ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಜ್ಞಾನಿ ಸಮಾಜವಾದ ಯನ್ನು ತೆಗೆದುಕೊಳ್ಳೋಣ. ಇಲ್ಲಿ ಕಾರ್ಖಾನೆಯ ಕಟ್ಟಡ, ಯಂತ್ರಗಳು, ದಾಸ್ತಾನು ಮತ್ತು ಇತರ ಸಾಮಗ್ರಿ, ವಿಶೇಷಗಳು ಎಲ್ಲವೂ ಒಬ್ಬ ಧನಿಕನಿಗೆ (ಬಂಡವಾಳಗಾರ) ಅಥವ ಹಲವು ಪಾಲುದಾರರಿರುವ (ಷೇcಹೊಲ್ಲರ್) ಕಂಪ ನಿಗೋ ಸೇರಿದ್ದಾಗಿವೆ. ಬೇರೊಂದು ಮಾತಿನಲ್ಲಿ ಹೇಳುವುದಾದರೆ ಕಾರ್ಖಾನೆಯ ಸಾಮಗ್ರಿ, ವಿಶೇಷಗಳೆಲ್ಲವೂ ಖಾಸಗಿ ಸ್ವಾಮ್ಯಕ್ಕೆ ಒಳಪಟ್ಟಿದೆ. ಆದರೆ ಇವರಲ್ಲಿ ಯಾರೂ ಕಾರ್ಖಾನೆಯಲ್ಲಿರುವ ನೂರಾರು ಕಲಿಗಳಂತೆ ಕೆಲಸಮಾಡುವುದಿಲ್ಲ. ಮೇಲ್ವಿಚಾರಕರಾಗಿಯೊ ಅಥವ ಆನೇಕವೇಳೆ ಮೇಲ್ವಿಚಾರಣಾ ಕಲಸವನ್ನೂ ಸಹ ಸೇತನಕ್ಕಿರುವ ಬೇರೊಬ್ಬನಿಗೋ ವಹಿಸಿರುವುದೂ ಉಂಟು, ಈ ನೂರಾರು ಕೂಲಿಗಳು ಕೆಲಸಮಾಡಿ ಬಟ್ಟೆಯನ್ನು ತಯಾರಿಸುತ್ತಿದ್ದರೂ ಅವರಾರಿಗೂ ಕಾರ್ಖಾನೆಯು ಸೇರಿದ್ದಲ್ಲ; ಅವರು ಕೆಲಸಗಾರರು ಮಾತ್ರ; ಅವರು ಮಾಡುವ ಕೆಲಸಕ್ಕೆ ಕೂಲಿಯನ್ನು ಹೊಂದಲು ಮಾತ್ರ ಬಾಧ್ಯರು. ಹೀಗಾಗಿ, ಕಾರ್ಖಾನೆಯಲ್ಲಿ ತಯಾರಾಗುವ ಬಟ್ಟೆಯಲ್ಲಿ ಎರಡು ಅಂಶಗಳು ಜೊತೆಗೂಡಿವೆ. ಒಂದನೆಯದಾಗಿ, ಸಾಮೂಹಿಕ ಉತ್ಪಾದನೆ, ಮಾಲೀಕ ಅಥವ ಮಾಲೀಕರಿಗೆ ಕಾರ್ಖಾನೆ ಸೇರಿದ್ದಾದರೂ ಅವರೇ ಬಟ್ಟೆಯನ್ನು ತಯಾರಿಸಲು ಅಶಕ್ತರು. ನೂರಾರು ಜನ ಕೂಲಿಗಳ ಸಹಾಯ ಬೇಕೇ ಬೇಕು. ಇದರಿಂದಾಗಿ, ಬಟ್ಟೆಯ ಉತ್ಪಾದನೆ ನೂರಾರು ಜನರು ಒಂದೆಡೆ ಸೇರಿ, ದುಡಿದು ತಯಾರಿಸಿದ ವಸ್ತು ಆಗಿದೆ. ಎರಡನೆಯದಾಗಿ, ತಯಾರಾಗುವ ಬಟ್ಟಿ ನೂರಾರು ಜನರು ಒಂದೆಡೆ ಸರಿ ಸರಸ್ಪರ ಸಹಾಯದಿಂದ ತಯಾರಿಸಿದ ವಸ್ತುವಾದರೂ, ಅವರಲ್ಲಿ ಯಾರಿಗೂ ತಯಾರಾದ ಬಟ್ಟೆ ತನಗೆ ಸೇರಿದ್ದೆಂದು ಹೇಳಿ ಕೊಳ್ಳುವ ಹಕ್ಕು ಇಲ್ಲ, ಬಟ್ಟೆ ಯು ಮಾಲೀಕನಿಗೆ ಸೇರಿದ್ದಾಗಿದೆ. ಈ ಪರಿಣಾಮವಾಗಿ ಬಂಡವಾಳ ಆರ್ಥಿಕ ವ್ಯವಸ್ಥೆಯ ಆಗಮನದ ಆರಂಭ ದಿಂದ ಉತ್ಪಾದನಾ ಸ್ವರೂಪವೇ ಬದಲಾವಣೆ ಹೊಂದಿದೆ. ಒಂದನೆಯದಾಗಿ, ಬಂಡ ನಾಳಶಾಹಿ ವ್ಯವಸ್ಥೆ ಉತ್ಪಾದನೆಯಲ್ಲಿ ಒಂದು ಬಗೆಯ ಸಮಾಜೀಕರಣವನ್ನು ತಂದಿದೆ (Socialised Production), ಬಂಡವಾಳಗಾರನು ಲಾಭದಾಸೆಯಿಂದ ಉತ್ಪಾದನೆಯನ್ನು ಕೈಗೊಂಡಿದ್ದಾನೆ. ಇದಕ್ಕಾಗಿ ನೂರಾರು ಜನ ಕೂಲಿಯವರನ್ನು ನೇಮಿಸಿಕೊಂಡಿದ್ದಾನೆ. ಕೂಲಿಗಾಗಿ ತನ್ನ ದುಡಿಮೆಯನ್ನು ವಿಕ್ರಯಮಾಡುವ ಈ ನೂರಾರು ಜನರು ಒಂದೆಡಸೇರಿ ಸಾಮೂಹಿಕವಾಗಿ ದುಡಿಮೆಮಾಡುತ್ತಾ ಉತ್ಪಾದನೆಯನ್ನು ನಡೆಸುತ್ತಿದ್ದಾರೆ. ಆದರೆ ಈ ದುಡಿಮೆಗಾರರಿಗೆ ಉತ್ಪಾದನಾ ಸಾಧನಗಳ ಮೇಲೆ (ಕಾರ್ಖಾನೆ, ಯಂತ್ರಗಳು, ಮತ್ತು ಇತರ ಸಾಮಗ್ರಿಗಳು) ಯಾವ ಸಾಮ್ಯವೂ ಇಲ್ಲ; ಉತ್ಪಾದನಾ ಸಾಧನಗಳೆಲ್ಲವೂ ಮಾಲೀಕನಿಗೆ ಸೇರಿವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಯಾವ ಸಾಮ್ಮನನ್ನೂ ಹೊಂದಿರದ ನೂರಾರು ಜನ ಕೂಲಿಯವರು ಉತ್ಪಾದನೆಯನ್ನು ಕೈಗೊಂಡಿದ್ದಾರೆ; ಉತ್ಪಾದನೆ