ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ ಉತ್ಪಾದನಾ ಕ್ರಮವೇ (Mode of Production) ಮೂಲ ಕಾರಣ ವಾಗಿದೆ. ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳು (Means of Production) ಖಾಸಗೀ ಸ್ವಾಮ್ಯಕ್ಕೆ ಒಳಪಟ್ಟಿವೆ. ಅವುಗಳಿಂದ ಉತ್ಪಾದನೆಯಾಗುವ ಸರಕುಸಾಮಗ್ರಿಗಳು, ಲಾಭ ಎಲ್ಲವೂ ಬಂಡವಾಳಗಾರನಿಗೆ ಸೇರಿದುವು. (2 ನೇ ಚಿತ್ರ ನೋಡಿ). ಅವುಗಳ ಮೇಲೆ ಸಂಪೂರ್ಣ ಹತೋಟ ನ್ನು ಬಂಡವಾಳಗಾರನು ಹೊಂದಿದ್ದಾನೆ. ಯಾವ ರೀತಿಯಲ್ಲಾದರೂ ಅವನ್ನು ಉಪಯೋಗಿಸುವ ಹಕ್ಕು ಬಂಡವಾಳಗಾರನಿಗೆ ಇದೆ. ಆದರೆ ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆ ಒಂದೆಡೆಯಲ್ಲಿ ಸೇರಿ ದುಡಿಯುವ ಕಾರ್ಮಿಕರಿಂದ ನಡೆಯುತ್ತದೆ. ಉತ್ಪಾದನಾ ಸಾಧನ ಗಳು ಮತ್ತು ಅವುಗಳಿಂದ ಬರುವ ಉತ್ಪತ್ತಿ ಬಂಡವಾಳಗಾರನಿಗೆ ಸೇರಿದ ನಾದರೂ ಉತ್ಪಾದನೆ ಮಾತ್ರ ಸಾಮೂಹಿಕವಾಗಿ ಹತ್ತಾರು ಜನರಿಂದ ಮಾತ್ರ ಆಗಬೇಕಾಗಿದೆ, ಆದರೆ ಈ ದುಡಿಮೆಯವರಿಗೆ ಉತ್ಪಾದನಾ ಸಾಧನ ಗಳ ಮೇಲೆ ತಯಾರಾಗುವ ಸರಕುಸಾಮಗ್ರಿಗಳ ಮೇಲೆ ಮತ್ತು ಬರುವ ಲಾಭದಮೇಲೆ ಯಾವ ಹಕ್ಕಾಗಲೀ ಅಥವಾ ಹತೋಟ ಯಾಗಲೀ ಇಲ್ಲ; ಕೂಲಿಗೆ ಮಾತ್ರ ಬಾಧ್ಯರು, ಈ ದ್ವಯವೇ - ಸಾಮೂಹಿಕವಾಗಿ ನಡೆಯುವ ಉತ್ಪಾದನೆ, ಆದರೆ ಉತ್ಪಾದನೆಯ ಫಲದಮೇಲೆ ಇರುವ ಸ್ವಾಮ್ಯ ಮತ್ತು ವೈಯಕ್ತಿಕ ಅಪಹರಣ (Social character of the means of productoin and individual appropriation)- ಶೋಷಣೆಗೆ ಒಳಗಾದ ಕಾರ್ವಿ ಕರು ತಾವು ಉತ್ಪಾದನೆ ಮಾಡಿದ ವಸ್ತುಗಳನ್ನು ಕೊಂಡು ಜೀವಿಸಲು ಅಶಕ್ತರನ್ನಾಗಿ ಮಾಡಿದೆ. 1 ಜೊತೆಗೆ, ಬಂಡವಾಳಶಾಹಿ ವ್ಯವಸ್ಥೆ ತಂದೊಡ್ಡಿ ರುವ ಆರ್ಥಿಕ ಅಭದ್ರತೆ, ನಿರುದ್ಯೋಗ, ಆರ್ಥಿಕ ಏರಿಳಿತಗಳು ಮತ್ತು ಯುದ್ಧಗಳು ಕಾರ್ಮಿಕವರ್ಗದ ಜೀವನವನ್ನು ಪುಟದ ಚೆಂಡಿನಂತೆ ಮಾಡಿವೆ ಆದರೆ, ಕಾರ್ಮಿಕವರ್ಗಕ್ಕೆ ಶೋಷಣೆ ಅರಿವಾಗಿ, ಯಾತನೆಯನ್ನು ಸಹಿಸ ಲಾರದೆ, ಬಂಡವಾಳಶಾಹಿ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ. 1. ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆಯ ಸ್ವರೂಪವನ್ನು ನೆನಪಿನಲ್ಲಿರುವುದು ಅತ್ಯಗತ್ಯ. ಉದಾಹರಣೆಗೆ ಒಂದು ಹತ್ತಿ ಕಾರ್ಖಾನೆ