ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೪ ವೈಜ್ಞಾನಿಕ ಸಮಾಜವಾದ ಪ್ರಮಾಣದಲ್ಲಿ ಉದ್ಭವಿಸಿದವು. ಕಾರಣಾಂತರಗಳಿಂದ ಇಂಗ್ಲೆಂಡ್ ದೇಶದಲ್ಲಿ ಕಾರ್ಮಿಕರ ಚಳವಳಿ ಉಗ್ರರೂಪವನ್ನು ತಾಳಲಿಲ್ಲ. ಮುಖ್ಯವಾಗಿ ಕಾರ್ಮಿಕರ ಚಳವಳಿಯ ಉದ್ಯೋಗವನ್ನು ಆರಿಸಲು ಇಂಗ್ಲೆಂಡ್ ದೇಶದಲ್ಲಿ ಬಂಡವಾಳ ಆರ್ಥಿಕವ್ಯವಸ್ಥೆ ಕಲ್ಪಿಸಿಕೊಂಡಿದ್ದ ವಸಾಹತುಗಳು ತುಂಬಾ ಸಹಾಯಕ್ಕೆ ಬಂದವು. ವಸಾಹತು ಜನರ ಶೋಷಣೆಯಿಂದ ಅಪಾರಸಂಸತ್ತು ಬಂಡವಾಳ ವರ್ಗದ ಕೈಸೇರಿತು, ಈ ಅಧಿಕಸಂಸತ್ತಿನ ಬಲದಿಂದ ಬಂಡವಾಳವರ್ಗ ಸುಧಾರಣೆಯನ್ನು ಕೈಗೊಂಡು ಕಾರ್ಮಿಕರ ಬೇಡಿಕೆಗಳಲ್ಲಿ ಕೆಲವನ್ನು ತೃಪ್ತಿ ಪಡಿಸಿತು. ಸಣ್ಣ ಪುಟ್ಟ ಚೂರುಗಳಂತೆ ಬಿದ್ದ ಸುಧಾರಣೆಗಳು ಹಲವು ಕಾರ್ಮಿಕವರ್ಗದ ಮುಖಂಡರನ್ನು ದಾರಿ ತಪ್ಪುವಂತೆ ಮಾಡಿದವು. ಅವರು ಬಂಡವಾಳಶಾಹಿ ವ್ಯವಸ್ಥೆ ಯ ಹಿಂಬಾಲಕರಾಗಿ ಕಾರ್ಮಿಕವರ್ಗದ ಚಳವಳಿ ಯನ್ನು ಹಿಂದೆಳೆದರು. ಇಂಗ್ಲಿಷ್ ಕಾರ್ಮಿಕ ಮುಂದಾಳುಗಳು ವಸಾಹತುಗಳಲ್ಲಿ ರುವ ಜನರ ಸುಲಿಗೆಯನ್ನು ಕಣ್ಣಾರೆ ಸಹಿಸಿದರು. ವಸಾಹತುಗಳ ಲೂಟಿಯಲ್ಲಿ ಭಾಗಿಗಳಾದರು. ಬಂಡವಾಳವರ್ಗ ಆಗಿಂದಾಗ್ಗೆ ಎಸೆಯುವ ತುತ್ತುಗಳಿಗೆ ಕೈಚಾಚಿದರು. ಕಾರ್ಮಿಕವರ್ಗದ ಧೈಯವನ್ನು ಧೂಳಿಪಟಮಾಡಿದರು. 1 ಜರ್ಮನಿ, ಇಟಲಿ ಮತ್ತು ರಷ್ಯಾ ದೇಶಗಳಲ್ಲಿ ನಡೆದ ಕಾರ್ಮಿಕರ ಚಳವಳಿ ಬೇರೊಂದು ರೂಪವನ್ನು ತಾಳಿತ್ತು, ಈ ದೇಶಗಳು ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ಹಗೆ ಕೈಗಾರಿಕೆಯಲ್ಲಿ ಬಂಡವಾಳಶಾಹಿ ಉದ್ಯಮದಲ್ಲೂ ಅಷ್ಟು ಮುಂದುವರೆದಿರಲಿಲ್ಲ, ಕೈಗಾರಿಕಾ ಕಾರ್ಮಿಕವರ್ಗ (1) ಇಂಗ್ಲೆಂಡ್ ದೇಶದಲ್ಲಿ ವಾಕ್ ವಾದ ಬೇರೂರದಿರುವುದಕ್ಕೂ, ಇಂಗ್ಲೀಷ್ ಲೇಬರ್ ಪಕ್ಷ ಕ್ರಾಂತಿಕಾರಿಯಾಗದಿದ್ದಕ್ಕೂ, ಸಣ್ಣ ಪುಟ್ಟ ಬೇಡಿಕೆ ಗಳಲ್ಲೇ ತೃಪ್ತಿ ಹೊಂದುವ ನೀತಿಯನ್ನು ಅನುಸರಿಸಿದ್ದಕ್ಕೂ ಮತ್ತು ಪಾಲಿಯ ಮಟರೀ ಪ್ರಜಾಸತ್ತೆಯ ಮೂಲಕ ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಕ್ಕೂ ವಸಾಹತುಗಳು ಮುಖ್ಯವಾಗಿ ನೆರವಾದವು. ಹಿಂದೆ ಗ್ರೀಕ್ ಮತ್ತು ರೋಮನ್ ಪ್ರಜಾಸತ್ತೆಗಳ ಪ್ರಾಜ್ವಲ್ಯತೆಗೆ ಗುಲಾಮರ ದುಡಿಮೆ ಕಾರಣವಾಗಿದ್ದರೆ, ಇಂಗ್ಲೀಷ್ ಪ್ರಜಾಸತ್ತೆಯ ಪ್ರಾಬಲ್ಯತೆಗೆ ವಸಾಹತುಗಳು ಬೆನ್ನು ಮೂಳೆಯಾಗಿ ನಿಂತವು. ಪ್ರತಿಯಾಗಿ, ಅಷ್ಟೊಂದು ವಸಾಹತುಗಳ ಸೌಕರ್ಯವಿಲ್ಲದೆ ಆರ್ಥಿಕ ಕೊಭೆಗೆ ಒಳಗಾಗಿರುವ ದೇಶಗಳಲ್ಲಿನ ರಾಜಕೀಯವನ್ನು ಗಮನಿಸುವುದು ಆವಶ್ಯಕವಾಗಿದೆ,