ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೨ ವೈಜ್ಞಾನಿಕ ಸಮಾಜವಾದ ಯಾರೂ ಶೋಷಣೆಗೆ ಆವಾಸಸ್ಥಾನವಾದ ಆರ್ಥಿಕ ವ್ಯವಸ್ಥೆಯನ್ನು ಪ್ರಶ್ನಿ ಸಿರಲಿಲ್ಲ. ಕ್ರಾಂತಿಯ ನಂತರವೂ ಸಹ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವಿರುವ ಆರ್ಥಿಕವ್ಯವಸ್ಥೆಯ ಆಧಾರದಮೇಲೆ ಸಾಮಾಜಿಕ ಮತ್ತು ರಾಜಕೀಯ ವ್ಯವಹಾರ ನಡೆಯುವಂತಾಯಿತು. ಆದರೆ ಮಾರ್ಕ್ಸ್‌ವಾದದ ಧೈಯಗಳಿಂದ ಕೂಡಿದ ಕಾರ್ಮಿಕವರ್ಗದ ಪ್ರದೇಶ ರಾಜಕೀಯವನ್ನು ಕಲಕಿತು. ಸ್ವಾಮ್ಯದ ನಾಶವನ್ನು ಗುರಿಯನ್ನಾಗಿ ಉಳ್ಳ ಕಾರ್ಮಿಕ ವರ್ಗದ ಚಳವಳಿ ಸ್ವಾಮ್ಯವರ್ಗದ ಎದೆಯನ್ನೊಡೆಯಿತು ಸ್ವಾಮ್ಯವರ್ಗ ಕಾರ್ಮಿಕವರ್ಗದ ಚಳವಳಿಯ ವಿರೋಧಿಗಳಾದರು, ಅದುವರೆಗೂ ಕ್ರಾಂತಿ ಕಾರರು ಮತ್ತು ತೀವ್ರಗಾಮಿಗಳೆನಿಸಿಕೊಂಡಿದ್ದ ಸ್ವಾಮ್ಯವರ್ಗ ಮತ್ತು ಅದರ ಮುಖಂಡರು ಪ್ರತಿಗಾಮಿಗಳಾದರು (Reactionaries). ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನೂ ಮತ್ತು ಶೋಷಣೆಯನ್ನೂ ಉಳಿಸಿ ಕೊಳ್ಳಲು ಸ್ವಾಮ್ಯ ವರ್ಗ ಯತ್ನಿಸಿತು. ತಮ್ಮ ಅಧೀನದಲ್ಲಿದ್ದ ಸರ್ಕಾರ, ನ್ಯಾಯಾಲಯ, ಪೋಲೀಸ್ ಮತ್ತು ಸೈನ್ಯ-ರಾಜ್ಯಶಕಿ (State)ಇವುಗಳಲ್ಲಿ ಮರೆಹೊಕ್ಕರು, ಸ್ವಾಮ್ಯದ ರಕ್ಷಣೆ ರಾಜಕೀಯದ ಅಂತರಾಳ ವಾಯಿತು. ಸ್ವಾಮ್ಯದ ಪ್ರಶ್ನೆ ಬಂದಾಗಲೆಲ್ಲಾ ಅದನ್ನು ಮರೆಮಾಚಲು, ಅಥವಾ ಅನಿವಾರ್ಯವಾದರೆ ಆ ಪ್ರಶ್ನೆ ಎತ್ತಿದವರನ್ನು ಅತಿ ಕ್ರೂರವಾಗಿ ದಮನಮಾಡಲು ಸ್ವಾಮ್ಯವರ್ಗ ನಿಂತಿತು, 1848 ರಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿ ಉಂಟಾಯಿತು. ಇದು ಕಾರ್ಮಿಕ ಮುಂದಾಳತ್ವದಲ್ಲಿ ನಡೆಯಿತು. ಉತ್ಪಾದನಾ ಸಾಧನ ಗಳಲ್ಲಿ ಖಾಸಗೀ ಸ್ವಾಮ್ಯವನ್ನೂ ಮತ್ತು ಸ್ವಾಮ್ಯ ವರ್ಗದ ಆಡಳಿತವನ್ನೂ ಪ್ರಶ್ನಿಸಿ ಕ್ರಾಂತಿಯು ಆರಂಭವಾಯಿತು. ಆರ್ಥಿಕವಾಗಿ ಸ್ವಾಮ್ಯದ ನಿರ್ಮೂಲ ಕ್ರಾಂತಿಯ ಗುರಿಯಾಯಿತು. ಇದೇ ಸಂದರ್ಭದಲ್ಲಿ ಇಂಗ್ಲೆಂಡಿ ನಲ್ಲಿ ಚಾಲ್ಟಿಸ್ಟರ ' ಚಳವಳಿ ಎದ್ದಿತ್ತು. ಸ್ವಾಮ್ಯವರ್ಗ ತನ್ನ ಸ್ಥಾನಮಾನ ಗಳು ಅಪಾಯಕ್ಕೆ ಈಡಾಗುತ್ತಿರುವುದನ್ನು ಕಂಡಿತ್ತು. ಕಾರ್ಮಿಕವರ್ಗದ ಚಳವಳಿಯನ್ನು ದಮನಮಾಡುವುದು, ಕಾರ್ಮಿಕರ ಸಂಘಟನೆಗೆ ಭಂಗತರು ವುದು ಮತ್ತು ಕಾರ್ಮಿಕರ ಚಳವಳಿಯ ಧೈಯವನ್ನು ಅಲ್ಲಗಳೆಯುವುದು ಸ್ವಾಮ್ಯ ವರ್ಗದ ಮುಖ್ಯ ಗುರಿಯಾಯಿತು. ಆದರೆ ಏನು ಮಾಡಿದರೂ ಕಾರ್ಮಿಕವರ್ಗದ ಆರ್ಭಟವನ್ನು ಅಡಗಿಸಲು ಸಾಧ್ಯವಾಗಲಿಲ್ಲ. ಆರ್ಥಿಕ