ಶತಮಾನಕ್ಕೆ ಹಿಂದೆ] ಜಗದ್ದಳ ಸೋಮನಾಧ 16
ಜಗದ್ದಳ ಸೋಮನಾಥ. ಸು. 1150.
ಇವನು ಕರ್ಣಾಟಕ ಕಲ್ಯಾಣಕಾರಕವನ್ನು ಬರೆದಿದ್ದಾನೆ. ಈತನು
ಜೈನಕವಿ. ಇವನಿಗೆ ವಿಚಿತ್ರ ಕವಿ ಎಂಬ ಬಿರುದಿದ್ದಂತೆ ತಿಳಿಯುತ್ತದೆ.
ತನ್ನ ಗ್ರಂಥವನ್ನು ಸುಮನೋಬಾಣಕವಿಯೂ ಅಭಯಚಂದ್ರಸಿದ್ಧಾಂತಿ
ಗಳೂ ತಿದ್ದಿದಂತೆ
ಸುಮನೋಬಾಣಕವೀಂದ್ರ | ಪ್ರಮುಖಂಬೆರಸಭಯಚಂದ್ರ ಸಿದ್ದಾಂತಿಗಳು |
ತ್ತಮಮಾಗೆ ತಿರ್ದಿದೀಕೃತಿ| ಗಮರ್ದುದು ಸೌಭಾಗ್ಯದೊಂದಿದಾಯುಂ
ಶ್ರೀಯುಂ||
ಎಂಬ ಪದ್ಯದಲ್ಲಿ ಹೇಳುವುದರಿಂದ ಕವಿ ಸುಮನೋಬಾಣನ ಸಮ
ಕಾಲದವನು ಎಂಬುದು ವ್ಯಕ್ತವಾಗುತ್ತದೆ. ಸುಮನೋಬಾಣನು ಸುಮಾರು
1150ರಲ್ಲಿ ಇದ್ದುದಾಗಿ ತಿಳಿವುದರಿಂದ I ಕವಿಯ ಕಾಲವೂ ಅದೇ ಆಗಿರ
ಬೇಕು. ಅಲ್ಲದೆ ಇವನು ಸ್ತುತಿಸುವ ಮಾಧವೇಂದು 1131 ರಲ್ಲಿ ಗತಿಸಿದ
ಗಂಗರಾಜನ ಮಗನಾದ ಬೊಪ್ಪನ ಗುರುವಾಗಿದ್ದಂತೆ ಸುಮಾರು 1135ರಲ್ಲಿ
ಬರೆದ ಶ್ರವಣಬೆಳೋಳದ 144ನೆಯ ಶಾಸನದಿಂದ ತಿಳಿವುದರಿಂದ ಈ ವಿಷ
ಯವೂ ನಾವು ಕವಿಗೆ ಕೊಟ್ಟಿರುವ ಕಾಲವನ್ನು ದೃಢಪಡಿಸುತ್ತದೆ.
ಇವನ ಗ್ರಂಧ
ಕರ್ಣಾಟಕ ಕಲ್ಯಾಣಕಾರಕ
ಇದು ವೈದ್ಯಗ್ರಂಥ ; ಪೂಜ್ಯಪಾದಕೃತಕಲ್ಯಾಣಕಾರಕದ ಭಾಷಾಂ
ತರವು. ನಮಗೆ ದೊರೆತ ಅಸಮಗ್ರಪ್ರತಿಯಲ್ಲಿ (1) ಪೀಠಿಕಾಪ್ರಕರಣ,
(2) ಪರಿಭಾಪಾಪ್ರಕರಣ, (3) ಪ್ರೊಡಶಜ್ವರನಿದಾನಚಿಕಿತ್ಸಾ ನಿರೂಪಣ,
(4) ಅತಿಸಾರಗ್ರಹಣೀನಿದಾನಚಿಕಿತ್ಸಾ ನಿರೂಪಣ, (5) ರಕ್ತಪಿತ್ತನಿದಾ
ನಚಿಕಿತ್ಸಾ ನಿರೂಪಣ, (6) ಕ್ಷಯನಿದಾನಚಿಕಿತ್ಸಾ ನಿರೂಪಣ, (7) ಉದರ
ರೋಗನಿದಾನಚಿಕಿತ್ಸಾ ನಿರೂಪಣ, (8) ಗುಲ್ಮನಿದಾನಚಿಕಿತ್ಸಾ ನಿರೂಪಣ
ಎಂಬ 8 ಅಧ್ಯಾಯಗಳು ಮಾತ್ರ ಇವೆ. ಬಾಹಟ, ಸಿದ್ಧಸಾರ, ಚರಕ
ಎಂಬ ವೈದ್ಯಗ್ರಂಥಗಳಿಗಿಂತ ಪೂಜ್ಯಪಾದನ ಕಲ್ಯಾಣಕಾರಕವು ಉತ್ಕೃ
ಷ್ವವಾದುದೆಂದೂ ಅದರಲ್ಲಿ ಹೇಳಿರುವ ಚಿಕಿತ್ಸೆ ಮದ್ಯಮಾಂಸವಧುವರ್ಜಿ
ತವೆಂದೂ ಈ ಪದ್ಯದಲ್ಲಿ ಹೇಳುತ್ತಾನೆ
1 Vol. 1, 135