ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Od ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ ವಾಗಿ ಸ್ವಾಮ್ಯದ ವಿನಾಶವನ್ನು ಕಾರ್ಮಿಕವರ್ಗ ಕೇಳಿತು, ಆದರೆ ಸ್ವಾಮ್ಯ ವರ್ಗ ಸ್ವಾಮ್ಯದ ವಿನಾಶಕ್ಕೆ ತಯಾರಿರಲಿಲ್ಲ. ಸ್ವಾಮ್ಯ ವಿನಾಶ ಹೊಂದುವ ವರೆಗೂ ಕಾರ್ಮಿಕವರ್ಗ ತನ್ನ ಚಳವಳಿಯನ್ನು ನಿಲ್ಲಿಸುವಂತಿರಲಿಲ್ಲ. ಇಂತಹ ಬಿಕ್ಕಟ್ಟಿನಲ್ಲಿ ಸ್ವಾಮ್ಯವರ್ಗ ತನ್ನ ಸ್ಥಾನ ಮಾನಗಳನ್ನು ಉಳಿಸಿ ಕೊಳ್ಳುವುದಕ್ಕೆ ರಾಜ್ಯ ಶಕ್ತಿ (State) ಯನ್ನು ಒಂದು ಅಸ್ತ್ರವಾಗಿ ಉಪ ಯೋಗಿಸಿಕೊಂಡು, ಕಾರ್ಮಿಕರಮೇಲೆ ದಬ್ಬಾಳಿಕೆಯನ್ನು ಹುಚ್ಚು ಹೊಳೆ ಯಂತೆ ಹರಿಸಿತು, ಇಷ್ಟಾದರೂ, ಕಾರ್ಮಿಕವರ್ಗದ ಚಳವಳಿ 1871 ರಲ್ಲಿ ಫ್ರಾನ್ಸ್ ವೇಶದಲ್ಲಿ ಅತಿ ಉಗ್ರರೂಪವನ್ನು ತಾಳಿತು, ಸ್ವಾಮ್ಯವರ್ಗದ ಸರ್ಕಾರ ಉರುಳಿತು, ಕಾರ್ಮಿಕ ಸರ್ಕಾರದ (Workers' Government ) ಸ್ಥಾಪನೆಯನ್ನು ಕಾರ್ಮಿಕರು ಘೋಷಿಸಿದರು, ಇತಿಹಾಸದಲ್ಲಿ ಇದು “ಪ್ಯಾರಿಸ್ ಕಮ್ಯೂನ್ ಎಂದು ಖ್ಯಾತಿಗೊಂಡಿದೆ. ಕೆಲವು ದಿನಗಳವರೆಗೆ ಕಾರ್ಮಿಕರು ಅಧಿಕಾರದಲ್ಲಿದ್ದು ಸ್ವಾಮ್ಯವರ್ಗದಿಂದ ಬಂದ ಪ್ರತಿಭಟನೆ ಮತ್ತು ಯುದ್ಧವನ್ನು ಸಾಹಸದಿಂದ ಎದುರಿಸಿದರು. ಆದರೆ ಕಾರ್ಮಿಕ ವರ್ಗಕ್ಕೆ ಅನುಭವ ಇರಲಿಲ್ಲ. ಕ್ರಾಂತಿಯೇ ಎಲ್ಲಸಮಸ್ಯೆಗಳಿಗೂ ಪರಿಹಾರ ವೆಂದು ಭಾವಿಸಿದರು ; ಮೋಸಹೋದರು, ತಮ್ಮ ಅಧಿಕಾರದ ಅವಧಿಯಲ್ಲಿ ಮತ್ತು ಮುಂದೂ ಸ್ವಾಮ್ಯ ವರ್ಗದಿಂದ ಬರುವ ಪ್ರತಿಭಟನೆಯನ್ನು ಮುರಿಯ ಲಿಕ್ಕೆ ರಾಜ್ಯ ಶಕ್ತಿಯ ಉಪಯೋಗ ಅಗತ್ಯವೆಂಬುದನ್ನು ಮರೆತರು ಕಾರ್ಮಿಕವರ್ಗದ ಸರ್ವಾಧಿಕಾರವನ್ನು ಘೋಷಿಸಲಿಲ್ಲ. ಕ್ರಾಂತಿಯ ಕಾಲದಲ್ಲಿ ನಡೆದ ಈ ಅವಿವೇಕ ಸ್ವಾಮ್ಯ ವರ್ಗಕ್ಕೆ ಸುಸಮಯವಾಯಿತು, ಸ್ವಾಮ್ಯ ವರ್ಗ ಅತಿಸುಲಭವಾಗಿ ಕಾರ್ಮಿಕರನ್ನು ಸದೆ ಬಡಿಯಿತ್ತು, ಮತ್ತು ಮತ್ತೆ ರಾಜ್ಯ ಶಕ್ತಿಯನ್ನು ಗಳಿಸಿಕೊಂಡು ತನ್ನ ಅಧಿಕಾರವನ್ನು ಸ್ಥಾಪಿ ಸಿತು. ಕ್ರಾಂತಿ ಅಪಜಯಹೊಂದಿತು. * ಫ್ರಾನ್ಸ್ ದೇಶದಲ್ಲಿ ಕಾರ್ಮಿಕವರ್ಗ ನಡೆಸಿದ ಕ್ರಾಂತಿಗಳು ಅತ್ಯಂತ ಹಿರಿಯ ಪ್ರಮಾಣದವು. ಬಂಡವಾಳ ಆರ್ಥಿಕವ್ಯವಸ್ಥೆ ಸ್ಥಿರವಾದದ್ದು, ಇನ್ನು ಮುಂದೆ ಇದರಲ್ಲಿ ಬದಲಾವಣೆಗಳೇ ಸಾಧ್ಯವಿಲ್ಲ ಎಂಬ ಭ್ರಮೆಯನ್ನು ಫ್ರಾನ್ಸ್ ದೇಶದ ಕ್ರಾಂತಿಗಳು ಮೂಲೆಗೊತ್ತಿದವು. ಇದೇ ತೆರನಾದ ಕ್ರಾಂತಿಗಳು ಯೂರೋಪ್ ಖಂಡದ ಇತರ ದೇಶಗಳಲ್ಲೂ ಸಹ ಸಣ್ಣ ಪುಟ್ಟ