ಈ ಪುಟವನ್ನು ಪ್ರಕಟಿಸಲಾಗಿದೆ



v

ಸರ್ಕಾರಿ ನೌಕರಿ ಜನರ ಹಿತಕ್ಕಾಗಿ ಇಡೀ ರಾಷ್ಟ್ರದ ಕಲ್ಯಾಣವನ್ನು ಬಲಿ ಗೊಡುವುದು ಸರಿಯಲ್ಲವೆಂಬುದನ್ನೂ ಮರೆಯಬಾರದು.
ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಮಾಧ್ಯಮವನ್ನು ಈಗ ತಾನೆ ಕಾಠ್ಯ ರೂಪಕ್ಕೆ ತಂದಿದೆ. ಇದಕ್ಕೆ ಸಹಾಯಕವಾಗುವಂತೆ ಈಗಾಗಲೇ ವಿಜ್ಞಾನ ಸಂಬಂಧವಾದ ನಾಲ್ಕಾರು ಗ್ರಂಥಗಳನ್ನು ಪ್ರಕಟಿಸಿರುವುದಲ್ಲದೆ ಎಲ್ಲ ವಿಷಯಗಳ ಮೇಲೂ ಗ್ರಂಥಗಳನ್ನು ಬರೆಸಲು ಯೋಜನೆಯನ್ನು ಸಿದ್ಧಪಡಿಸಿದೆ. ಬ್ಯಾರಿಸ್ಟರ್ ಎಲ್, ಶ್ರೀಕಂಠಯ್ಯನವರ “ ಕಮ್ಯೂನಿಸಂ" ಈ ಯೋಜನೆಯ ಅಂಗವಾಗಿ ಹೊರಬರುತ್ತಿದೆ. ಇನ್ನೂ ನಾಲ್ಕಾರು ಹೆಬ್ಬೊತ್ತಿಗೆಗಳು ಇದೇ ರೀತಿಯಲ್ಲಿ ಪ್ರಕಟಣೆಗೆ ಸಿದ್ಧವಾಗಿವೆಯೆಂದು ಹೇಳಲು ಸಂತೋಷವಾಗುತ್ತದೆ.
ಶ್ರೀಮಾನ್ ಶ್ರೀಕಂಠಯ್ಯನವರು ಪಾಶ್ಚಾತ್ಯ ವಿಶ್ವವಿದ್ಯಾನಿಲಯ ಗಳಲ್ಲಿ ಪ್ರೌಢವ್ಯಾಸಂಗವನ್ನು ಮಾಡಿ, ಕೆಲವು ಕಾಲ ಮೈಸೂರು ವಿಶ್ವವಿದ್ಯಾ ನಿಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ಅನೇಕ ವಿದ್ಯಾರ್ಥಿ ಗಳಿಗೆ ಆ ಶಾಸ್ತ್ರವನ್ನು ಬೋಧಿಸಿ, ಗಾಢವೂ ಅಗಾಧವೂ ಆದ ಅನುಭವ ವನ್ನು ಪಡೆದಿದ್ದಾರೆ. ಇವರ ಈ ಗ್ರಂಥ ಸರ್ವಮಾನ್ಯ ವಾಗುವುದರಲ್ಲಿ ಸಂದೇಹವಿಲ್ಲ.

ಮೈಸೂರು,
೧೮-೧೦-೧೯೫೭
ಕೆ. ವಿ. ಪುಟ್ಟಪ್ಪ
ಪ್ರಧಾನ ಸಂಪಾದಕ
ಮತ್ತು
ಪ್ರಕಟನ ಸಮಿತಿಯ ಅಧ್ಯಕ್ಷ.