ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ ೫೯ ಉತ್ಪಾದನೆ ನಡೆಯುತ್ತದೆ. ದುಡಿಮೆಯನ್ನು ಕೂಲಿ, ವೇತನ ಸಂಬಳ ಇವು ಗಳಿಗೆ ವಿಕ್ರಯಮಾಡುವ ಅಸ್ವಾಮ್ಯ ವರ್ಗದ ಜನರಿಲ್ಲದೆ ಉತ್ಪಾದನಾ ಕೆಲಸ ಸಾಗುವಂತೆಯೇ ಇಲ್ಲ, ದೃಷ್ಟಾಂತಕ್ಕೆ ಒಂದು ಕೈಗಾರಿಕೆಯನ್ನು ತೆಗೆದುಕೊಳ್ಳೋಣ. ಆ ಕೈಗಾರಿಕೆಯ ಮಾಲೀಕತ್ವ ಒಬ್ಬನಿಗೆ ಸೇರಿದ್ದಾ ದರೂ, ಒಬ್ಬನೇ ಆ ಕೈಗಾರಿಕೆಯನ್ನು ನಡೆಸಲು ಸಾಧ್ಯವಿಲ್ಲ. ಇತರರ ಸಹಾಯ ಅತ್ಯಗತ್ಯ. ಕೂಲಿಗಾಗಿ ದುಡಿಮಮಾಡುವವರಿಲ್ಲದಿದ್ದರೆ ಉತ್ಪಾದ ನೆಯೇ ನಿಂತು ಹೋಗುತ್ತದೆ. 1 ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿ ವಸ್ತುಗಳ ಉತ್ಪಾದನೆ ಇತರರ ಸಹಾಯವನ್ನು ಪಡೆದು ಪರಸ್ಪರ ದುಡಿಮೆ ಯಿಂದ ನಡೆಸುವ ಉತ್ಪಾದನೆಯಾಗಿದೆ. ನಾಲ್ಕನೆಯದಾಗಿ, ಲಾಭ, ಉತ್ಪಾದನೆಯು ಸುಲಲಿತವಾಗಿ ಸಾಗಾ ಣಿಕೆಯಾಗುವುದಕ್ಕೆ ಸ್ವಾಮ್ಯ ವರ್ಗಕ್ಕೆ ಸಿಗುವ ಲಾಭವೇ ಪ್ರಚೋದನಾ ಶಕ್ತಿಯಾಗಿ ಉಳಿದಿದೆ. ದುಡಿಮೆಯವರಿಂದ ಉತ್ಪಾದನೆ ನಡೆಸಿ, ಅವರಿಗೆ ಕೊಡಬೇಕಾಗಿರುವ ಕೂಲಿ ಮತ್ತು ಇತರ ಖರ್ಚುಗಳನ್ನು ಕಳೆದು, ಸ್ವಾಮ್ಯ ಹೊಂದಿರುವವನಿಗೆ ಲಾಭ ಸಿಗದಿದ್ದರೆ ಆತನು ಉತ್ಪಾದನಾ ಕಾರ್ಯಕ್ಕೆ (1) ಒಬ್ಬ ವ್ಯಕ್ತಿ ಯಾವ ಕೂಲಿಗಾರನನ್ನೂ ನೇಮಿಸಿಕೊಳ್ಳದೆ, ಸ್ನಾನ ಲಂಬಿ ಅಥವ ಆತನ ಸಂಸಾರದವರ ಸಹಾಯವನ್ನು ಮಾತ್ರ ತೆಗೆದು ಕೊಂಡು ನಡೆಸುವ ಉತ್ಪಾದನೆಯೂ ಉಂಟು. ಇಂತಹ ಉತ್ಪಾದನೆಯಲ್ಲಿ ಶೋಷಣೆಗೆ ಅವಕಾಶವಿಲ್ಲ. ಆದರೆ ಆಧುನಿಕ ಕಾಲದ ಆರ್ಥಿಕ ವ್ಯವಸ್ಥೆಯಲ್ಲಿ ಸ್ವಾವಲಂಬಿ ಉತ್ಪಾದನೆಯೂ ಸಹ ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟ ದೆ. ಬಂಡವಾಳ ಆರ್ಥಿಕ ವ್ಯವಸ್ಥೆಯ ಒಂದು ಅಂಗವಾಗಿದೆ. ಕೂಲಿಗಾರರನ್ನು ನೇಮಿಸಿಕೊಂಡು, ಲಾಭದ ದೃಷ್ಟಿಯಿಂದ ತಯಾರಾದ ವಸ್ತುಗಳು ಸ್ವಾವಲಂಬಿ ಉತ್ಪಾದಕರಿಗೆ ಬೇಕಾಗಿವೆ. ಹಾಗೆಯೇ ಸ್ವಾವಲಂಬಿ ಉತ್ಪಾದಕರಸ ವಸ್ತುಗಳು ಬಂಡವಾಳಗಾರನಿಗೆ ಬೇಕಾಗಿದೆ. ಸ್ವಾವಲಂಬಿ ಉತ್ಪಾದನೆಗೂ ಬಂಡವಾಳಶಾಹಿ ಉತ್ಪಾದನೆಗೂ ನಿಕಟ ಸಂಬಂಧವಿದೆ. ಸ್ವಾವಲಂಬಿ ಉತ್ಪಾದನೆಯನ್ನು ಕೈಗಾರಿಕೆಯಲ್ಲಿ ಮುಂದುವರಿದ ದೇಶಗಳಿ ಗಿಂತ ವ್ಯವಸಾಯವೇ ಪ್ರಾಧಾನ್ಯವಾಗುಳ್ಳ ದೇಶಗಳಲ್ಲಿ (ಉದಾ : ಭಾರತ ಮತ್ತು ಚೀಣಾ) ಅಧಿಕವಾಗಿ ಕಾಣಬಹುದು, ಮಾರ್ಕ್ಸ್‌ವಾದರೂ ವ್ಯವಸಾಯನೇ ಪ್ರಾಧಾನ್ಯವಾಗುಳ್ಳ (ಹಿಂದುಳಿದ) ದೇಶಗಳಿಗೂ ಇರುವ ಸಂಬಂಧದ ಬಗ್ಗೆ ಮುಂದಿನ ಆಧ್ಯಾಯಗಳನ್ನು ನೋಡಿ, ವ