ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ವೈಜ್ಞಾನಿಕ ಸಮಾಜವಾದ ತೊಡಗುವುದೂ ಇಲ್ಲ ಮತ್ತು ದುಡಿಮೆಯವರನ್ನು ಕೆಲಸಕ್ಕೆ ತೆಗೆದುಕೊಳ್ಳು ವುದೂ ಇಲ್ಲ, ತಯಾರಾದ ಪದಾರ್ಥಗಳ ವಿಕ್ರಯದಿಂದ ಬರುವ ಹಣ ಲಾಭವನ್ನು ತೋರಿಸಬೇಕು, ಹೆಚ್ಚು ಲಾಭ ದೊರೆತಷ್ಟೂ ಬಂಡವಾಳ ಶೇಖರಣೆಯಾಗುತ್ತದೆ ; ಮತ್ತು ಹೊಸ ಉದ್ಯಮಗಳಲ್ಲಿ ಶೇಖರಣೆಯಾದ ಬಂಡವಾಳವನ್ನು ಹಾಕಲು, ಹೊಸ ತಾಂತ್ರಿಕ ಉಪಯೋಗದಿಂದ ಹೆಚ್ಚು ಉತ್ಪಾದನೆ ನಡೆಸಲು ಆಗುತ್ತದೆ. ಲಾಭಕ್ಕೆ ಧಕ್ಕೆ ಬರುವಂತಿದ್ದರೆ, ಸ್ವಾಮ್ಯ ಹೊಂದಿರುವವನು (ಕೈಗಾರಿಕಾ ಮಾಲೀಕನು) ಉತ್ಪಾದನೆಗೆ ತೊಡಗು ವುದೇ ಇಲ್ಲ. ಐದನೆಯದಾಗಿ, ಪೈಪೋಟಿ. ಉತ್ಪಾದನೆಯಲ್ಲಿ ತೊಡಗಿರುವ ಮಾಲೀಕರೆಲ್ಲರೂ ಸ್ವತಂತ್ರರು. ದುಡಿಮೆಯವರಿಂದ ಉತ್ಪಾದನೆಯಾದ ಸರಕುಗಳನ್ನು ಮಾರುಕಟ್ಟೆಯಲ್ಲಿ ಬಿಕರಿಮಾಡಬೇಕು, ಯಾರ ಸರಕು ಇತರರ ಸರಕುಗಳಿಗಿಂತ ಕಡಿಮೆ ಬೆಲೆಯುಳ್ಳದ್ದೋ, ಅದು ಬೇಗನೆ ಬಿಕರಿ ಯಾಗುತ್ತದೆ. ಈ ಕಾರಣದಿಂದ ಲಾಭಕ್ಕೆ ಚ್ಯುತಿ ಬರದ ರೀತಿಯಲ್ಲಿ, ತಯಾರಿಸುವ ಸರಕುಗಳಿಗೆ ಹೆಚ್ಚು ಖರ್ಚಾಗದಂತೆ ಉತ್ಪಾದನೆಗೆ ತೊಡಗ ಬೇಕು. ಖರ್ಚನ್ನು ಕಡಿಮೆಮಾಡಿದಷ್ಟು ಲಾಭ ಹೆಚ್ಚು. ಪೈಪೋಟಿಯಲ್ಲಿ ತಯಾರಿಸಬೇಕು, ವಿಕ್ರಯಮಾಡಬೇಕು, ಶೀಘ್ರವಾಗಿ ವಿಕ್ರಯಮಾಡಿ ಆದಷ್ಟು ಲಾಭ ಪಡೆಯುವುದೇ ಉತ್ಪಾದನೆಯ ಗುರಿ. ಹೀಗಾಗಿ, ಸರಕು ಗಳ ಉಪಯೋಗ ಅಷ್ಟು ಪ್ರಾಮುಖ್ಯವಾದದ್ದಲ್ಲ: ಸರಕುಗಳು ಯಾವುದೇ ಆಗಲಿ, ಅವು ಮಾರುಕಟ್ಟೆಯಲ್ಲಿ ವಿಕ್ರಯಹೊಂದುತ್ತಿದ್ದರೆ ಅವುಗಳ ತಯಾರಿಕೆ ನಡೆಯುತ್ತದೆ, ಜನರಿಗೆ ತಾನು ಸುಲಭವಾದ ಮತ್ತು ಉತ್ತಮವಾದ ಸರಕುಗಳನ್ನು ತಯಾರಿಸುತ್ತಿದ್ದನೆಂಬುದನ್ನು ಸಿನೆಮಾ ನೋಟೀಸುಗಳು, ಜಾಹೀರಾತು, ಏಜೆಂಟ್ ಮತ್ತು ದಳ್ಳಾಳಿಗಳ ಮೂಲಕ ಬಹಿರಂಗಮಾಡಬೇಕು. ಒಂದು ವೇಳೆ, ಒಬ್ಬ ವ್ಯಕ್ತಿ ನಷ್ಟ ಹೊಂದಿ ಪೈಪೋಟಿಮಾಡಲು ಅಶಕ್ತನಾದರೆ ಅದು ಯಾರ ಜವಾಬ್ದಾರಿಯೂ ಅಲ್ಲ. ಆತನು ತನ್ನ ಉದ್ಯಮವನ್ನು ಮುಚ್ಚಿ ನೇಮಿಸಿಕೊಂಡಿದ್ದ ಕೂಲಿಯವರನ್ನು ವಜಾಮಾಡಿ, ಸುಮ್ಮನೆ ಕುಳಿತುಕೊಳ್ಳಲು ಹಕ್ಕಿದೆ, - ಸಂಕ್ಷಿಪ್ತವಾಗಿ, ಉತ್ಪಾದನಾ ಸಾಧನಗಳಲ್ಲಿ ಖಾಸಗಿ ಸ್ವಾಮ್ಯ, ಮಾರುಕಟ್ಟೆಯ ದೃಷ್ಟಿಯಿಂದ ಸರಕುಗಳ ಉತ್ಪಾದನೆ, ಕೂಲಿಗಾಗಿ ದುಡಿಮೆ,