಿಕವರ್ಗದಿಂದ