ಈ ಪುಟವನ್ನು ಪರಿಶೀಲಿಸಲಾಗಿದೆ

 16 ಕರ್ಣಾಟಕ ಕವಿಚರಿತೆ. [15 ನೆಯ

ಸುಕರಂ ತಾನೆನೆ ಪೂಜ್ಯಪಾದಮುನಿಗಳ್ ಮುಂ ಪೇವ್ದಿ ಕಲ್ಯಾಣಕಾ |

ರಕಮಂ ಬಾಹಟಸಿದ್ದ ಸಾರಚಾರಕಾದ್ಯುತ್ಕಷ್ಟಮಂ ಸದ್ದು ಣಾ ||

ಧಿಕಮೆಂ ವರ್ಜಿ ತಮದ್ಯ ಮಾಂಸವಧುವಂ ಕರ್ಣಾಟದಿಂ ಲೋಕರ |

ಕ್ಷಕಮಂ ಚಿತ್ರಮದಾಗೆ ಚಿತ್ರಕವಿ ಸೋಮಂ ಪೇಟ್ದಿನಿಂಬ್ತುಯಿಂ ||

ಗ್ರಂಥಾವತಾರದಲ್ಲಿ ಚಂದ್ರನಾಥಸ್ತುತಿ ಇದೆ. ಬಳಿಕ ಕವಿ ಸಿದ್ದಾದಿ

ಗಳು1, ಸರಸ್ವತಿ, ಮಾಧವೇಂದು, ಸೈದ್ದಾಂತಿಕಚಕ್ರವರ್ತಿ ಅಭಯಚಂದ್ರ'

ಕನಕಚಂದ್ರಪಂಡಿತದೇವ ಇವರುಗಳನ್ನು ಹೊಗಳಿದ್ದಾನೆ, ಅಧ್ಯಾಯಾಂ

ತ್ಯದಲ್ಲಿ----- ಇದು ವಿಚಿತ್ರ ಕವಿಜಗದ್ದಳಸೋಮನಾಥವಿರಚಿತಮಪ್ಪ ಕರ್ಣಾ

ಟಕಕಲ್ಯಾಣಕಾರಕದೊಳ-ಎಂದಿದೆ.

                     ಕೀರ್ತಿವರ್ಮನ (ಸು. 1125) ಗೋವೈದ್ಯವನ್ನು ಬಿಟ್ಟರೆ ಇದೇ

ನಮಗೆ ದೊರೆತಿರುವ ಕನ್ನಡ ವೈದ್ಯಗ್ರಂಧಗಳಲ್ಲಿ ಪುರಾತನವಾದುದು.

ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ--

                                ಜ್ವರೋತ್ಪತ್ತಿ

ಮಲಸಂಗ್ರಹದಿಂದುದರಾ | ನಲನಟುವಿಂದಾಮಚಲನೆಯಿಂ ಜ್ವರಮೊಗೆಗುಂ |

ಕೆಲರಾ ತ್ರಿಪುರಧ್ವಂಸಿಯ | ಲಲಾವಲೋಚನದಿನೊಗೆದುದೆಂಬರ್‌ ಜ್ವರಮಂ ||

                                      ಚಿಕಿತ್ಸೆ

ಜ್ವರದಾದಿಯೊಳುಪವಾಸಂ | ಜ್ವರ ಮಧ್ಯಮದಲ್ಲಿ ಗಂಜಿ ಪೇಟ್ಟಿ ಕಷಾಯಂ |

ಜ್ವರಪಾಕದೊಳಸ್ತಮಿತ | ಜ್ವರದೊಳ್ ಮಲಹರಣಮಿನಿತಿನಾರೋಗ್ಯಕರಂ ||

                               ಪಿತ್ತಜ್ವರಕ್ಕೆ ಕಲ್ಕ 

ಸಿರಿಕಂಡಂ ಬಾಳಂ ಶ | ರ್ಕರೆ ಬೇವಿನ ಕಡ್ಡಿ ಭದ್ರಮುಸ್ತೆ ದ್ರಾಕ್ಷಂ |

ಬೆರಸರೆದು ಕುಡಿಯಲೆಳೆವೊದೊಡೆ | ಪರಿಹರಿಸುಗುಮೆಯ್ದೆ ಪಿತ್ತಜನಿತಜ್ವರಮಂ ||

                            ವಿಷಮಜ್ವರಕ್ಕೆ ವಸ್ಯ 

ಪೊಸಚಿಕ್ಕಣಿಕೆಯ ಪುಲ್ಲಂ | ವೊಸಬೆಳ್ಳುಳ್ಳಿಯ ರಸಂಗಳಂ ತಳದಿಂದಂ |

ಪೊಸೆದಾಗಳೆ ನಸ್ಯ೦ಗೆಯೆ | ಬಸವಲ್ಲೆ ನಿಪಾ ಜ್ವರಂಗಳಂ ಮಸುಳಿಸುಗುಂ ||

1 ಸಿದ್ಧರು ,ಆಚ್ಯಾರರು, ಉಪಾಧ್ಯಾಯರು, ಸಾಧುಗಳು 2. Vol. 1, 106,